ಕನ್ನೆ ಪ್ರಾಯದ ಹೆಣ್ಣು ಕಾಣಿರೊ [ಅ
ದನ್ನ] ಕಂಡು ಪರಲೋಕ ಸೂರೆಯ ಮಾಡಿರೊ ಪ
ಸನ್ನೆಯು ತೋರುವ ಗುರುಗಳಿಗೆರಗೂ ಪ್ರ
ಸನ್ನಳಾಗುತ್ತಿಹ ಕಡುಚೆಲ್ವೆಯೀನಮ್ಮಾ ಅ.ಪ
ಬ್ರಹ್ಮನ ಮಗನಾಗಿ ಹೇತ್ತಳು ಪರ
ಬ್ರಹ್ಮವೆ ತಾನಾಗಿ ನಿಂತಳು
ಸಂಹಾರ ಉತ್ಪತ್ತಿ ಪೋಷಕತ್ವದೊಳೊಳ್ಳೆ
ಸಿಂಹಾಸನದೊಳಗಿರುತಾಳೆ 1
ಕಾಮಾದಿಗಳನೆಲ್ಲ ನೀಗಿಯೂ ಗುರು
ನೇಮದೊಳು ತಲೆ ಬಾಗಿಯೂ
ಆ ಮಹಾ ಜ್ಯೋತಿ ಬೆಳಕಿನೊಳಿರುವಾ
ಈ ಮಹ ಮೋಕ್ಷಕಾಮಿನಿಯೆಂಬುವ ಕನ್ನೆ 2
ವನಗೂಡುವಂದಾವ ಕಾಣಿರೋ ನಿಮ್ಮ
ಮನದೊಳು ನಿಚ್ಚಯ ಮಾಡಿರೋ
ಘನಗುರು ತುಲಸೀರಾಮದಾಸನೂ
ಅನುಮತಿಕೊಂಡಿಹ ಕಡುಚೇಲ್ವೆ ಯೀನಮ್ಮಾ 3