ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗಿ ಮತ್ತೆಲ್ಲಿದ್ದರೇನುಫುಲ್ಲ ಲೋಚನನರಿತು ಪುರುಷೋತ್ತಮನಾದ ಬಳಿಕ ಪ ಈಷಣ ತ್ರಯವಳಿದು ಇಷ್ಟ ಕಾಮ್ಯಗಳಳಿದುದೋಷವೆಂಬುದ ನಳಿದು ದ್ವೇಷವಳಿದುಆಸೆಯೆಂಬುದು ಅಳಿದು ಅಷ್ಟಪಾಶಗಳಳಿದುಈಶ ಸರ್ವೇಶವಿಭು ತಾನಾಗಿರುವವನು 1 ಮನದ ವರ್ತನೆಯಳಿದು ದುಷ್ಟಮದಗಳ ಕಳೆದುಕನಸು ಜಾಗೃತಿ ಸುಷುಪ್ತಿ ಕರ್ಮವಳಿದುಜನನ ಮರಣಗಳಳಿದು ಜಠರ ಬಾಧೆಗಳಳಿದುಘನ ಪುರುಷನಾಗಿ ಘನ ತಾನಾಗಿ ಇರುವನವನು 2 ಪತಿ ಚಿದಾನಂದ ಮೂರುತಿ ತಾನಾದವನು3
--------------
ಚಿದಾನಂದ ಅವಧೂತರು
ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಸಿಕ್ಕ ಸಮಯ ನಿಜ ತಿಳಿಯದಲೆ ಬರಿ ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು ಬಾಳುವೆ ಧನಸಿರಿ ನಿನಗಿಲ್ಲ ನಾಳೆ ಬಂದೊದಗಲು ಯಮಶೂಲ ಹಿಂ ಬಾಲಿಸಿ ನಿನಗೊಂದು ಬರೋದಿಲ್ಲ 1 ಬಂಧುರ ಬುವಿಯಧಿಕಾರ ನಿಖಿಲ ಮಹ ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ ತಂದೆ ತಾಯಿ ಬಂಧು ಬಳಗೆಲ್ಲ ನಿನ ಗೊಂದುಕೊಂದು ಸಂಬಂಧವಿಲ್ಲ 2 ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ ಮತಿಗೆಟ್ಟು ಪೊಂದದಿರತಿ ದು:ಖ ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3 ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ ಆನೆ ಕುದುರೆ ಒಂಟೆ ನಿನ್ನದಲ್ಲ ಕಾಣುವುದೆಲ್ಲ ಮಾಯಭವಜಾಲ ಮತ್ತು ಮನುಷ್ಯಜನುಮ ಸೀಗೋದಲ್ಲ 4 ನಾನು ನೀನೆಂಬುವ ದುಷ್ಟಮದ ಸುಟ್ಟು ಜ್ಞಾನದೊಡನೆ ಗೆಲಿ ಭವಬಾಧೆ ಧ್ಯಾನದಾಯಕ ಶ್ರೀರಾಮಪಾದ ನಿಜ ಧ್ಯಾನವಿಡಿದು ಪಿಡಿ ಮುಕ್ತಿಪದ 5
--------------
ರಾಮದಾಸರು
ಲೊಳ್ಳ ಕಳ್ಳೊಟ್ಟೆ ಜಂಬಾಳಗಟ್ಟೆ ಸಂಸಾರ ನೋಡಮ್ಮಲೊಳ್ಳ ಕಳ್ಳೊಟ್ಟೆ ಸರಸನಂಬಲುಗತಿಯದು ಲೊಳ್ಳಟ್ಯಮ್ಮಮ್ಮಪಹೆಂಡಿರು ಮಕ್ಕಳು ತಂದೆ ತಾಯಿಗಳುಭಾಗ್ಯವು ಲೊಳ್ಳಟ್ಯಮ್ಮಮ್ಮಚಂಡ ಯಮದೂತರುಮಂಡೆತಿವಿವಾಗಬಿಡಿಸುವರಾರು ಇಲ್ಲಮ್ಮ1ಶ್ರೇಷ್ಠತೆ ಚೆಲುವಿಕೆ ವಸ್ತ್ರವು ಪ್ರಾಯವುಸಿದ್ಧಿಯು ಲೊಳ್ಳಟ್ಯಮ್ಮಮ್ಮದುಷ್ಟಮದೂತರು ದುಬುದುಬು ಬಡಿವಾಗಬಿಡಿಸುವರಾರು ಇಲ್ಲಮ್ಮ2ವಾರೆ ಮುಂಡಾಸವು ಗೀರು ಗಂಧಗಳುಪೋರತನವು ಲೊಳ್ಳಟ್ಯಮ್ಮಮ್ಮಘೋರ್ಯಮದೂತರು ಘರ್ಜಿಸುತ ಒಯ್ವಾಗಬಿಡಿಸುವರಾರು ಇಲ್ಲಮ್ಮ3ಕನಸಿನ ತೆರವಿದು ಸಂಸಾರವೆಂಬುದುಅನುಮಾನವಿದಕಿಲ್ಲಮ್ಮಮ್ಮಕನಸೆಂದು ನಿಶ್ಚೈಸೆ ಕಾಲನು ಬಾರನುಮನದಲಿ ತಿಳಿದುಕೊ ನೀನಮ್ಮ4ತನ್ನನು ಮರೆತು ಸಂಸಾರ ನೆಚ್ಚಲುತಿರುಗುವ ಜನ್ಮವ ನಮ್ಮಮ್ಮಚೆನ್ನ ಚಿದಾನಂದ ಗುರುವೆಂದು ನಂಬಲುಜನ್ಮವ ಕಳೆವುವು ತಿಳಿಯಮ್ಮ5
--------------
ಚಿದಾನಂದ ಅವಧೂತರು