ಚರಣವನೀಗ ಹೊಂದಬೇಡ ಕೇಡಿಗಗುರುವಿನ ಚರಣವನೀಗ ಹೊಂದಬೇಡ ಪ
ಜಾರಣ ಮಾರಣ ಬೋಧಿಸಿ ಗುರುವಜೀವನ ನೀಗಲೆ ತಿನ್ನುವ ಗುರುವಕಾರಣಿಕವನೆ ನುಡಿಯುವ ಗುರುವಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ 1
ಮಹಿಮೆ ಗಿಹಿಮೆ ತೋರುವ ಗುರುವಮರಳಿ ಜನ್ಮಕೆ ತರುವ ಗುರುವದಹಿಸಿ ಮನೆಯ ಹೋಹ ಗುರುವದಂಡಣೆಯ ಗುರುವ ಕೇಡಿಗ ಗುರುವ 2
ಹರಿದು ತಿನ್ನುವ ಮೋಸದ ಗುರುವಬರಕತವಿಲ್ಲದ ಗುರುವಕರಕೊಳ್ಳುತಲಿರುವ ಕರ್ಮಿತಾಗುರುವ ಕೇಡಿಗ ಗುರುವ 3
ಶಾಂತಿ ಶಮೆ ದಮೆಗಳು ದೊರಕದ ಗುರುವಸೈರಣೆ ಎಂದಿಗು ನಿಲುಕದ ಗುರುವಕರುಣೆಯ ತಾತೋರದ ಗುರುವ ದಯವಿಲ್ಲದಗುರುವ ಕೇಡಿಗ ಗುರುವ4
ಆಸೆಯನು ಬಿಡದಿಹ ಗುರುವಅಂಗದ ಹಸಿವನು ತಿಳಿಯದ ಗುರುವಬಾಸ ಚಿದಾನಂದನ ನರಿಯದ ಗುರುವಬ್ರಹ್ಮನಾಗದ ಕೇಡಿಗ ಗುರುವ 5