ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನಾರಾಯಣ ನಾರಾಯಣ ನಾರಾಯಣ ಪ. ದೇವರದೇವನೆ ಬಾರೊ ದೇವಕಿನಂದನ ಬಾರೊ ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ಅ.ಪ. ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ ಸತ್ಯವ್ರತನಿಗೊಲಿದ ಮಚ್ಚಬಾರೊ ಹರಿಯೆ 1 ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ ಕೂರ್ಮ ಬಾರೊ ಹರಿಯೆ 2 ಧsÀರೆಯನುದ್ಧರಿಸಲು ವರಾಹನಾದವನೆ ಹಿರಣ್ಯಾಕ್ಷನ ಸೀಳ್ದ ಧೀರ ಬಾರೋ ಹರಿಯೆ 3 ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ- ಡಿಂಬ ಬಾರೊ ಹರಿಯೆ 4 ಮಾಣವಕವೇಷನಾಗಿ ಕ್ಷೋಣಿ ಅಳೆದವನೆ ದಾನವನ ಸೋಲಿಸಿದ ಜಾಣ ಬಾರೊ ಹರಿಯೆ5 ಕಡಿ[ದು] ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ ಪಿಡಿದುಗ್ರ ಒಡೆಯ ಬಾರೊ ಹರಿಯೆ 6 ವೃಂದಾರಕವಂದ್ಯ ಸೇತುಬಂಧದಿ ದಶಕಂಧರನ ಕೊಂದ ರಾಮಚಂದ್ರ ಬಾರೊ ಹರಿಯೆ 7 ಮಲ್ಲರ[ನೆಲ್ಲ] ಸೀಳಿ ಬಲ್ಲಿದ ಮಾವನ ಕೊಂದೆ ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ 8 ಬೌದ್ಧನಾಗಿ ದೈತ್ಯರಿಗೆ ಶುದ್ಧಬುದ್ಧಿಯ ತೋರಿ ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ 9 ಕರ್ಕಶದ ಖಳರನ್ನು ಕಲ್ಕಿರೂಪನಾಗಿ [ಮೂಲೆ ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ 10 ವಿಜಯ ಹಯವದನ ಭಜಕರ ಭಾಗ್ಯನಿಧಿ ಸುಜನಾಬ್ಧಿ ವಾದಿರಾಜನ ತೇಜ ಬಾರೊ ಹರಿಯೆ 11
--------------
ವಾದಿರಾಜ
ಎಲ್ಲಿಗ್ಹೋಗುವೆ ಎಲೊ ಹರಿಯೇ ಮನದಲ್ಲಿ ನಿಲ್ಲೋ ಒಂದರಘಳಿಗೆ ಹೇ ಧೊರೆಯೆ ಪ ವಾರಿವಿಹಾರದಿ ನಿಂದು-ಗಿರಿಭಾರ ಕಳೆದು ನೀನಡಗಿದೆ ಅಂದು ಧಾರುಣಿಯನೆ ಬಗೆದು ನಿಂದು-ಧೀರ ಪೋರನ ಮಾತನ ಸಲಹಬೇಕೆಂದು 1 ವರವಟುವೇಷವ ಧರಿಸಿ-ದುಷ್ಟನೃಪರಕುಲಗೇಡಿಗನೆಂದೆನಿಸಿ ನಾರಿಯನಟವಿಯೊಳರಸಿ-ಪುರನಾರಿಯರ ಮನವನ್ನೆಅಪಹರಿಸಿ 2 ಓಡುವೆಯೊಮುಂದು ಉರಗಾದ್ರಿವಾಸ ವಿಠಲ ದಯಾಸಿಂಧು 3
--------------
ಉರಗಾದ್ರಿವಾಸವಿಠಲದಾಸರು
ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ನರಹರಿಯೆ ಪ. ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ ದಯವಾಗೊ ಅ.ಪ. ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು ಆಗಮವ ತಂದು ಅಜಗಿತ್ತೆ ಆಗಮವ ತಂದು ಅಜಗಿತ್ತೆ ಹಯವದನ ಆದಿಮೂರುತಿಯೆ ದಯವಾಗೊ 1 ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ ಪ್ರೇಮದಿ ಸುರರಿಗಮೃತವ ಪ್ರೇಮದಿ ಅಮೃತವನಿಕ್ಕಿದ ಹಯವದನ ಸ್ವಾಮಿ ನೀ ಎನಗೆ ದಯವಾಗೊ 2 ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು ರÀೂಢಿಯ ನೆಗಹಿ ಜಗಕಿತ್ತೆ ರÀೂಢಿಯ ನೆಗಹಿ ಜಗಕಿತ್ತೆ ಹಯವದನ ಪ್ರೌಢ ನೀ ಎನಗೆ ದಯವಾಗೊ 3 ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ ಕುಶಲದಿಂ ಕರುಳ ಮಾಲೆಯ ಕುಶಲದಿಂ ಮಾಲೆ ಧರಿಸಿದ ಹಯವದನ ಬಿಸಜಾಕ್ಷ ಎನಗೆ ದಯವಾಗೊ 4 ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ ವ್ಯೋಮಕ್ಕೆ ಚರಣವ ನೀಡಿದೆ ವ್ಯೋಮಕ್ಕೆ ಚರಣವ ನೀಡಿದ ಹಯವದನ ವಾಮನ ಎನಗೆ ದಯವಾಗೊ 5 ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ ಹಡೆದ ತಂದೆಯ ಮಾತು ಸಲಿಸಿದೆ ಹಡೆದ ತಂದೆಯ ಮಾತು ಸಲಿಸಿದ ಹಯವದನ ಒಡೆಯ ನೀ ಎನಗೆ ದಯವಾಗೊ 6 ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ ಭೂತ ರಾವಣನ ಮಡುಹಿದೆ ಭೂತ ರಾವಣನ ಮಡುಹಿದೆ ಹಯವದನ ಖ್ಯಾತ ನೀ ಎನಗೆ ದಯವಾಗೊ 7 ಗೊಲ್ಲರ ಒಡನಾಡಿ ಬಲ್ಲಿದಸುರÀನ ಕೊಂದು ಮಲ್ಲರೊಡನಾಡಿ ಮಡುಹಿದೆ ಮಲ್ಲರೊಡನಾಡಿ ಮಡುಹಿದ ಹಯವದನ ಫುಲ್ಲಾಕ್ಷ ಎನಗೆ ದಯವಾಗೊ 8 ತ್ರಿಪುರರ ಸತಿಯರಿಗುಪದೇಶವನಿಕ್ಕಿ ತ್ರಿಪುರರನೆಲ್ಲ ಮಡುಹಿದೆ ತ್ರಿಪುರರನೆಲ್ಲ ಮಡುಹಿದ ಹಯವದನ ನಿಪುಣ ನೀ ಎನಗೆ ದಯವಾಗೊ 9 ತೇಜಿಯನೇರಿ ರಾಹುತನಾಗಿ ನೀ ಮೆರೆದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ ಭೋಜ ನೀ ಎನಗೆ ದಯವಾಗೊ 10 ವಾದಿರಾಜರಿಗೊಲಿದು ಸ್ವಾದೆಪುರದಲಿ ನಿಂದು ವೇದದ ಕಥೆಯನರುಹಿದೆ ವೇದದ ಕಥೆಯನರುಹಿದ ಹಯವದನ ಮಾಧವ ನೀ ಎನಗೆ ದಯವಾಗೊ 11
--------------
ವಾದಿರಾಜ
ಶ್ರೀ ಧರ್ಮಪುರಿ ಕ್ಷೇತ್ರ ಪರವಾಸುದೇವ ಸ್ತೋತ್ರ61ಶರಣು ಹೊಕ್ಕೆನೋ ನಿನ್ನ |ಪರವಾಸುದೇವನೇ ಪಾಲಿಸೆನ್ನಲಿ ಕೃಷ್ಣ |ಕರಿರಾಜವರದನೇ ಶರಣ ವತ್ಸಲ ಘನ್ನ |ಭಕ್ತಜನ ಪ್ರಸನ್ನ |ಉರುಗುಣಾರ್ಣವ ವೇದವೇದ್ಯನೆ |ಶಿರಿ ಕರಾಂಬುರುಹಾಚೀತಾಂಘ್ರಿ |ಸರೋಜವಿಧಿಶಿವಾದ್ಯಮರ ವಂದ್ಯನೆ ಸರ್ವಕರ್ತಾಶರಣುಹೊಕ್ಕೆನೋ ನಿನ್ನ|| ಪಮೀನಕೂರ್ಮವರಾಹ| ಚಿನ್ಮಾತ್ರವಪುಷವೀರಭದ್ರ ನೃಸಿಂಹ||ಬಲಿರಾಯಗೊಲಿದು ಕೆಡಹಿದೈತ್ಯ ಸಮೂಹ ||ದುಷ್ಟನೃಪರ ಸೀಳಿ ಬಿಸುಟು ಬ್ರಹ್ಮ | ಕುಲವರವಾಯು ಮಹಾರ್ಹಹನುಮಪ್ರಿಯರವಿ ಸುತ ವಿಭೀಷಣರಿಗೆ ನೀ ಅಭಯನೀಡಿ ಪಾಂಡು -ತನಯರು ದ್ರೌಪದೀ ವಿದುರಉದ್ಧವಇನ್ನುಬಹು ಸಜ್ಜನರಿಗೊಲಿದು ||ಜನಜನೆನಿಸಿದಿ ದೈತ್ಯಮೋಹಕ ಸುರಸುಬೋಧಕ ಬುದ್ಧಶರಣು |ಕ್ಷೋಣಿಯಲ್ಲಿ ಚೋರರಾಜರ ಸದೆದು -ಧರ್ಮಸ್ಥಾಪಿಸಿದಿ ಹೇ ಕಲ್ಕಿ ನಮೋ ನಮೋಪಾಹಿಸಂತತ1ಸರ್ವಗತ ಸರ್ವೇಶ | ಸರ್ವೇಶ್ವರನು ನೀನೇ ಕಾಲವಸ್ತುದೇಶ ||ಸರ್ವತ್ರಒಳಹೊರ ವ್ಯಾಪ್ತನಾಗಿಹ ಶ್ರೀಶ ||ಶ್ರೀತತ್ವ ನಿನ್ನಲಿ ಓತಪ್ರೋತಮಹೇಶ | ಅಕರನೇನಿರ್ದೋಷ ||ಸಚ್ಚಿತ್ ಸುಖಮಯ ಆತ್ಮಾಪ್ರೇದಕ್ಕೂ ಅಮಿತ ಸತ್ಕಲ್ಯಾಣಗುಣನಿಧೇ ||ಸರ್ವಜಗಚ್ಚೇಷ್ಟೆಯನು ಗೈಸುತಿ ಸ್ವಪ್ರಯೋಜನ ರಹಿತಸ್ವಾಮಿಯೇ |ಅಜಿತರುಚಿರಾಂಗದನೇ ಸ್ವಾಸ್ಯನೇ ಸರ್ವಭೂತಾಂತರಾತ್ಮನೇ ||ಅಚ್ಯುತನೇ ಸಂಪೂರ್ಣ ಕಾಮನೇ ಅತಿಜ್ಞಾನ ವೈರಾಗ್ಯ ಸಂಪತ್‍ದಾತಕರುಣಿ | ಗುರುವೇಂಕಟ || ಶರಣು || 2ಧರ್ಮಪುರಿಯಲ್ಲಿರುತ್ತಿ | ಶೇಷಶಯನನೇನಮೋ ಪರವಾಸುದೇವ ಪ್ರಮೋದಿ ||ಮದ್ದೋಷ ಕಳೆದು ಸದ್ಧರ್ಮದಲಿ ಇಡು ದಯದಿ |ವೃಷಾತಪಿಯೇ ಕಪಿತನಾಮಕನಮೋ ಆನಂದಿ ನಂದಾ ನಂದನ ನಂಹಿಜಗದಾಧಾರ ಶ್ರೀಕೂರ್ಮನಭ ಅರ್ಕಾದಿ ಧಾರಕ ಶಿಂಶುಮಾರನೇಸಾಗರವು ಭೂಮಿಯನು ನುಂಗದೇ ಹಿಂದೆ ಸೆಳೆದು ಧರೆಯರಕ್ಷಿಪ ||ಸಾಗರದಲ್ಲಿರುವ ವಡವಾವತ್ತಅಗ್ನಿನೀನು ಸವತ್ರ ಹರವು |ಮುಖ್ಯ ರಕ್ಷಕ ವೇಧತಾತ ಪ್ರಸನ್ನ ಶ್ರೀನಿವಾಸ ಶ್ರೀಪತಿಗರುಡಕೇತನಶರಣು ಹೊಕ್ಕೆನೋನಿನ್ನ 3
--------------
ಪ್ರಸನ್ನ ಶ್ರೀನಿವಾಸದಾಸರು