ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೂವ ಕೊಡೆ ದೇವಿ ಹೂವ ಕೊಡೆಯಾವಾಗಲೂ ನಿಮ್ಮ ಸಿರಿಮುಡಿಯೊಳಗಿರ್ಪ ಪ ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿಪರಿ ಪರಿ ಧೂಪ ಧೂಮಗಳನಿಕ್ಕಿಪರಿಮಳಿಸುವ ಸಂಪಿಗೆಯ ಪೂಸರವ ಸಿಂ-ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ 1 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸರಸಿಜ ಮೊದಲಾದ ಕುಸುಮದಿಂದಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪಅರಳಿದ ಮಲ್ಲಿಗೆ ಹೂವ ಕಂಡೆ ಹೂವ 2 ವ್ಯೋಮಗಂಗೆಯೊಳಿಂದ ಹೇಮಕಾಮರಸವಕಾಮಿನಿಯರು ಕೊಯ್‍ತಂದದನುಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ 3 ಮುತ್ತಿನ ಲಹರಿಯ ರತ್ನದ ರಾಗಟೆಯಸುತ್ತ ಮುತ್ತಲೂ ರಾರಾಜಿಸುವಪುತ್ಥಳಿಯ ಚಿನ್ನದಂತೆ ಘಮಘಮಿಸುವಉತ್ತಮವಾದ ಸುವರ್ಣದ ಕೇದಗೆ ಹೂವ 4 ಜಾತಿ ರತ್ನದ ನಡುವೆ ಜ್ಯೋತಿಯ ತೆರನಂತೆನೂತನವೆನಿಸಿ ಪ್ರಜ್ವಲಿಸುತಿಹಶಾತಕುಂಭದ ಚೌರಿಯ ಮೇಲೆ ಮುಡಿಸಿದಜಾತಿಮಲ್ಲಿಗೆ ಸಂಪಿಗೆ ಸೇವಂತಿಗೆ ಹೂವ 5 ಇಂದೀವರದಳನಯನೆ ಶುಭಪ್ರದೆಇಂದು ನಿಭಾನನೆ ಹೂವ ಕೊಡೆಮಂದಗಮನೆ ನಿಮ್ಮ ತುರುಬಿನೊಳೊಪ್ಪುವಮಂದಾರದ ಮೋಹನ ಮಾಲಿಕೆಯೆಂಬ ಹೂವ 6 ಚಂದ್ರಗಾವಿಯ ಸೀರೆ ಚೆಲುವ ಮುತ್ತಿನಸರದಿಂದಲೆಸೆವ ದೇವಿಹೂವ ಕೊಡೆಮುಂದಲೆ ಮುತ್ತಿನ ಸರದ ಮೇಲೊಪ್ಪುವಬಂಧುರಪೂಗಪುನ್ನಾಗ ಪಾರಿಜಾತದ ಹೂವ 7 ದೇವಿ ನಿಮ್ಮನು ಪೂಜೆಗೈದು ಮೆಚ್ಚಿಸಬಲ್ಲನಾವನೀ ಧರೆಯೊಳುಹೂವ ಕೊಡೆಪಾವನಾತ್ಮಕಿಯ ಪರಾಕ ಮಾಡದೆ ವರ-ವೀವ ಸಮಯವಿದು ಹೂವ ಕೊಡೆ ಹೂವ 8 ಮುತ್ತೈದೆತನವನು ನಿತ್ಯ ಸೌಭಾಗ್ಯವಉತ್ತಮ ಧನಕನಕಾಂಬರವಪುತ್ರ ಸಂತಾನವ ಕೊಡುವೆನೆನುತ ಕರ-ವೆತ್ತಿ ಅಭಯವಿತ್ತು ಹೂವ ಕೊಡೆ ಹೂವ 9 ಎಂದೆಂದೂ ಈ ಮನೆಗೆ ಕುಂದದ ಭಾಗ್ಯವಚಂದವಾಗಿಹ ಛತ್ರಚಾಮರವಚಂದ್ರ ಸೂರ್ಯರ ಪೋಲ್ವ ನಂದನರನುದಯ-ದಿಂದಲಿ ಕೊಟ್ಟು ರಕ್ಷಿಪನೆಂದು ಸೂಡಿದ ಹೂವ10 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮ ಪಟ್ಟದ ರಾಣಿ ಪಾರ್ವತಿ ನಿಮ್ಮಯಸಿರಿಮುಡಿಯೊಳಗಿರ್ಪ ಹೂವ ಕೊಡೆ ಹೂವ 11
--------------
ಕೆಳದಿ ವೆಂಕಣ್ಣ ಕವಿ
ಥರವೆ ಪೋಗೋದು ನೀನು ಕರವೀರಪುರಕೆ ಹೀಗೆ ಪ ಲೋಲ ಲೋಚನೆ ಕೇಳೆ ಆಲದೆಲೆಯ ಮ್ಯಾಲೆಲೋಲಾಡುತ ಸುಕಲ್ಪದಿ ಮರೆತೀಗ ಅ.ಪ. ಮಂದಜಾಕ್ಷಿಯೆ ನಿನ್ನ ಮಂದಹಾಸಕೆ ಮೆಚ್ಚಿಸುಂದರ ವೈಕುಂಠ ಮಂದಿರ ಕಟ್ಟಿಸಿದ 1 ಹಿಂದೆ ಒಂದು ಮುನಿ ತಂದ ಕುಸುಮವನ್ನು ದಯ-ದಿಂದಲೆ ಮುಡಿಸಿದ ಇಂದಿರೇಶನ ಬಿಟ್ಟು 2
--------------
ಇಂದಿರೇಶರು
ಭವ ಶರಧಿ ತಾರಕನೇ - ನಾಕರವಾ ಮುಗಿವೆ - ಎನ್ನ ಕರುಣದಲ್ಲಿ ನೋಡೋ ಪ ಎರಡು ಭಾಗದಿ ಶ್ರೀ ಧರಣೇರಿಂದೊಪ್ಪುತತ್ವರಿತದಿ ದಯಮಾಡು ಉರಗಾಗಿರಿ ವೆಂಕಟ ಅ.ಪ. ತೇರಿನೊಳಿಪ್ಪ ಶೃಂಗಾರ ಪುರುಷನೆ ಬಂ-ಗಾರ ಮಾಣಿಕದಲಂಕಾರವ ಧರಿಸಿದಮಾರಮಣನೆ ವನಜಾರಿವದನ ಬಲು-ಶೂರ ಸಮರಧೀರ ನಾರಾಯಣ ಕಂಸಾರೇ ||ನರ ಕಂಠೀರವ ಕಮಲನಾಭನಾರದ ಮುನಿ ಪ್ರಿಯ ಚಾರು-ಚರಿತ ಪನ್ನಗಾರಿಗಮನ ಮದ-ನಾರಿಯ ಸಲಹಿದ ಧೀರ ಮುರಾರಿ 1 ನಿಂದರೆ ಬಪ್ಪುದು ಸಿಂಧುಶಯನ ದಯ-ದಿಂದ ಎನ್ನನು ನೋಡು-ಕಣ್ದೆರೆದೀಕ್ಷಿಸಿ |ಕಂದಗೊಲಿದು ಕಂಬದಿಂದ ಬಂದಸುರನಕೊಂದು ಕರುಳಹಾರ ಕಂಧರದಿ ತಾಳಿದೇ ||ಮಂದಮತಿವನೆಂದಲೇ ಗೋ-ವಿಂದ ಗೋವಳ ವೃಂದದೊಡನೆ ಕಾ-ಳಿಂದಿಯ ಧುಮುಕಿ-ಫಣೀಂದ್ರನ ಶಿರದಲಿಧಿಂ ಧಿಮಿ ಧಿಮಿಕೆಂದು ಕುಣಿದ ಹರಿ 2 ಜಲದೊಳ ಪೊಕ್ಕು ಆ ಇಳೆಯ ತಸ್ಕರನು ದುಂ-ಬಲಗೊಂಡು ಮಡುಹಿ ನಂಬಿದ ಪ್ರಹ್ಲಾದ ಹಂ-ಬಲಿಸೆ ಧರ್ಮದಿ ಕಾಯ್ದೆ ಸಲೆ ಕ್ಷತ್ರಿಯಕುಲವನಳಿದೆ-ನಿನ್ನೊಳು ನೀನೇ ಕಾಯ್ದೆ ||ಮಲೆತ ಮಾವನ ಕೊಂದೆ ಸಲೆಖಳ ತ್ರಿಪುರನ ಗೆದ್ದು ಕಲಿಯ ಸಂಹರಿಸಿದೆಸುಲಭ ಮೂರುತಿ ಮೋಹನವಿಠ್ಠಲಚೆಲುವ ತಿರುವೇಂಗಳ 3
--------------
ಮೋಹನದಾಸರು
ನೀನಲ್ಲದನ್ಯರೆ ಸಲಹಲು ಕಾಯೊ |ಜಾನಕೀಪತಿ ದೂತ ಹನುಮಂತ ಪಗುರುವೆ ನಿನ್ನಯಪಾದಭಜಿಸುವರನ್ನ |ಧರೆಯೊಳು ಬನ್ನಬಡಿಸುವೋರೆ ||ಗಿರಿಸುತ ನೀ ಗತಿಯೆನಲಾಗ ಬೇಗ |ಪೊರೆದೆಯಾತನ ಜಲಧಿಯೊಳಿಟ್ಟು1ರವಿಜಶಕ್ರಜನಿಂದ ಬಳಲುತ ಬಂದು |ಪವನ ಪಾಲಿಪುದೆನ್ನಲಾಕ್ಷಣ ||ಭುವನೇಶನಿಂದ ವಾಲಿ ಕೊಲ್ಲಿಸಿ ಕಾಳೀ |ಧವಸುಗ್ರೀವನ ಭಯ ಬಿಡಿಸಿದೆ2ತಂದೆ ಪ್ರಾಣೇಶ ವಿಠ್ಠಲನಿಗೆ ನಿನಗಂ |ದುಂಟಿಂದಿಲ್ಲೇ ಈ ಮಹಿಮೆಯು ||ಬಂದದುರಿತನಿವಾರಣ ಮಾಡಿ ದಯ-ದಿಂದ ಪಾಲಿಸೋ ನಿನ್ನ ದಾಸರ 3
--------------
ಪ್ರಾಣೇಶದಾಸರು