ಮಾಮನೋಹರಾ ಮುರಾರಿ ಬಾರೋ ಪ
ಕರಿವರದಾಯಕ ಮರಚಮುಸ್ಥಾಪನ |
ಶರಣಾಗತ ಸಹಕಾರಿ ಬಾರೋ |
ಸರಸಿಜಾಸನ ವಂದಿತಾಂಘ್ರಿ | ದುರಿ |
ತಾಚಲ ವಜ್ರಧಾರಿ ಬಾರೋ 1
ಮನೋಜನಿತ ಜನಕರವಿಂದ ಲೋಚನ |
ಮುನಿಜನ ಹೃದಯ ವಿಹಾರಿ ಬಾರೊ|
ಘನಮಹಿಮ ಸುದಾಮ ರಕ್ಷಕಕ |
ದನುಜಾವಳಿ ಮದಹಾರಿ ಬಾರೋ 2
ಕಾಲ ಪಯೋಧರ |
ಮಂದರೋದ್ಧಾರಿ ಬಾರೋ |
ನಂದನಾತ್ಮಜ ದೇವ ಮಹಿಪತಿ |
ನಂದನ ಪ್ರಭು ಉದಾರಿ ಬಾರೋ3