ಹರಿ ನಂಬಿದವರಿಗೆ ಸರಿಯೆ ಜಗದೊಳು
ಹರಿದಾಸಾದವಗೆ ಸಕಲ ಮಾನ್ಯವಗೆ ಧ್ರುವ
ಹರಿ ಜ್ಞಾನವುಳ್ಳವಗೆ ದಣಿವಿಕೆಲ್ಲಿಹದವಗೆ
ಹರಿಧ್ಯಾನ ಉಳ್ಳವಗೆ ತಾಂ ದುರಿತವೆಲ್ಲಿಹದವಗೆ 1
ಹರಿನಾಮ ಉಳ್ಳವಿಗೆ ನಾಸ್ತಿಕವೆಲ್ಲಿಹದವಗೆ
ಹರಿ ದಯುಳ್ಳವಗೆ ದನ್ಯವೆಲ್ಲಿಹದವಗೆ 2
ಹರಿಯ ಭಾವಿಕರಿಗೆ ಭವವುಂಟೆ ಅವಗೆ
ಹರಿ ಭಕ್ತಿಯುಳ್ಳವಗೆ ತಾ ಭಯ ವೆಲ್ಲಿಹದವಗೆ 3
ಹರಿದಾಸರದಾಸಾದ ಮಹಿಪತಿಗೆ ಸರಿಯುಂಟೆ
ಪೂರ್ವಪುಣ್ಯದ ಫಲಶ್ರುತಿಗೆ 4