ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಕೈಯ ಬಿಡುವರೇ ಕೃಷ್ಣ ಕೈಯ ಬಿಡುವರೇ ಪ ಹೇಯ ವಿಷಯದಲ್ಲೆ ಇರಿಸಿ ಜೀಯ ನಿನ್ನ ವಿಷಯ ಮರೆಸಿ ಭವ ಸಮುದ್ರ ಅ.ಪ ಬಿಂಬ ನೀನು ಸಿದ್ಧಪ್ರತಿಬಿಂಬ ನಾನು ಸಿಧ್ದವಿರಲು ತುಂಬಿ ಪರಿವ ನದಿಯ ಮಧ್ಯೆ ಅಂಬಿಗನೆ ತ್ಯಜಸಿದಂತೆ 1 ಕಲಿಯ ಕಾಟ ವಿಷಯ ದಾಟಗೆಲುವ ಶಕ್ತಿ ಎನಗೆ ಉಂಟೆ ಒಲಿಯದಿರಲು ನೀನೆ ದಯದಿ ಸುಲಭದೇವ ನೆನಿಸಿ ಹೀಗೆ 2 ತಾಯಿ ಬಿಡುವಳೇನು ಶಿಶುವ ಮಾಯೆ ಸುಳಿಯಲ್ಲಿರಲು ಸಹಾಯ ಮಾಡದೇನೆ ಬದಿಗ 3 ಶಿಷ್ಟನಲ್ಲ ದುಷ್ಟಕರ್ಮ ಭ್ರಷ್ಟನೆಂಬ ಮಾತು ಮೂಟೆ ಕಟ್ಟಿಪೇಳು ಬಿಟ್ಟು ನಿನ್ನ ಎಷ್ಟು ಕರ್ಮಮಾಡಲಾಪೆ 4 ಹಿಂದಿನವರು ತಾವೆ ಮುಂದೆ ಬಂದರೇನೊ ಬಿಟ್ಟು ನಿನ್ನ ಒಂದು ತೃಣವು ಚಲಿಸದಲ್ಲ ತಂದೆ ಮನವ ಮಾಡದಿರಲು 5 ನಾನು ಎಂದು ಹೀನನಾದೆ ನೀನು ಸ್ವಾಮಿ ನಾನು ಭೃತ್ಯ ಶ್ರೀನಿವಾಸ ಶರಣು ಶರಣು ಜ್ಞಾನವಿತ್ತು ಕಾಯೊ ಮುಂದೆ 6 ನಿನ್ನ ನಂಬಿ ಇರುವೆ “ಶ್ರೀ ಕೃಷ್ಣವಿಠಲ” ಸತ್ಯಸತ್ಯ ಅನ್ಯರನ್ನು ಕಾಣೆನಪ್ಪ ನಿನ್ನ ಚಿತ್ತ ನನ್ನ ಭಾಗ್ಯ 7
--------------
ಕೃಷ್ಣವಿಠಲದಾಸರು
ತಗಲಿ ತಗಲದೆ ಈ ಜಗದೊಳು ಜೀವಿಸೊ ಕಮಲ ಪತ್ರದಲ್ಲಿಹ ಜಲದ ಕಣಗಳಂತೆ ಪ ತಗಲುತ ನಿರತ ಸುಖವನೀವ ಕರ್ಮಕ್ಕೆ ತಗಲದೆ ಭವದಲಿ ಬಿಗಿವ ವಿಷಯಗಳಿಗೆ ಅ.ಪ ಪರಿಪರಿ ಕ್ಷಣಿಕ ಸುಖದ ಮೋಹದೊಳತಿ ದುರಿತಗಳಿಗೆಳೆವ ದುರುಳರ ಅಗಲೆಲೋ ಹರಿದಾಸರ ಸಹವಾಸಕ್ಕೆ ತಗಲುತ್ತ ಹರಿಗುಣ ಪೊಗಳುವ ಪರಮ ಸುಖವ ಬಯಸೊ 1 ಸತಿ ಸುತರೆಲ್ಲ ಶ್ರೀಪತಿಯ ಸೇವೆಯೊಳತಿ ಹಿತ ತೋರಲು ಅವರೊಳಾಮತಿಯನು ತಗಲಿಸೊ ಕ್ಷಿತಿಯೊಳವರು ನಿನ್ನ ಭೋಗವಸ್ತುಗಳೆಂದು ಮಿತಿ ಮೀರಿರುವ ಮಮತೆಗೆ ತಗಲದಿರೊ 2 ದುರ್ಮಾರ್ಗದೊಳು ದುಷ್ಟಕರ್ಮಗಳನೆ ಮಾಡಿ ಹೆಮ್ಮೆಯಿಂದಲಿ ಪಾಪ ಫಲಗಳ ಬಯಸದೆ ಧರ್ಮದಿ ಸುಖಗಳನನುಭವಿಸುವುದಕೆ ಸಮ್ಮತಿ ಈ ಯುವ ನಮ್ಮ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ನೋಡಿ ನಿನ್ನನು ಧನ್ಯಳಾದೆನು ಮಾಡಿ ಕೃಪೆಯನು ಮನ್ನಿಸೂಬೇಡಿಕೊಂಬೆನು ಭವವ ಮುಂದಕೆ ನೀಡದಂಘ್ರಿಯೊಳೊಂದಿಸೂ ಪಕೃಷ್ಣ ನಿನ್ನನು ಮುದ್ದನಾಡುತ ಕಷ್ಟವನು ಕಡೆಗಾಂಬೆನೂಇಷ್ಟದೈವವು ನನ್ನ ಜಠರದಿ ಪುಟ್ಟೆ ನಿನ್ನನು ಕಂಡೆನೂದುಷ್ಟಕರ್ಮಗಳೆಲ್ಲವನು ನೆರೆ ನಷ್ಟಗೈಯುವ ದೇವನೂಪುಟ್ಟಮಗುವಾಗಿರಲು ಕೇಶವ ಮುಟ್ಟಿಲಾಲಿಪಳಾದೆನೂ 1ಬಟ್ಟಚೆಲು'ನ ರತ್ನದರಳೆಲೆ ಕಟ್ಟಿ ಬೊಪ್ಪದೊಳೊಲೆಯಲೂಪುಟ್ಟ ಮಾಗಾುಗಳು ಕಿ'ಗಳವಟ್ಟು ಕದಪುಗಳೊಪ್ಪಲೂನಟ್ಟನಡು ಪಣೆಯಲ್ಲಿ ಕತ್ತುರಿಬಟ್ಟು ಬೆಡಗನು ಬೀರಲೂಇಟ್ಟ ಕಪ್ಪಿನ ಕಣ್ಗಳೆಸೆಯಲು ಬಿಟ್ಟಬಾಯಲಿ ಸ'ಯಲು 2ಮುತ್ತು ರತ್ನಗಳನ್ನು ತೆತ್ತಿಸಿ ಸುತ್ತಕಾಂತಿಯ ಬೀರುವಉತ್ತಮದ ಮಕುಟವನು ನಿನ್ನಯ ನೆತ್ತಿಗಿಡುವೆನು ಕೇಶವಮತ್ತು ಕಂಕಣಗಳನು ಕರಗಳಿಗಿತ್ತು ಕಟ್ಟುವೆ ಪವಳವಾಸತ್ಯವಂತನೆ ನೀನು ಶಿಶುತನವೆತ್ತೆ ಪಡೆದೆನು ಭಾಗ್ಯವಾ 3ಸನ್ನುತನೆ ಪದಕಗಳ ಸರಗಳ ನಿನ್ನ ಕೊರಳಿಗೆ ಕಟ್ಟಿಚಿನ್ನ ಮುಕ್ತದಿ ಪೊಳೆವ ಕೌಸ್ತುಭವನ್ನು ಉರಕಳವಡಿಸುವಾರನ್ನ ಮಾಣಿಕದುಡಿಯ ಸೂತ್ರಗಳನ್ನು ಕಟಿಯಲಿ ರಚಿಸುವಾಇನ್ನು ಬಹು'ಧವಾಗಿ ಮನ್ನಿಪುದನ್ನು ವ'ಸಿದೆ ದಾಸ್ಯವಾ 4ಕಟ್ಟಿ ಘಂಟೆಯ ಸರವ ಕಟಿಯಲಿ ಪುಟ್ಟ ಶ್ರೀಮೃದುಪಾದವಾಮುಟ್ಟಿ ಕೈುಂದಂದುಗೆಗಳ ನಾನಿಟ್ಟು ಘಲಿಘಲಿಗುಟ್ಟುವಾಬಟ್ಟಗೆಜ್ಜೆಯ ಸಣ್ಣಸಾಲ್ಗಳ ದಟ್ಟಗೊಳಿಸೀಯೆಂದವಾನೆಟ್ಟದ್ಟೃಯಲೀಕ್ಷಿಸುತ ಹೊರಗಟ್ಟಿಬಿಟ್ಟೆನು ಕ್ಲೇಶವಾ 5ಒಂದು ಸ್ತನವನು ಸ'ಯುತಲೆ ಮತ್ತೊಂದು ಸ್ತನವನು ಕರದಲಿತಂದು ವದನದೊಳಿಟ್ಟು ದಣಿಯುತ ಮಂದಹಾಸದ ಮುಖದಲಿಇಂದಿರೇಶನೆ ನಿನ್ನ ನೋಡುತ ಇಂದು ಸಲ'ದೆ ಕೃಪೆಯಲಿವಂದಿಪರು ನಿನ್ನಡಿಗೆ ಸುರಮುನಿವೃಂದ ಭಾ'ಸಿ ಮನದಲಿ 6ಸಕಲ ಲೋಕಾಧಾರನಾಗಿಯೆ ಸಕಲ ಜೀವರ ಸಾಕ್ಷಿಯೆಪ್ರಕಟವಾಗೆನಗೀಗ ತೋರಿದೆ ಮುಕುತಿದಾಯಕ ಮೂರ್ತಿಯೆಭೃಕುಟಿಯಲಿ ನಿರ್'ುಸಿದ ಮಾಯೆಯ 'ಕರಿಸುವನುಸಾರಿಯೆಚಕಿತಳಿಗೆ ನನಗೊಲಿದೆ ತಿರುಪತಿ ವೆಂಕಟನಡಿಗೆ ಸ್ವಾ'ುಯೆ7
--------------
ತಿಮ್ಮಪ್ಪದಾಸರು
ಮಂಗಳಂ ಶ್ರೀ ಪಾರ್ಥಸಾರಥಿಗೆ ಮಂಗಳಂ ಸಂಕರ್ಷಣನಿಗೆ ಅನಿರುದ್ಧ ಸಾತ್ಯಕೀಸಹ ಬಂದು ನಿಂದವಗೆ ಪ ವಸುಧೆ ಭಾರವನಿಳುಹಲೆಂದು ದೇವಕೀ ವಸುದೇವರುದರದಿ ಶಿಶುವಾಗಿ ಅಸುರ ಪೂತನಿಯಸುವ ನೀಗಿದ ಕುಸುಮನಾಭಗೆ 1 ವಾತಾಸುರನಕೊಂದು ಬಾಯೊಳುಮಾತೆಗೆ ಬ್ರಹ್ಮಾಂಡತೋರ್ದಗೆ 2 ಒತ್ತಿ ಕಾಳಿಯ ಶಿರವನಾಗ ಸುತ್ತಿದಾ ಕಿಚ್ಚನ್ನು ನುಂಗಿ ಎತ್ತಿ ಗೋವರ್ಧನಗಿರಿಯ ಹತ್ತಿ ಗೋಮಂತವನು ಹಾರ್ದಗೆ 3 ಕೇಶಿಯನು ಸಂಹರಿಸಿ ದುಷ್ಟದ್ವೇಷಿಯಾದ ವೃಷಭನನು ಕೊಂದು ದಾಸಿ ತಂದ ಗಂಧವನು ಪೂಸಿ ಮೆರೆದ ಕ್ಲೇಶನಾಶಗೆ 4 ಬಿಲ್ಲು ಮುರಿದು ಬೀದಯಲ್ಲಿ ಎಲ್ಲರಿಗೆ ತಕ್ಕ ರೂಪ ತೋರಿ ಮಲ್ಲರನು ಮರ್ಧಿಸುತ ಮಾವನ ಸೊಲ್ಲನಡಗಿಸಿದ ಪುಲ್ಲನಾಭಗೆ 5 ರುಕ್ಮಿಣೀ ಸತ್ಯಭಾಮೆ ಕಾಳಂದಿ ಜಾಂಬವತಿಯು ಮೊದಲಾದ ಲಕ್ಷ್ಮಣೆ ಸತ್ಯಭದ್ರೆ ಮಿತ್ರವಿಂದೆಯು ತಂದ ಲಕ್ಷ್ಮೀರಮಣಗೆ 6 ಕೊಂದು ನರಕನ ಹದಿನಾರುಸಾವಿರ ಸ್ತ್ರೀಯರನು ಬೇಗ ತಂದು ದ್ವಾರಕಿಯಲ್ಲಿ ಸತಿಸಹ ಆನಂದದಿಂದಲಿ ನಿಂದಕೃಷ್ಣಗೆ 7 ಹೇಮದಾಭರಣವಿಟ್ಟು ರುಕ್ಮಿಣಿ ನೇಮದಿಂದಲೆ ಬೀಸುತಿರಲು ಪ್ರೇಮಕಲಹದಿ ಬೀಳಲಾಕ್ಷಣ ವಿರಾಮವಿಲ್ಲದೆ ಎತ್ತಿದವಗೆ8 ಎತ್ತಿ ಅಂಕದೊಳಿಟ್ಟು ಪ್ರೇಮದಿ ಅರ್ಥಿಯಿಂದಲೆ ಕುರುಳನೇವರಿಸಿ ತತ್ವವಾಕ್ಯವನ್ನು ಹೇಳಿದ ಮುಕ್ತಿದಾಯಕ ಮುದ್ದು ಕೃಷ್ಣಗೆ 9 ಜಾಣತನದಲಿ ಕಾಶಿಯನುಸುಟ್ಟು ಪೌಂಡ್ರಕನಪ್ರಣಾಪಹರಿಸಿದವಗೆ 10 ಮಿಥುಳವಾಸಿಗೆ ಮುಕ್ತಿಯನಿತ್ತು ಸುತನ ತಂದು ವಿಪ್ರನಿಗಿತ್ತು ಹತವಮಾಡಿ ವೃಕಾಸುರನ ಶ್ರುತಿಗಗೋಚರನಾದ ಸ್ವಾಮಿಗೆ 11 ಅರಗಿನಮನೆಯಿಂದ ರಕ್ಷಿಸಿ ದ್ರೌಪದಿ ಸುಭದ್ರೆಯ ಸಾಧಿಸಿತ್ತಗೆ 12 ನೆತ್ತವಾಡಿ ಕೌರವರೊಡನೆ ಅರ್ಥವನು ಸೋಲಲು ಪಾಂಡವರು ಭಕ್ತವತ್ಸಲನೆನ್ನೆ ದ್ರೌಪದಿಗೆ ವಸ್ತ್ರವಿತ್ತು ಕಾಯ್ದ ಕೃಷ್ಣಗೆ 13 ವನವಾಸದಲ್ಲಿ ಪಾಂಡವರು ಉಲ್ಲಾಸದಿಂದಲೆ ಇರುತಿರಲು ಪಾಶುಪತ ವನು ಪಾರ್ಥನಿಗೆ ಈಶನಲಿ ಕೊಡಿಸಿದ ಸರ್ವೇಶಗೆ 14 ವೇಷವನ್ನು ಮರೆಸಿಕೊಂಡು ವಿರಾಟನಗರದಿ ವಾಸ ಮಾಡಲು ಮೋಸದಿಂದಲೇ ಕೀಚಕಾದಿಗಳ ನಾಶಮಾಡಿಸಿದ ವಾಸುದೇವಗೆ 15 ಆನಂದರೂಪವ ತೋರಿದವಗೆ 16 ತೋರಿದವಗೆ 17 ಜಾಹ್ನವೀಸುತನ ಯುದ್ಧವನ್ನು ತಾಳಲಾರದೆ ಜನರ್ಧನಗೆ ಪೇಳೆ ಜಾಣತನದಲಿ ಶಿಖಂಡಿಯನುತೋರಿ ಬಾಣಮಂಚದಿ ಮಲಗಿಸಿದವಗೆ 18 ಸುಭದ್ರೆ ಪುತ್ರನ ಯುದ್ಧದಲ್ಲಿ ಪದ್ಮವ್ಯೂಹವ ಪೋಗಿಸಲಾಗ ಮುದ್ದುಬಾಲಕನ ಕೊಲಿಸಿದವಗೆ 19 ಸಿಂಧುರಾಜನ ಕೊಲ್ಲುವೆನೆಂದು ನರನು ಪ್ರತಿಜ್ಞೆಮಾಡಲು ತಂದಚಕ್ರವ ರವಿಗೆತೋರಿಸಿ ಸೈಂಧವನ ಕೊಲ್ಲಿಸಿದಸ್ವಾಮಿಗೆ 20 ದೃಪತಿಯತೋರಿದವಗೆ 21 ಕರ್ಣನು ಘಟ್ಟಿಯಾಗಿ ರಥವನೊತ್ತಿ ದಿಟ್ಟತನದಲಿ ಶಿರವ ಕಾಯ್ದಗೆ 22 ಮದ್ರರಾಜನ ಕೊಲ್ಲುವೆನೆಂದು ಸಮುದ್ರಶಯನನ ಸಹಾಯದಿಂದ ಭದ್ರಗಜವನು ಏರೆ ಧರ್ಮಜ ಕಾಲರುದ್ರನಂದದಿ ಕೊಲಿಸಿದವಗೆ 23 ಭೀಮ ದುರ್ಯೋಧನರು ಯುದ್ಧದಿ ಹೇಮದ ಗದೆಯನ್ನು ಪಿಡಿದು ಪ್ರೇಮದಿಂದಲೆ ಕಾದುತಿರಲು ನಿರ್ನಾಮವನು ಮಾಡಿಸಿದ ಸ್ವಾಮಿಗೆ 24 ಗೃಧ್ರ ಉಲೂಕದ ವೃತ್ತಿಯ ನೋಡಿ ಭದ್ರೆದ್ರೌಪದಿ ಪುತ್ರನನ್ನು ನಿದ್ರೆಕಾಲದಿ ಕೊರಳಕೊಯ್ಯಲು ಶಿರದಲಿದ್ದ ಮಣಿಯ ತೆಗೆಸಿದವಗೆ 25 ದ್ರೋಣಪುತ್ರನ ಬಾಣದಿಂದಲೆ ತ್ರಾಣಗೆಟ್ಟ ಶಿಶುವ ನೋಡಿ ಜಾಣತನದಲಿ ಚಕ್ರವಪಿಡಿದು ಪ್ರಾಣವನು ರಕ್ಷಿಸಿದ ಸ್ವಾಮಿಗೆ 26 ಏಳುಹನ್ನೊಂದು ಸೇನೆಗಳನೆಲ್ಲ ಹಾಳುಮಾಡಿ ಹದಿನೆಂಟುದಿವಸದಿ ಖೂಳಕೌರವರನೆಲ್ಲ ಕೊಂದು ಧರ್ಮನಲಿ ರಾಜ್ಯವಾಳಿಸಿದಗೆ 27 ಸೌಪ್ತಿಕದಲಿ ಪುತ್ರನ ಕೊಲ್ಲಿಸಿ ಸ್ತ್ರೀಪರ್ವದಿ ಭೂಮಿ ಭಾರವಡಗಿಸಿ ಶಾಂತಿಪರ್ವದಿ ಧರ್ಮರಾಯಗೆ ಪಟ್ಟಾಭಿಷೇಕವ ಮಾಡಿಸಿದಗೆ 28 ಮುಸಲದಲಿ ಯಾದವರನಡುಗಿಸಿ ಅನುಶಾಸನದಿ ಧರ್ಮಪೇಳಿಸಿ ಅಶ್ವಮೇಧ ಮಹಾಪ್ರಸ್ಥ ಸ್ವರ್ಗಾರೋಹಣವ ಮಾಡಿಸಿದಗೆ 29 ಅಂದುಪಾರ್ಥಗೆ ಸಾರಥ್ಯವಮಾಡಿ ಬಂಧುಗಳ ಸ್ವರ್ಗವಾಸಮಾಡಿಸಿ ಬಂದು ಬೃಂದಾರಣ್ಯದಲ್ಲಿ ಇಂದಿರೇ ಸಹನಿಂದ ಸ್ವಾಮಿಗೆ 30 ಅನಿರುದ್ಧ ಸಾತ್ಯಕಿ ರುಕ್ಮಿಣಿ ಸಹಿತಲೆ ಬಂದು ನಿಂದವಗೆ 31 [ವರ] ಕಲಿಯುಗದೊಳಗುಳ್ಳ ದುಷ್ಟಕರ್ಮಿಗಳನೆಲ್ಲ ಸಲಹುವೆನೆಂದು ಕೈರವಿಣಿತೀರದಲಿನಿಂದ ಕರುಣಿ ವೆಂಕಟಕೃಷ್ಣನಂಘ್ರಿಗೆ ಮಂಗಳಂ 32
--------------
ಯದುಗಿರಿಯಮ್ಮ
ಮಧ್ವಮುನಿಮನಮಂದಿರನಿವಾಸ ಸಿರಿಕೃಷ್ಣಶುದ್ಧರಿಗೆ ಸದ್ಗತಿ ಮಿಶ್ರರಿಗೆ ಮಧ್ಯವುಸತ್ವರಿಗೆ ನವವಿಧ ಭಕುತಿಯನೆ ತೋರಿಸಿಒಬ್ಬರ ಕರ್ಮದಲಿ ಒಬ್ಬರು ರತರಾಗೆದೇಹ ಸಂರಕ್ಷಣೆಯಲ್ಲಿ ಇನ್ನುದುಷ್ಟಜೀವ ದುಷ್ಟಶಾಸ್ತ್ರ ದುಷ್ಟಕರ್ಮಗಳಿನ್ನುಈ ವಿಧದಲಿನಿತ್ಯಪೊರೆದು ಎನ್ನ ಮರೆದೆ
--------------
ಗೋಪಾಲದಾಸರು
ರಾಮ ರಾಮ ರಾಮ ರಾಮ ರಾಮವೆನ್ನಿರೊ |ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು1ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ 2ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ 3ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ 4ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ 5
--------------
ಪುರಂದರದಾಸರು