ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಣ್ವೆನೊ ಇಂದಿರೇಶನ ದಿವ್ಯಚರಣ ಎಂದು ಕಾಣ್ವೆನು ಪ ಎಂದು ಕಂಡಾನಂದಿಸುವೆನು ಮಂದರೋದ್ಧರ ಸಿಂಧುಶಾಯಿಯ ಸುಂದರ ಪಾದಾರವಿದಂಗಳನು ನಿಂದು ಮನದಣಿ ನೇತ್ರದಿಂದ ಅ.ಪ ದನುಜಾರಿಯ ಘನಮಹಿಮೆ ಜನಕಜೆಯ ಪ್ರಾಣಪ್ರಿಯನ ಮಿನುಗುವ ದಿನಮಣಿಕೋಟಿತೇಜೋಮಯನ ಘನಕೋಮಲ ನಿಜರೂಪ ಕಣ್ಣಿಲಿಂ ನೋಡ್ಹಿಗ್ಗುವ ದಿನ 1 ಕರಿಯ ಕಾಯ್ದನ ಕರುಣದಿಂದ ತರುಣಿಗ್ವಂದನ ಶರಣೆನುತ ಮರೆಬಿದ್ದವಗೆ ಸ್ಥಿರಪಟ್ಟವ ಕರುಣಿಸಿದನ ಕಾಲ 2 ಪಕ್ಷಿಗಮನನ ಲಕ್ಷ್ಮೀನಾಥ ಸಹಸ್ರಾಕ್ಷಶಯನನ ಲಕ್ಷವಿಟ್ಟು ಭಕ್ತರನ್ನು ರಕ್ಷಿಸಿ ಭಕ್ತವತ್ಸಲನೆಂಬ ನೋಡುವ ಪದವಿ 3
--------------
ರಾಮದಾಸರು
ಪವಮಾನ ಪಾಲಿಸೆನ್ನ ಸದ್ಗುಣಘನ್ನ ಪ ಪವಮಾನ ಪೊರಿಯೆನ್ನ ಕವಿಭಿರೀಡಿತ ನಿನ್ನ ಸ್ತವನಗೈಯುವ ಮಾನವರೊಳಧಮ ನಾನು ಪವಮಾನ ಪಾಲಿಸೆನ್ನ ಅ.ಪ ಪತಿ ಶಿವ ಮುಖ ದಿತಿಜಾರಿತತಿನುತ ಶ್ರುತಿ ಪ್ರತಿಪಾದ್ಯ ಆ ನತ ಬಂಧು ತತ್ವಾಧಿ ಪತಿಗಳೊಳುತ್ತಮ ಪ್ರಥಮಾಂಗ ಹರಿ ಪ್ರೀಯ ದ್ವಿತಿಯುಗದಲಿ ಕಪಿ - ನೀರಜ ಪತಿಯಪಾದದ್ವಯ ಅತಿಹಿತದಲಿ ಸೇವಿಸಿ ಲವಣಾರ್ಣವ ಶತಯೋಜನವ ಲಂಘಿಸಿ ರಾಕ್ಷಸಕುಲ ಹತಗೈಸಿ ಪುರದಹಿಸಿ ದೇವಿಯ ಸುವಾರುತಿಯ ತಿಳಿಸಿ ಭಾವಿದ್ರುಹಿಣನೆಂದೆನಿಸಿ 1 ಕುರುಕುಲದಲಿ ಕುಂತಿ ತರುಳನೆನಿಸೆ ಯುಧಿ ಷ್ಟರನನುಜ ವೃಕೋದರ ನಾಮದಲಿಯವ ತರಿಸಿ ಬಕಾದಿ ದುಷ್ಟರ ಶಿಕ್ಷೆಯನು ಗೈಸಿ ಹರಿಇಚ್ಛೆಯಲಿ ವನಚರಿಸಿ ಕೀಚಕನ ಸಂ ಹರಿಸಿ ದುಶ್ಯಾಸÀನಾದ್ಯರನೆಲ್ಲರಣದೊಳು ದುರುಳದುರ್ಯೋಧನನಸಾನುಜಗಣ ತ್ವರಿತಗೈಸಿ ಹನನ ವಿಜಯನಾಗಿ ಪೊರೆದೆ ಧರ್ಮಾರ್ಜುನನ ತ್ರಿಭುವನದಿ ಸರಿಗಾಣೆ ದ್ವಿಜರಿಪು ಪದುಪಂಚಾನನ 2 ಮಣಿಮಂತ ಮೊದಲಾದದನುಜರು ಹರಿದ್ವೇಷ - ವನು ಮಾಡಲೋಸುಗವನಿಯೊಳುದ್ಭವಿಸಿ ನಿ - ರ್ಗುಣರೂಪ ಕ್ರೀಯ ಬ್ರಹ್ಮನೆನುತ ಹರಿಯತಾ ನೆನಿಪ ದುರ್ಮತವನ್ನು ಘನವಾಗಿ ಪ್ರಬಲಿಸಿ ದನುಜಾರಿಯಾಙÁ್ಞದಿ ಮುನಿಮಧ್ಯ ಸತಿಯಲ್ಲಿ ಮುನಿಮಧ್ವನೆಂದೆನಿಸಿ ಜನಿಸಿ ಕುಮತವನು ಶಾಸ್ತ್ರದಿ ಖಂಡಿಸಿ ಹರಿಯೆ ಪರನೆನಿಪ ಮತವಸ್ಥಾಪಿಸಿ ಮೆರೆದೆ ಈ ಧಾರುಣಿಯೊಳು ವರದೇಶ ವಿಠಲನ ವಲಿಸೆ 3
--------------
ವರದೇಶವಿಠಲ
ಬಂದನು ರಘುವೀರ ರಣಧೀರ ಪ ತಡೆ ಭರತನೆ ಮುಂದಡಿಯಿಡಬೇಡ ದುಡುಕಿ ಬೀಳದಿರು ಬಡಜನ ಮುಖಕೆ 1 ಸೀತಾನಾಥನ ದೂತನಾದೆನ್ನ ಮಾತನು ಕೇಳು ಆತುರಪಡದೆ 2 ಭ್ರಾತನ ನೋಡಲು ಕಾತರನಾಗಿ ವಾತವೇಗದೊಳು ಆತನು ಬರುತಿಹ 3 ಅದೊ ನೋಡದೊ ನೋಡದರ ದೆಶೆಯಲಿ ವಿದುಶತಕಿಲ್ಲದಗದಿರದದ್ಯುತಿಯ 4 ಅದೊ ಪುಷ್ಪಕವು ಅದರ ಪ್ರಭೆ ನೋಡು ಅದರಿರವ ನೋಡು ಒದಗಿ ಬರುತಿದೆ 5 ಧಾಮ ಮಧ್ಯೆ ನಿ ಸ್ಸೀಮ ನಿಮ್ಮಣ್ಣ ರಾಮನ ನೋಡು 6 ವಾಮದಿ ಸೀತಾಭಾಮೆ ಕುಳ್ಳಿಹಳು ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ 7 ಬಲದಿ ಸುಗ್ರೀವ ನೆಲೆಸಿಹ ನೋಡು ಕೆಲದಿ ವಿಭೀಷಣ ನಲಿಯುತ ನಿಂತಿಹ8 ಅಂಗದ ತನ್ನಯ ಜಂಘೆಲಿ ದೇವನ ಮಂಗಳ ಚರಣವ ಹಿಂಗದೆ ಸೇವಿಪ 9 ವೃದ್ಧ ಜಾಂಬವ ಗದ್ದುಗೆ ಮುಂದಿಹ ಯುದ್ಧ ಪ್ರವೀಣರು ಸಿದ್ಧರಾಗಿಹರು 10 ಉಳಿದ ಕಪಿ ದನುಜ ದಳಗಳು ಹಿಂದೆ ಕಲಕಲ ಮಾಡುತ ಉಲಿಯುತಲಿಹವು 11 ಅರರೆ ವಿಮಾನವು ತಿರುಗಿತು ನೋಡು ಧರಣಿಗೆರಗುತಿದೆ ಭರದೊಳು ನೋಡು 12 ಭಳಿರೇ ರಾಮನು ಇಳಿದನು ನೋಡು ಕಳವಳವೆಲ್ಲವ ಕಳೆಯುತ ನೋಡು 13 ಬಂದನು ಅದಕೊ ಬಂದೇ ಬಂದನು ಇಂದುಮುಖಿಯ ತಾ ಹಿಂದಿಟ್ಟುಕೊಂಡು14 ಮುಂದೆ ಬರುವ ಕಪಿಯನು ಉಳಿದು ಸುಂದರ ಮುಖವು ಕುಂದಿದೆ ನೋಡು 15 ನಡೆದು ಬರುತಿಹ ಮಡದಿಯೊಡಗೂಡಿ ತಡಮಾಡದಿರು ಪೊಡಮಡು ಪೋಗು 16 ಇಂತು ನುಡಿದು ಧೀಮಂತನಾದ ಹನು- ಮಂತ ಚಿಗಿದು ಖಗನಂತೆ ಬಂದಿಳಿದ17 ವಾತಸುತನ ಸವಿಮಾತಲಿ ಭರತನು ಪ್ರೀತಿಲಿ ತಿರುಗಿದನಾತುರದಿಂದ 18 ನೋಡುತ ರಾಮನ ಓಡುತ ಬಂದೀ ಡಾಡಿದ ತನುವ ಬಾಡಿದ ಮುಖದಿ 19 ಅನುಜನ ನೋಡಿ ದನುಜಾರಿಯಾಗ ಮನ ಮರುಗಿದ ಬಲು ಕನಿಕರದಿಂದ 20 ರಂಗೇಶವಿಠಲ ಕಂಗಳ ಜಲದೊಳು ಮಂಗಳಯುತನಾಲಿಂಗನಗೈದ 21
--------------
ರಂಗೇಶವಿಠಲದಾಸರು