ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ ಅಮಂಗಜನಪಡದಾ ಮಂಗಳಾತ್ಮಗ ಪ ಪೊಂಬ್ಹರಿವಾಣದೊಳಗ | ಕೆಂಬ್ಹವಳದಾರತಿ ನಿಲಿಸಿ ಮುಂಬ್ಹರಿವರನ್ನ ಜ್ಯೋತಿಯಲಿ ಬೆಳಗಿರೆ 1 ಉತ್ತಮ ಪುರುಷ ಶ್ರೀ ಹರಿಗೆ ಮತ್ತ ಜಗನ್ಮಾತೆ ಸಿರಿಗೆ | ಮುತ್ತಿನ ಶಾಶೆಯನಿಟ್ಟು ಬೆಳಗಿರೆ 2 ಜಯ ಜಯ ಶಿಷ್ಟ ರಕ್ಷಕನೇ ಜಯ ಜಯ ದುಷ್ಟಶಿಕ್ಷಕನೇ | ಜಯವೆಂದು ಬೆಳಗಿ ಮಹಿಪತಿ ಸುತಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಕ್ಷ್ಮೀರಮಣ ಮರೆಯ ಹೊಕ್ಕೆ ರಕ್ಷಿಸೈ ಪಾಂಡುಪಕ್ಷನೆ ಪ ಪಕ್ಷಿವಾಹನ ದುಷ್ಟಶಿಕ್ಷ ಮೋಕ್ಷದಾಯಕ ಶಿಷ್ಟರಕ್ಷ ಅ.ಪ ತರಳ ಧ್ರುವನ ಪೊರೆದೆಯೆಲೊ ಕರಿಮೊರೆಯ ಕಾಯ್ದಯ್ಯ ಕರುಣದಿ ಕುರುಪ ಸಭೆಯಲಿ ದ್ರೌಪದಿ ಮೊರೆಯನಿಡಲಾಕೆಮಾನವ ಕಾಯ್ದಿ 1 ನರಗೆ ಸಹಯನಾಗಿ ಸಾರ ಧರೆಯ ಗೆಲಿಸಿದಿ ನಿರುತದಿ ಕರವ ಪಿಡಿದಿ ಪರಮ ಪ್ರೇಮದಿ ಒರೆದೆಲೊ 2 ಇಂದು ಎನಗೆ ಸಂಧಿಸಿದ ಮಹ ಬಂಧನವ ನಿವಾರಿಸೈ ಪಾದ ನಂಬಿದೆ ಕಂದನನು ಪೊರೆ ಶ್ರೀರಾಮ3
--------------
ರಾಮದಾಸರು
ಶಂಭೋಶಿವಹರ ತ್ರಿಯಂಬಕ ಶ್ರೀಜಗ - ದಂಬಾರಮಣ ಪರಿಪಾಲಯಾ ಪ ಅಜಿನಾಂಬರಧರ ಭಜಿಪರಾರ್ತಿಹರ ತ್ರಿಜಗಪಾವನ ಗಂಗಾಧರ1 ನಂದಿವಾಹನ ಸುರವೃಂದ ಸುಪೂಜಿತ ಇಂದ್ರ ವಂದಿತ ಗರಕಂಧರ 2 ರುಂಡಮಾಲಧರ ಶÀುಂಡಾಲಮದಹರ ಚಂಡವಿಕ್ರಮ ಉಗ್ರೇಶ್ವರ 3 ದಕ್ಷಾಧ್ವರ ಹರದುಷ್ಟಶಿಕ್ಷಕ ವಿರೂ - ಪಾಕ್ಷನೆ ವೈರಾಗ್ಯನಿಧೆ 4 ವಾಮದೇವನೆ ಭಕ್ತಾಕಾಮಿತ ಫಲದನೆ ಕಾಮಸಂಹರ ಕರುಣಾಕರ 5 ಮೃತ್ಯುಂಜಯನೆ ಯನ್ನಪಮೃಹಾರಕಹರಿ ಭಕ್ತಾಗ್ರೇಸರ ಶಿವಶಂಕರ 6 ರಾಮನಾಮಲೋಲ ತಾಮಸಖಳಕಾಲ ಧಿಮಂತಜನ ಪರಿಪಾಲಕ 7 ಗಿರಿಜಾರಮಣ ನಿನ್ನ ಗುರುವೆಂದು ಮೊರೆಹೊಕ್ಕೆ ಹರಿಭಕ್ತಿಯಲ್ಲಿ ಮನನಿಲ್ಲಿಸೋ 8 ನಂಬಿದೆ ನಿನ್ನ ಪಾದಾಂಬುಜ ಯುಗಳ ಹೇ ರಂಭಜನಕ ಪೊರಿಯನ್ನನು9 ರಜತಾಚಲನಿವಾಸ ರಜನಿಚರ ವಿನಾಶ ಅಜನಸುತನೆ ದಿಗಂಬರ 10 ಸರ್ವಶ್ರೀ ವರದೇಶವಿಠಲನ ಸಖ ಮು - ಪ್ಪುರಹರ ಶ್ರೀ ಮಹಾದೇವ 11
--------------
ವರದೇಶವಿಠಲ