ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಪತಿ ಹರಿ ವಿಠಲ | ಪೊರೆಯ ಬೇಕಿವನಾ ಪ ಕಾಣೆ ನೀನನ್ಯರನು | ಕ್ಷೋಣಿಯೊಳು ಹರಿಯೇ ಅ.ಪ. ಕೈಶೋರವಯನಿವನು | ಆಶೆಗೈವನು ದೀಕ್ಷೆದಾಸತ್ವದಲಿ ಮಾಳ್ಪ | ವಿಶ್ವಾಸಗಳನೂ |ಕೇಶವನೆ ತೈಜಸೀ | ವೇಷದಲಿ ಗುರುರೂಪಲೇಸಾಗಿ ತೋರಿಸುತ | ಆಶಿಸುತ್ತಿಹನೊ 1 ಗುರು ಹಿರಿಯರ ಸೇವೆ | ದೊರಕಿಸುತ ಇವನೀಗೆಪರತಮಜ್ಞಾನಾದಿ | ವರಸು ಸಾಧನವಾತರಳಂಗೆ ವದಗಿಸುತ | ಹರಿಯೆ ಉದ್ಧರಿಸಿವನಕರುಣಾ ಪಯೋನಿಧಿಯೆ | ಮರುತಾಂತರಾತ್ಮಾ 2 ಕಷ್ಟಗಳ ಪರಿಹರಿಸಿ | ಇಷ್ಟಗಳ ಸಲಿಸುತ್ತಕೃಷ್ಣ ಮೂರುತಿ ಹರಿಯೆ | ಕಾಪಾಡೊ ಇವನಾ |ದುಷ್ಠ ಭಕುತನ ಗೈದು | ಶಿಷ್ಟೇಷ್ಟರಲಿ ಇಟ್ಟುಶ್ರೇಷ್ಠ ಸಾಧನಗೈಸೊ | ಜಿಷ್ಣು ಸಖ ದೇವಾ 3 ಕಲಿಯುಗದಿ ಸಾಧನವು | ಸುಲಭವೆಂದೆನುತಲಲಿತ ವಚನಗಳಿಹವು | ಜಲಜಾಕ್ಷ ಹರಿಯೇ |ಕಲಿಮಲಾಪಹ ನಿನ್ನ | ಸ್ಮರಣೆಯನು ಒದಗಿಸುತಬಾಲಕನ ಸಲಹೆಂದು | ಭಿನ್ನವಿಪೆ ಸತತಾ 4 ನಿತ್ಯ ತವ ಲೀಲೆಗಳ | ಸ್ತುತಿಯನೇಗೈಸಿಕೃತ್ಸನೆಂದೆನಿಸಿವನ | ಸತ್ಯಾತ್ಮ ಹರಿಯೇ |ಸ್ತುತ್ಯ ಗುರು ಗೋವಿಂದ | ವಿಠಲ ಕರುಣಾಳುವೇಭೃತ್ಯನ್ನ ಪೊರೆಯೆಂದು | ಅರ್ಥಿಸುವೆ ನಿನಗೇ 5
--------------
ಗುರುಗೋವಿಂದವಿಠಲರು
ಭೂತರಾಜರು ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ ಪ ಭಾವಿರುದ್ರ ಜೈ ಜೈ ಜೈ ಅ.ಪ. ವಿನುತ ಗುರುವಿನಲ್ಲಿ ಮುನಿಗೆ ಜೈ ಜೈ ಜೈ 1 ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ | ಬೊಮ್ಮರಕ್ಕಸ ಜೈ ಜೈ ಜೈ 2 ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ | ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ3 ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ4 ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ | ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ |5 ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ | ಸುಖದಿ ಬಾಳೆಂದು6 ಗಾತ್ರ ಕೆಂಪು ನೇತ್ರ | ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ 7 ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು | ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ 8 ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ 9 ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ10 ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ11 ಭಂಗ ಗೈದು ನಿಂತೆ ಅಲ್ಲ ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ12 ಕುಣಿದು ಮುದದಿ ಭಜಿಪೆ ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ13 ವೈರಿ ವೃಂದ ಮೋದ ಕೊಡಿಸು ತಿರ್ಪೆಭೂಪ |ಜೈ14 ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ ಅಳಿಯೆ ಸಿಗದು ಜೈ 15 ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ | ಇಂದು ಉಂಬೆ ದಿವ್ಯ ಪದವಿ16 ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ | ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ17 ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ18 ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು | ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ19 ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ20 ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ | ನಲಿವ ಜೈ ಜೈ ಜೈ 21
--------------
ಕೃಷ್ಣವಿಠಲದಾಸರು
ನಿಂದಕರಿರಬೇಕಿರಬೇಕುಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯ ನಿಂದಕರುವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮಪೊಂದಿಗ ಪುಣ್ಯವನ್ನೆಯ್ಯುವರಯ್ಯ 1ದುಷ್ಠ ಜನರು ಈ ಸೃಷ್ಟಿಯೊಳಿದ್ದರೆಶಿಷ್ಟ ಜನರಿಗೆಲ್ಲ ಕೀರ್ತಿಗಳೂಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳುಇಷ್ಟೇ ವರವನು ಬೇಡುವೆನಯ್ಯ 2ದುರುಳ ಜನಂಗಳು ಚಿರಕಾಲ ಇರುವಂತೆಕರವ ಮುಗಿದುವರ ಬೇಡುವೆನುಪರಿಪರಿ ತಮಾಸಿಗೆ ಗುರಿಯಿಲ್ಲದೆಪರಮದಯಾನಿಧಿ ಪುರಂದರವಿಠಲ3
--------------
ಪುರಂದರದಾಸರು