ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನ ದಿನವೇ ಶುಭದಿನವು | ಇಂದಿರೇಶನ ಕೀರ್ತಿಯ ಕೊಂಡಾಡಿದೆವೆಂದು ಪ ಮುನ್ನ ಮಾಡಿದ ಜನ್ಮಾಂತರದ ದುಷ್ಕ್ರತವೆಂಬ | ಘನ್ನ ಕೆಸರಸೋಸಿ ಹೃದಯ ಶುದ್ದಾಯಿತೆಂದು 1 ತರಣಿ ಉದಯವಾಗಿ | ಪರಿಹಾರಾಯಿತು ಅಜ್ಞಾನವೆಂಬ ಕತ್ತಲೆಯಿಂದು 2 ಕಂದ ನೊಡೆಯ ತನ್ನ ಸ್ಮರಣೆ ಕೊಟ್ಟನೆಂದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಯ್ಯ ವಾರಿಜನಯನಾ | ಎನ್ನನುದ್ದರಿಸಲಾರೆಯಾ | ದೀನಾನಾಥ ದಯಾಂಬುಧಿಯಂಬಾ | ಶ್ರೀನಾಮದ ಬಿರುದಿನ ಮಹಾಮಹಿಮನಾ ಪ ಪಾತಕ | ತಾ ಮೊದಲಿಗೆ ಇಲ್ಲವೋ ಎನುತಾ | ಆ ಮಹಾಶೃತಿ ಸಾರುತಲಿರೆ ದುಷ್ಕ್ರತ | ನಾ ಮಾಡಿದ ಘನವಾಯಿತೇ ದೇವಾ1 ಗಜಗಣಿಕಾ ಅಜಮಿಳನಹಲ್ಯಾ | ವೃಜಗೋವಳ ವ್ಯಾಧರ ಮೊದಲು | ಭಜನಿಯಿರಲಿ ಇರದಿರಲಿ ಸನಾತನ | ನಿಜಪದದೋರಿದ ಪರಮ ಉದಾರಾ2 ನೀನೇ ಗತಿ ಎಂದಾನತೆ ನಾದೆ | ಇನ್ನೇನು ನೋಡುವಿ ಅಂತವಾ | ನ್ಯೊನವಾರಿಸದೆವೆ ತಾರಿಸು ಪಾಮರ | ವಣನವನನು ಗುರು ಮಹಿಪತಿ ಸ್ವಾಮಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯರ ನಂಬಿರೋ | ರಾಘವೇಂದ್ರಗುರುರಾಯರ ನಂಬಿರೋ ಪ ದುರಿತ ದುಷ್ಕ್ರತ ಹರಿಸಿಪುರುಷಾರ್ಥ ಪರಮವ ಕರಗತ ಕೈಗೊಳ್ಳಿ ಅ.ಪ. ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿವರಮೋಕ್ಷ ಪ್ರದವೆನಿಸುವಂಥ |ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವಧರಣಿ ಸುರರಿಗಿತ್ತು | ಕರುಣವ ತೋರಿದ 1 ರಾಮಕೃಷ್ಣ ನರಹರೀ | ವೇದವ್ಯಾಸಮಾಮನೋಹರ ವೃಂದಾವನದಿವಾಮಾಂಗ ಎನಿಸೀಹ | ಶ್ರೀಮಹಿಳೆಸಹಿತಾಗಿಕಾಮಿತಾರ್ಥದ ಹರಿ | ನೇಮದಿ ನೆಲಸೀಹ 2 ಕೂಸೆರಡರ ವಯದೀ | ಮಂತ್ರಾಲಯದೇಶಕೆ ಪೋಗಿ ಮುದದೀ |ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿಮೇಶ ಗುರುಗೋವಿಂದ | ದಾಸನ್ನಾಗಿಸಿದ 3
--------------
ಗುರುಗೋವಿಂದವಿಠಲರು
ಜಯದೇವ ಜಯದೇವ ಜಯಗೋಪಾಲಕೃಷ್ಣಾ | ಜಯ ಜಯಯೋಗೀ ಮಾನಸ ಮೋಹನ ಘನಕರುಣಾ ಪ ದೇವಕಿವಸುದೇವರ ಭಾವನೆ ಪೂರಿಸಲಿ | ಶ್ರಾವಣ ಕೃಷ್ಣಪಕ್ಷದ ಅಷ್ಟಮಿರೋಹಿಣಿಲಿ || ತೀವಿದ ಚಂದ್ರೋದಯ ರಾತ್ರಿಯ ಕಾಲದಲಿ | ಭುವನದಿ ಅವತಾರವ ಮಾಡಿದೆನೀ ವೇಗದಲಿ 1 ಸೊಕ್ಕಿದ ಕಂಸನ ಕೊಂದು ದುಷ್ಕ್ರತನಾಶನವಾ | ಮುಖ್ಯಮಾಡು ಕಾರಣ ಧರ್ಮ ಸ್ಥಾಪನವಾ || ಸಖ್ಯದಿ ಕಟ್ಟಲು ಉಗ್ರಶೇನಗೆ ಪಟ್ಟವಾ | ಅಕ್ಕರದಿಂದಲಿ ಬೆಳೆದೆ ಗೋಕುಲದಲಿ ದೇವಾ 2 ಕುರುಕುಲಾನ್ವಯ ಜೀವನರೆಲ್ಲರ ಸೆಬಡಿದೆ | ಚರಣವನಂಬಿದ ಪಾಂಡವರನು ಸ್ಥಾಪನಗೈದೆ | ಪರಪರಿಯಿಂದಲಿ ಭಜಿಸುವ ಭಕ್ತಾವಳಿ ಪೊರೆದೇ | ಗುರುವರಮಹೀಪತಿ ಸುತ ಪ್ರಭುಸಲಹೆನ್ನನು ಬಿಡದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು