ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಸೀತಾ ಮಹಾಮಂತ್ರ ಭವಾಬ್ದಿ ದಾಂಟುವಾ ಮಂತ್ರಾ ನಿತ್ಯ ಅನುದಿನಾ ಪಠಿಸುತಿರುವಾತಾ ಮುಕುತಿಪಂಥ ಪಡೆವ ನಿರುತಾ ಇದೇ ದೇಹದಲಿ ತಾನಿರುತಾ 1 ವಿರಾಗಿಯಾಗಿ ಮನದಲ್ಲಿ ಪರಾನಂದಾತ್ಮರೂಪವನು ತಿಳಿಯುವಾ ಚೈತನ್ಯರೂಪವನು ಇದೇ ಗೀತಾಪರಣಫಲ ತಾ ಪ್ರಶಾಂತಾಕಾಮನಾಗಿರುತಾ 2 ನಿಧಾನಾ ನೊಂದಮನನಿಗಿದೆ ಪ್ರಧಾನಾ ಶಾಸ್ತ್ರ ಸಂಚಯ ದೇ ಪ್ರಧಾನಾ ಷಟ್‍ಶಾಸ್ತ್ರ ಸಂಚಯದೇ ಸದಾ ಧ್ಯಾನಾ ಇದೇ ಮನನಾ ಮನುಜನೇ ಇದುವೆ ಸುಖತಾಣಾ 3 ತಿಳಿ ನೀ ಗೀತೆಯಾ ಬೋಧಾ ಅಳಿ ನೀ ಜೀವಪರ ಬೇಧಾ ತಿಳಿ ನೀ ಪರಮಾತ್ಮಪದ ಬೋಧಾ ಪಡೆವ ಮೋದಾ ಶ್ರವಣದಿಂದಾ ಇದೇ ಶ್ರೀ ಶಂಕರನ ಬೋಧಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಬಾ ಶಿವಪುತ್ರನೆ ಶ್ರೀಶನ ಮಿತ್ರನೆ ಪ ಬಾ ಸುರವಂದ್ಯನೆ ವಾಸುಕಿಗೊಲಿದನೆ | ಬಾ | ಅ ಕುಂದರದಾನನ ಸುಂದರ ಕಾಯನೆ ಬಾ 1 ನೀರಜ ನೇತ್ರನೆ ಮಾರಸ್ವರೂಪನೆ ಬಾ 2 ವಲ್ಲಿಯ ರಮಣನೆ ಖುಲ್ಲರ ದಮನನೆ ಬಲ್ಲಿದರೊಡೆಯನೆ | ಮಲ್ಲ ಸಾಹಸನೆ | ಬಾ | 3 ಶಿಷ್ಟರ ರಕ್ಷನೆ ದುಷ್ಟರ ಶಿಕ್ಷನೆ | ಕುಷ್ಠ ವಿನಾಶನೆ ಇಷ್ಟವ ಕೊಡುವನೆ | ಬಾ | 4 ದೋಷ ವಿನಾಶನೆ ನಾಶ ರಹಿತನೆ ದಾಸರ ರಕ್ಷ ಪಾವಂ | ಜೇಶನೆ ಸ್ಕಂದನೆ | ಬಾ | 5
--------------
ಬೆಳ್ಳೆ ದಾಸಪ್ಪಯ್ಯ
ಭಜಿಸಿ ಬದುಕೆಲೋ ಮಾನವ ಶ್ರೀಹರಿನಾಮ ತಾರಕಮಂತ್ರವ ಪ. ದುರಿತಕೋಟಿಗಳಂ ಪರಿಹರಿಸಿ ನಿಜಪದ ಸರಸೀರುಹದೊಳಗಿರಿಸಿ ಪೊರೆವನ 1 ದುರ್ಜನ ನಿಂದೆಗೆ ಲಜ್ಜಿತನಾಗದೆ ದುರ್ಜನ ದಮನನ ಧ್ಯಾನದೇ ನೀಂ 2 ಪೊಗಳಲು ಹಿಗ್ಗದೆ ತೆಗಳಲು ತಗ್ಗದೆ ಬಗೆಕುಂದದೆ ಸಮ್ಮೋದದೇ ನೀಂ 3 ಅಷ್ಟಮದಂಗಳ ಕಟ್ಟುತೆ ದೃಢದಿ ದೃಷ್ಟಿನಿಲ್ಲಿಸಿ ನಿಷ್ಠೆಯೋಳ್ ನೀಂ4 ದೋಷರಹಿತ ಶ್ರೀಶೇಷಗಿರೀಶನ ದಾಸರವಾಸನೆನ್ನಿಸಿ ಸಂತತಂ 5
--------------
ನಂಜನಗೂಡು ತಿರುಮಲಾಂಬಾ