ಆದಿಕೇಶವಗರ್ಥಿಯಲಿ ನಾನಾರ್ತಿ ಮಾಡುವೆನು
ಆರ್ತಿ ಮಾಡುವೆ ನಾ ಮಂಗಲಾರ್ತಿ ಮಾಡುವೆನು ಪ
ಶೀಳಿ ದೈತ್ಯನ ಲೀಲೆಯಲಿ ಮಂಗಳೋಲೆ ತಂದವಗೆ
ವ್ಯಾಲತಪ್ಪಿದ ಶೈಲವನು ಬೆನಮ್ಯಾಲೆ ಪಿಡಿದವಗೆ
ಖೂಳಗೆ ತೋರಿದ ... ಪದಗೋಲ ತಂದವಗೆ
ಬಾಲಗೆ ಪಿತ ಗೋಳು ಮಾಡಿದ ಕೇಳಿ ಆ ದೈತ್ಯನ ಶೀಳ್ದವಗೆ 1
ಭೂಮಿಯ ಬೇಡಿ ನಿಸ್ಸೀಮ ಬಲಿನೃಪನಾ
ಹಮ್ಮು ಕರಗಿಸಿ ಪಾತಾಳಕಟ್ಟಿದವಗೆ
ನೇಮದಲಿ ಕ್ಷಾತ್ರಸ್ತೋಮವ ನಿರ್ನಾಮ ಮಾಡ್ದವಗೆ
ದಶಶಿರ ನಾಮವಳಿದ ಶ್ರೀರಾಮ ಚಂದಿರಗೆ
ಸೋಮಕುಲದ ಸುನಾಮಿ ವರ್ಗಕೆ
ಪ್ರೇಮರಸ ಸತ್ಯಭಾಮಾವರಗೆ 2
ಹರನ ಬಲಪಿಡಿದರೀ ತ್ರಿಪುರಸಂಹರೀಸಿದ ಶಿರಿವರಗೆ
ಹರಿಯನೇರಿ ದನುಜಾರನ್ನೆಲ್ಲ ಸವರೀದ ಭೂವರಗೆ
ಶರಣಜನರೊಳು ಕರುಣವಿರಿಸಿ ನಿರುತ ಪೊರೆದವಗೆ
ಶ್ರೀ ನರಸಿಂಹವಿಠಲನಿಗೆ 3