ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲನಾಭ ಕ್ಷಮೆಯಳೆದ ಪಾದ ರಮೆಯರಸನೆ ರಮ್ಯ ಚರಿತ ಕಮಲ ಪಾದವ ತೋರೋ ಅ.ಪ. ಸೂರ್ಯ ತೇಜ ಪೊಳೆವ ಶೇಷಶಯನ ತಲ್ಪದಿ ಹಾಟಕಾಂಬರಧರ ಕಿರೀಟ ಮಾಲ ಶೋಭ ಕೃಷ್ಣನೆ ಸಾಟಿಯಿಲ್ಲದ ಕರದಿ ಲಕುಮಿ ಧಾಟಿಯಿಂದ ವೊತ್ತುವ ಪಾದ ಸಾಟಿಯಿಲ್ಲದೆ ನಿನ್ನ ಭಕ್ತರ ಪೊರೆವ ದೇವ ನಿನ್ನ ಪಾದವು 1 ದುಷ್ಟರನ್ನು ಮೆಟ್ಟಿ ತುಳಿದ ದಿಟ್ಟ ಕೃಷ್ಣನ ಪಾದವು ಮೆಟ್ಟಿ ಕಾಳಿಂಗನ ಹೆಡೆಯ ದಿಟ್ಟ ರಂಗನ ಪಾದವು ಕಟ್ಟಿದ ವರಳನೆಳೆದು ಮತ್ತಿ ಮರವ ಮುರಿದ ಪಾದವು ಕೊಟ್ಟ ಅಭಯ ಭಕ್ತರ ಪೊರೆವಡಿಟ್ಟ ಪಾದವು 2 ಕೂರ್ಮ ವರಹ ನರಹರಿ ಅಚ್ಚವಾಮನ ಪಾದವು ಸಯಿಚ್ಚೆ ಪರಶುಧರ ಶ್ರೀರಾಮ ಕೃಷ್ಣ ನಿನ್ನ ಪಾದವು ಅಚ್ಚವರವನಳಿದು ತೇಜ ಹತ್ತಿ ಮೆರೆವ ಪಾದವು ಅಚ್ಚುತ ಶ್ರೀ ಶ್ರೀನಿವಾಸ ಕೃಷ್ಣ ನಿನ್ನ ಪಾದವು 3
--------------
ಸರಸ್ವತಿ ಬಾಯಿ
ಮಂಗಳಂ ಶ್ರೀ ರಾಮಚಂದ್ರನಿಗೆ ಕಂಗೊಳಿಪ ದೇವಗೆ ಪ. ಬಿಟ್ಟು ಪಟ್ಟ ತೊಟ್ಟು ವ್ರತವ ಮೆಟ್ಟಿ ವನವನೂ ದುಷ್ಟರನ್ನು ಕುಟ್ಟಿ ಬಂದು ಪಟ್ಟವಾಳ್ದ ಶ್ರೇಷ್ಠ ಮೂರ್ತಿಗೆ 1 ಸೀತೆ ಅನುಜರೊಡನೆ ವೆರಸಿ ವಾತತನಯನ ಪ್ರೀತಿ ಸೇವೆ ಕೊಳುತ ರಾಜ್ಯ ನೀತಿಯಿಂದ ನಡೆಸಿದವಗೆ 2 ಶ್ರೇಷ್ಠ ಭಕ್ತರೊಡನೆ ವೆರಸಿ ದಿಟ್ಟತನದಲಿ ಪಟ್ಟವಾಳಿ ಪ್ರಜರ ಪೊರೆದು ಇಷ್ಟ ಸಲಿಸಿ ಮುದವಿತ್ತವಗೆ 3 ರಾಮನಾಮ ಪಠಿಪ ಜನರ ಕಾಮಿತಾರ್ಥವ ಪ್ರೇಮದಿಂದ ಕೊಟ್ಟು ಪೊರೆವ ಸ್ವಾಮಿ ಸುಗುಣಧಾಮ ಹರಿಗೆ4 ಭೂಪರೊಳಗೆ ಶ್ರೇಷ್ಠ ರಾಮರೂಪ ಮಂಗಳಂಗೋಪಾಲಕೃಷ್ಣವಿಠ್ಠಲಗೆ ದೀಪದಾರತೀಯ ಬೆಳಗಿ 5
--------------
ಅಂಬಾಬಾಯಿ
ರಂಗನಾಥ ಪಾಲಿಸೆನ್ನ ಮಂಗಳಾಂಗ ಶ್ರೀಶ ಬೇಗ ಪ ನಿನ್ನ ಭಜನೆಯನ್ನು ಗೈವೆ ಪನ್ನಗಾರಿವಾಹ ಹರೆ ಸ್ವರ್ಣವಸನ ಭೂಷಿತಾಂಗ ಸನ್ನುತಾಂಗ ಧೀರಶೂರ 1 ದುಷ್ಟರನ್ನು ಶಿಕ್ಷಿಸುತ್ತ ಸೃಷ್ಟಿಗೊಡೆಯನೆನಿಸಿ ನೀನು ಇಷ್ಟ ವರಗಳನ್ನು ಕೊಟ್ಟು ಶ್ರೇಷ್ಟನೆನಿಸು ನಂಬಿದೆನು 2 ಕಾಮಿತಾರ್ಥ ಫಲಗಳೀವ ಕಾಮ ಜನಕ ದೇವನೆ ಧೇನುನಗರದಲ್ಲಿ ನೆಲಸಿ ನೇಮದಿಂದ ಪೂಜೆಗೊಂಬೆ 3
--------------
ಬೇಟೆರಾಯ ದೀಕ್ಷಿತರು
ವಂದಿಪೆ ನಿನಗೆ ಕೇಶವಾ ತಂದೆ ವಂದಿಪೆ ನಿನಗೆ ಕೇಶವಾ ಪ ಪಾದ ಭಜಿಸಿದ ದಾಸರೆಲ್ಲ ಹೊಂದಿದರು ಮುಕ್ತಿಯನು ಕೇಶವಾ ತಂದೆ 1 ದುಷ್ಟರನ್ನು ತರಿಯಲು ಹತ್ತು ರೂಪಗಳನು ತಾಳಿ ಶಿಷ್ಟರನ್ನು ಸಲಹಿದ ಕೇಶವಾ ತಂದೆ 2 ಬಂದ ಕಷ್ಟಗಳನು ನೀಗಿ ಶ್ರೇಷ್ಠ ಭಕ್ತಿಯನ್ನು ಕೊಟ್ಟು ಮುಂದೆ ನೀ ರಕ್ಷಿಸೋ ಕೇಶವಾ ತಂದೆ 3
--------------
ಕರ್ಕಿ ಕೇಶವದಾಸ