ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ ಪ ದುಷ್ಟಸಂಸಾರ ಬಹುಕಷ್ಟವಯ್ಯ ಇದ ರಟ್ಟೊಳಿಗಳ ತಾಳಲಾರೆನಯ್ಯ ಆರೆನಿದರ ಕೋಟಿಲೆಗಳಾರೆನಯ್ಯ ಪಾದ ಸೇರಿಸೈಯ್ಯ 1 ಕಾಮಕ್ರೋಧ ಲೋಭಮೋಹ ಬಿಡಿಸಯ್ಯ ಮದಮಾತ್ಸರ್ಯವೆಂಬ ಕಾಟ ನೀನೊತ್ತಿಸಯ್ಯ ಪಾದ ಹೊಂದಿಸಯ್ಯ ಸರ್ವಬಂಧು [ನೀ] ಎನ್ನ ಜಿಹ್ವೆಯಲಿ ನೆಲೆಸಯ್ಯ 2 ಆಶ ಪಾಶಕ್ಲೇಶವೆಲ್ಲ ನಾಶ ಮಾಡಿಸಯ್ಯ ಶ್ರೀಶ ನಿನ್ನ ದಾಸರಲ್ಲಿ ಸೇರಿಸಯ್ಯ ವಾಸುಕಿಶಯನ ಭವದಿ ನೊಂದೆನಯ್ಯ ಸ ರ್ವೇಶಬಂಧು ಎನ್ನನುದ್ಧರಿಸಯ್ಯ 3 ಪುತ್ರಮಿತ್ರಬಂಧುವರ್ಗದಿ ಬಿದ್ದಿಹೆನಯ್ಯ ಅ ನಿತ್ಯಮೋಹದಲ್ಲಿ ಮುಳುಗಿ ಪೋದೆನಯ್ಯ ವ್ಯರ್ಥನಾಗಿ ಕಾಲವನ್ನು ಕಳೆದೆನಯ್ಯ ಎನ್ನ ಮರಣ ಕಾಲದಿ ನಿಮ್ಮ ಸ್ಮರಣೆ ಕರುಣಿಸಯ್ಯ 4 ಜನನ ಮರಣವೆಂಬೊ ಜಾಡ್ಯ ಕ್ರೂರವಯ್ಯ ಇದರ ವಿಧವನರಿತು ವೈದ್ಯ ಮಾಳ್ವರ ಕಾಣೆನಯ್ಯ ಬ್ರಹ್ಮಾದಿ ದೇವತೆಗಳೂ ಅರಿಯರಯ್ಯ ಧನ್ವಂತ್ರಿರೂಪ ಶ್ರೀನಿವಾಸ ರಕ್ಷಿಸಯ್ಯ 5 ದೇಹವೆಲ್ಲ ಗಳಿತವಾಗಿ ಪೋಯಿತಯ್ಯ ಇಂದ್ರೀಯ ಸ್ವಾಧೀನದಲ್ಲಿ ನಿಲ್ಲದಯ್ಯ ವಿಷಯದಲ್ಲಿ ಮನಸು ಬಹಳ ಹರಿವುದಯ್ಯ ಲಕ್ಷ್ಮೀಪತಿಯೆ ನಿಮ್ಮ ಭಕ್ತಿಯಿತ್ತು ಸಲಹಯ್ಯ 6 ದೀನನಾಗಿ ನಿನ್ನ ಚರಣ ಸೇರಿದೆನಯ್ಯ ಜ್ಞಾನವೈರಾಗ್ಯವಿತ್ತು ಪಾಲಿಸೆನ್ನಯ್ಯ ಮರಳಿ ಜನ್ಮ ಬಾರದಂತೆ ಮಾಡಬೇಕಯ್ಯಾ ಗರುಡಗ ಮನ ವೆಂಕಟರಮಣ ಭವಸಂಕಟ ಬಿಡಿಸಯ್ಯ 7
--------------
ಯದುಗಿರಿಯಮ್ಮ
ಜಂಜಾಟ ತೊಲಗಿಸೈ ದುಷ್ಟಸಂಸಾರದ ಪ ಜಂಜಾಟ ತೊಲಗಿಸೈ ಕಂಜನಾಭನೆ ಕರಿರಾಜವರದ ಹರಿ ಅ.ಪ ಚಲಿಸುವ ಎನ್ನ ಮನದ್ಹಲುಬಾಟ ಕಡೆಹಾಯ್ಸಿ ನಿಲಿಸು ತವಚರಣದಿ ಚಲಿಸದಂತನುದಿನ 1 ಐಹಿಕಸುಖ ಮೋಹಿಸಿ ಬಹುಭ್ರಾಂತಿಯಿಂ ಬಳಲು ತಿಹ್ಯ ಎನ್ನ ಚಿತ್ತಕ್ಕೆ ಸಹನಶೀಲತೆ ನೀಡಿ2 ನೀನೆಗತಿ ಎನಗಿನ್ನು ನಾನಾದೈವನರಿಯೆ ಜ್ಞಾನದಿಂ ಪಾಲಿಸೆನ್ನ ಪ್ರಾಣಪತಿ ಶ್ರೀರಾಮ 3
--------------
ರಾಮದಾಸರು
ಮಾರಜನಕ ನಂಬಿದೆ ನಿನ್ನ ಪಾರುಮಾಡೆನ್ನ ಪರಮಪಾವನ್ನ ಪ ಮೀರಿತು ಭವಬಾಧೆ ಸೈರಿಸೆನಿನ್ನು ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ ದುಷ್ಟಸಂಸಾರಸಾಗರದೊಳು ಕೆಟ್ಟ ನಿಂದೆಗಳೆಂಬ ಘನತೆರಿಗಳು ಹುಟ್ಟಿ ಏಳುತಲಿಹವು ಸಾಲಿಗೆ ಸಾಲು ಬೆಟ್ಟದಂತೆ ಮಹ ಭೀಕರದೊಳು ಎಷ್ಟಂತ ಈಸಬೇಕಿನ್ನಿದರೊಳು ಸೃಷ್ಟಿಕರ್ತ ನೀನೆ ಮೊರೆ ದಯದೊಳು 1 ವಾಸನ್ಹಿಡಿದು ಸೆಳೆದುನುಂಗ್ವವೈದಾರು ಮೋಸ ಜಲಚರಗಳ ಮೀರಿದ ತೊಡರು ಆಸೆಯೆಂಬ ಮಹ ಸೆಳವಿನ ಜೋರು ಸುಳಿ ಮಡುವು ಸಾವಿರಾರು ಈಸುವುದು ಮುಂದಕ್ಕೆ ಅಗದು ಮಾರು ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2 ಇಂತು ಭವದ ಸಾಗರವನ್ನು ಎಂತು ದಾಟಿ ನಾ ಪಾರಾಗುವೆನು ನಿಂತುನೋಡಲು ಅಂಜಿ ಮನಸಿಗೆ ಇನ್ನು ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು ಚಿಂತಾಯಕ ಭಕ್ತ ತೀವ್ರಬಂದಿನ್ನು ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3
--------------
ರಾಮದಾಸರು