ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜ್ಯಾಕೆ ಎಲೆ ಮನುಜ ಭಯವಿಲ್ಲ ನಿನಗೆ ಕಂಜನಾಭನ ಧ್ಯಾನವಿರಲಿ ಮನದೊಳಗೆ ಪ ತಾಪತ್ರ ಬಂದೊದಗೆ ಪಾಂಡುಪ್ರಿಯನೆಂದೆನ್ನು ಶಾಪವೊದಗಲು ಅಂಬರೀಷನ್ವರದೆನಲೋ ಭೂಪತಿಗಳು ಮುನಿಯೆ ಪಾಂಚಾಲಿಪಾಲಕನೆನ್ನು ಆಪಾರ ಕಷ್ಟದಲಿ ಕರಿವರದೆನೆನಲೋ 1 ಮಾತೃ ವೈರ್ಯಾದರೆ ಧ್ರುವಪಾಲನೆನಲೋ ಭ್ರಾತೃವೈರ್ಯಾದರೆ ಸುಗ್ರೀವಸಖನೆನ್ನು ಖಾತ್ರಿಯಿಂ ಸತತದಿ ಸೂತ್ರಧಾರೆನಲೋ 2 ಸೆರೆಮನೆಯು ಒದಗಿರಲು ಪಿತಮಾತೆರ್ವರದೆನ್ನು ಧುರದೊಳಗೆ ಪೊಕ್ಕಿರಲು ನರಸಹಾಯನೆನಲೋ ಬರಿ ಮಳೆಯೊಳ್ಸಿಕ್ಕಿರಲು ಗಿರಿಯೆತ್ತಿದವನೆನ್ನು ದುರುಳರ್ಹಾವಳಿಯೊಳಗೆ ದನುಜಹರನೆನಲೋ 3 ಕವಿಯಲು ವೈರಿಗಳು ಕಂಸಮರ್ದನನೆನ್ನು ಶಿವನ ಕಾಯ್ದವನೆನ್ನು ಉರಿಹತ್ತಿಸುಡಲು ಭವಿಜನುಮ ಬಂದಿರಲು ಭವರೋಗಹರನೆನ್ನು ದಿವನಿಶೆಯು ಎಡೆಬಿಡದೆ ಭಯದೂರನೆನಲೋ 4 ಸ್ಥೂಲಭ್ರಷ್ಟನಾದರೆ ಬಲಿದ್ವಾರಪಾಲಕನೆನ್ನು ಕುಲಭ್ರಷ್ಟನಾದರಜಮಿಳನ್ವರದನೆನಲೋ ಇಳೆಮೂರು ಸಂರಕ್ಷ ಚೆಲುವ ಶ್ರೀರಾಮನಂ ಹಲವು ವಿಧದಲಿ ಭಜಿಸಿ ಫಲಗಳಿಸು ಬಿಡದೆ 5
--------------
ರಾಮದಾಸರು
ಕೌಸಲ್ಯಾಗರ್ಭಾಬ್ಧಿಸೋಮಾ ಸ್ವಾ'ು ಕೌಶಿಕ ಮಖಪಾಲ ರಾಮ ಪಆಶಯೇಶಯ ಜನಕ ಪಾಪ'ನಾಶ ತಾಪಸಹೃದಯ ಕಮಲಾವಾಸ ಭದ್ರ ಗರೀಶ ರಘುಕುಲಭೂಷ ದಶ'ಧ ವೇಷಧಾರಿ 1ತೃತಿಯರಾಮಕೋಟಿ ಕೂಡು ಭಕ್ತತತಿಗೆ ಲಭಿಸುವಂತೆಮಾಡುಪತಿತಪಾವನ ಪದ್ಮನಯನ ಶತಧೃತಿ ಶಿವಸೇವ್ಯಚರಣಾಸತತವೂ ತವಸೇವೆಗೆ ಮನ 'ತವತೋರಿಸಿ ಸಲಹೋ ಶೌರಿ 2ಭರತಪೂರ್ವಜ ದೀನಪ್ರೇಮಾ ದನುಜಹರಣಧುರೀಣ ನಿಸ್ಸೀಮಕರಿಧ್ರುವ ಪ್ರಹ್ಲಾದ ಶಬರೀ ನರಸತಿಪರಮಾರ್ಥದಾಯಕನಿರುಪಮಾನದ ರಾಮಕೋಟಿಯಾಚರಣ ಕೀರ್ತಿಯ ನಿಲಿಸು ಧೊರೆಯೆ 3ಧಾರುಣೀ ಚನ್ನಪಟ್ಣೇಶಾ ಲಕ್ಷ್ಮೀನಾರಾಯಣ ಕಾಯೊ ಶ್ರೀಶಾಮಾರಸುಂದರ ರಾಮನಾಮವ ಹಾರವಾಯಾಗಿ ಸಮರ್ಪಿಸಿದೆವುಕೋರಿಕೆ ಸಪ್ತೋತ್ಸವಂಗಳು ಪೂರ್ತಿಮಾಡುವರೆಂದು ನಂಬಿದೆ 4ಗುರುತುಲಸೀರಾಮಸ್ವರೂಪ ನಿಮ್ಮಕರುಣದಿಂದಲಿಸಾರಿಭೂಪಾಜರುಗಿಸಿದಿರೀ ಜಪಾಧ್ವರವನು ಮುರಹರೀಮದ್ದುರಿತ ಹರಣನೆನಿರತಭಕ್ತಿಯ ಕೊಟ್ಟು ಪ್ರಜಗಳುನುದ್ಧರಿಸುವ ಕರ್ತವ್ಯ ನಿನದೇ 5ಭೂ'ುಜನರ ಗರುಡುತುರಗಾ ರಂಗಸ್ವಾ'ುದಾಸೊಲ್ಲಾಸಾ ಈಗಪ್ರೇಮ ತೋರಿಸಬೇಕು ಬೇಡುವೆ ಕಾ'ುತಾರ್ಥದ ಕಲ್ಪಭೂಜಸೋಮಜಿತಮುಖ ಸಕಲ ಸುಗುಣಸ್ತೋಮ ತುಲಸೀದಾಮ ಧರಣಾ * 6* 20-8-1933 ಎಂದು ದಿನಾಂಕ ಇದೆ.(ಈ) ರಂಗಸ್ವಾ'ುದಾಸರನ್ನು ಕುರಿತ ಕೆಲವು ಕೃತಿಗಳು
--------------
ಮಳಿಗೆ ರಂಗಸ್ವಾಮಿದಾಸರು
ಜೈ ಜೈ ವೆಂಕಟರಾಯ ಸಲಹು ಗಡ ಪ ಶುಭ ಕಾಯ ಐಹಿಕ ಮಹಮಾಯವ ಬಿಡಿಸಯ್ಯಅ.ಪ ಪಂಕಜಾಕ್ಷ ಹರಿ ಸಂಕರುಷಣ ಭವ ಸಂಕಟ ಪರಿಹಾರ ಶುಭಕರ ಶಂಖಶಕ್ರಧರ ಮಂಕುದನುಜಹರ ಕಿಂಕರಘದೂರ ಶಂಖಸುರನ ಬಲು ಬಿಂಕಮುರಿದ ಬಲದಂಕ ಅದಟವೀರ ಶೂರ ಅಂಕುರಿಸೆನ್ನೊಳಾತಂಕತಾರದೆ ಪೊರೆ ಲಂಕಾ ವಿಜಯಕಾರ 1 ದಾತ ಮೂರುಜಗನಾಥ ಪರಮ ಅ ದ್ಭೂತ ಮಹಿಮೆಗಾರ ಚದುರ ಪ್ರೀತ ಭಕುತ ಭವಭೀತರಹಿತ ಮಾಯಾ ಪೂತನಿ ಸಂಹಾರ ನೀತಿಕೋವಿದ ವಿಧಿತಾತ ಅಸಮ ವಿ ಖ್ಯಾತ ಕರುಣನಿಕರ ಸುಂದರ ಘಾತಿಸಿ ಕಂಸನ ಮಾತಪಿತರ ಕಾಯ್ದ ಪಾತಕ ನಿವಾರ 2 ಬಾಲನಂತರಿಯದೆ ಆಲಯಗಳ ಪೊಕ್ಕು ಪಾಲು ಮೊಸರು ಕದಿದ ಸವಿದ ಬಾಲೆರುಡುವ ದುಕೂಲ ಕದಿದು ತಾ ಮೇಲು ಮರವನೇರ್ದ ಕಾಲಿಂದಿ ಧುಮಕಿದ ಕಾಳಿಯಮೆಟ್ಟಿದ ಕಾಳರಕ್ಕಸರೊದೆದ ಸದೆದ ಲೀಲಾ ಜಾಲ ನಂದ ಬಾಲನಾಗಿ ಬಲು ಬಾಲಲೀಲೆಗೈದ 3 ಪರಮ ಪರಾತ್ಪರ ಪರಮಪುರುಷ ಸಿರಿ ಪರಮ ಪಂಚಪ್ರಾಣ ದುರಿತ ಹರಣಜನನಮರಣ್ಹರಸುರವಿನಮಿತ ಧರಣಿಗಧಿಕ ತ್ರಾಣ ಕರಿಧ್ರುವರಿರ್ವರನು ಭರದಿ ನೀಡಿ ನಿಂತು ಪೊರೆದ ಪಾಂಚಾಲೀಮಾನ ಜಾಣ ಶರಣಜನರ ಮೈನೆರಳು ನಿಗಮಾತೀತ ನಿರಂಜನ 4 ಸೋಮವದನ ಸತ್ಯಭಾಮಾರಮಣ ಸುಖ ಧಾಮ ಸುಜನಹೃದಯನಿಲಯ ಕಾಮಜನಕ ಪುಣ್ಯನಾಮ ರಕ್ಕಸಕುಲ ಭೀಮ ಪಾಲಿಸಭಯ ಶಾಮವರ್ಣ ಮಮಸ್ವಾಮಿ ಭಜಿಪೆ ಶ್ರೀ ರಾಮಪಿಡಿಯೋಕಯ್ಯ ಸದಯ ಕಾಮಿತ ವರ ಸುಪ್ರೇಮದಿ ಇತ್ತೆನ್ನ ಪ್ರೇಮದುದ್ಧರಿಸಯ್ಯ 5
--------------
ರಾಮದಾಸರು
ಪಾಲಿಸೆನ್ನ ಫಾಲಲೋಚನಾ ನಂದೀಶವಾಹನಾ ಪ ಸದನ ಅ.ಪ ನಾಗಭೂಷಣ ದನುಜಹರಣ ದಿವಿಜಶರಣ ಭೂತಗಣ ಭೋಗಿಶಯನ ಸಿರಿಯ ರಮಣ ವಿಮಲಚರಣ ಸೇವೆಯಿತ್ತು 1 ಮದನವೈರಿ ದುರಿತಹಾರಿ ಶಶಿಜಟಾಜೂಟಧಾರಿ ಮ ಮ ದೇವ ಮಾಂಗಿರಿರಂಗ ಚರಣಯುಗವ ತೋರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಂಟ ಪ ಕನಕಕಶಿಪು ತನಯ ತನ್ನ ಜನಕನ ಹಿಂಸೆ ತಡೆಯದೆಲೆ ದನುಜಹರನೆ ರಕ್ಷಿಸೆನಲು ಕ್ಷಣದಿ ಬಂದು ಸಲಹಿದೈಯ್ಯಾ 1 ನಾರಿ ದ್ರುಪದನಂದನೆಯಳ ಸೀರೆ ಖಳನು ಸೆಳೆಯುತಿರಲು ವಾರಿಜಾಕ್ಷ ನಿನ್ನ ಸ್ಮರಿಸೆ ಯಾರು ಅರಿಯದಂತೆ ಬಂದೆ 2 ದಾಸಜನರ ಸಕಲ ಪಾಪ- ರಾಸಿಗಳನು ದಹಿಸೆ ಪೊರೆವೆ ಶ್ರೀಶ ನಿನ್ನ ಭಜಿಸಿದರೆ ರಂ- ಗೇಶವಿಠಲರೇಯ ನೀನು 3
--------------
ರಂಗೇಶವಿಠಲದಾಸರು
ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ಆಚ್ಯುತಾನಂತ ಗೋವಿಂದ-ಹರಿ |ನಾರಾಯಣ ನಿನ್ನ ನಾಮ-ಎನ್ನ |ಮಾಧವಮಂಗಳಗಾತ್ರ-ಸ್ವಾಮಿ |ಗೋವಿಂದ ಗೋಪಾಲ ಬಾಲ-ಸೋಳ |ವಿಷ್ಣುಚಕ್ರವು ಬಂದು ಸುತ್ತಿ-ಮೂರು |ಮಧುಸೂದನ ಮಾರಜನಕ-ನೀನು |ತ್ರಿವಿಕ್ರಮ ತ್ರೈಲೋಕ್ಯನಾಥ-ದೇವ |ವಾಮನರೂಪದಿ ಬಂದು-ಬಲಿಯ |ಶ್ರೀಧರ ಶೃಂಗಾರಾಧಾರ-ದಿವ್ಯ |ಹೃಷೀಕೇಶ ವೃಂದಾವನದಲಿ-ನೀ |ಪದ್ಮನಾಭನೆ ಕೇಳೊ ಮುನ್ನ-ಎನ್ನ |ದಾಮೋದರ ದನುಜಹರಣ-ಹರಿ |ಸಂಕರ್ಷಣ ಸರುವಾಭರಣ-ಇಟ್ಟು |ವಾಸದೇವ ಕೇಳೊ ನಿನ್ನ-ದಿವ್ಯ |ಪ್ರದ್ಯುಮ್ನ ನೀನೆಂದು ಕರೆಯೆ-ದುರ್ |ಅನಿರುದ್ದ ಗೋಕುಲದಲ್ಲಿ-ನೀಪುರುಷೋತ್ತಮಗಾರು ಸಾಟಿ?-ಶ್ರೀ |ಅಧೋಕ್ಷಜಅಸುರಸಂಹಾರಿ-ದೇವ |ನರಸಿಂಹರೂಪವ ತಾಳಿ-ಬಂದೆ |ಅಚ್ಯತ ನೀನಲೆ ಮುದ್ದು-ಗೋಪಿ |ಜನಾರ್ಧನ ಕೇಳೊ ಬನ್ನಪವ-ನೀ |ತೊಲಗಿಸು ಬಂದೆನ್ನ ಮನದ ಕಲುಷವ ||ಉಪೇಂದ್ರನುರಗನ ತುಳಿಯೆ-ಆಗ |ಹರಹರಿ ಎಂದರೆ ಪಾಪ-ರಾಶಿ |ಕೃಷ್ಣ ಕೃಷ್ಣನೆಂಬ ಸೊಲ್ಲ-ಕೇಳಿ |
--------------
ಪುರಂದರದಾಸರು