ಪರಮಪುರುಷ ನಿನಗೆ ಪ
ಅನಾದ್ಯನಂತ ಕಾರಣ ಸರ್ವತ್ರ ತುಂಬಿರುವಗೆ ಅ.ಪ
ಬಲಿಯ ದಾನವ ಬೇಡುವ ಕಾಲದಿ
ನೆಲನಯೀರಡಿಯ ಗೈದು
ತಳತಳಿಸುವ ದಿವ್ಯ ಪದದಿ
ಚೆಲುವ ಗಂಗೆಯ ಪಡೆದವನಿಗೆ 1
ಅನೇಕ ಪಾದಗಳೆಂದು ನಿನ್ನ
ಅನುತಿಹವು ಶ್ರುತಿ ತತಿಗಳು
ಅವಧಿಕಾರಿಯಾದ ಮೂಢ
ನಾನು ಅಲ್ಪಮತಿಯು ಸ್ವಾಮಿಯೇ 2
ಮೌನಿ ಸತಿಯಳ ಶಾಪ ಬಿಡಿಸಿದ ಪಾದಕ್ಕೆ
ವನಜದಳವ ಪೋಲ್ವ ಚೆಲುವ ಪಾದಕ್ಕೆ
ದನುಜರಿಪು ಗುರುರಾಮ ವಿಠಲ ಪಾದಕ್ಕೆ 3