ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ದಿನ ನಾರದಮುನಿ ಗೋಕುಲದಿ ಇಂದಿರೇಶನ ಲೀಲೆಯಾ ನಿಂದು ನಭದಲಿ ನೋಡುತಾ | ಮೈಯುಬ್ಬಿ ಬಂದನಾ ವೈಕುಂಠಕೆ 1 ಸಿರಿದೇವಿ ಸಖಿಯರೊಡನೆ | ವನದಲ್ಲಿ ಪರಿಪರಿಯ ಕ್ರೀಡೆಯೊಳಿರೇ ಅರವಿಂದ ನಯನೆಯನ್ನೂ | ಕಂಡನಾ ಸುರಮುನಿಯು ಸಂಭ್ರಮದಲೀ 2 ಜಗನ್ಮೋಹನಾಕಾರಳೂ | ಶ್ರೀ ಹರಿಯ ಜಗ ಸೃಷ್ಟಿಗನುಕೂಲಳೂ ಬಗೆ ಬಗೆಯವತಾರಳೂ | ಕ್ಷಣ ಹರಿಯ ಅಗಲದಂತಿರುತಿಪ್ಪಳೂ 3 ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ ಪರಿಯಲ್ಲಿ ಹರಿಗೆ ಸಮಳೂ ಶರಣೆಂದವರ ಕಾಯ್ವಳೂ | ಬೊಮ್ಮಾದಿ ಸುರರ ಸೃಜಿಸುವ ಶಕ್ತಳೂ 4 ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ ಲೋಕನಾಯಕಿ ರಮಿಸುತಾ ಶ್ರೀಕಾಂತನಗಲದವಳೂ | ಮುನಿಗೆ ತ ನ್ನೇಕರೂಪವ ತೋರ್ದಳೂ 5 ನೊಡಿ ನಮಿಸಿದನು ಸಿರಿಯಾ | ಹರಿಗುಣವ ಹಾಡಿ ಪಾಡಿದನು ಮೈಯ್ಯಾ ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ ನೋಡಿದನು ಸಿರಿಯ ದಣಿಯಾ 6 ಪಲ್ಲವಾಧರೆ ನಗುತಲಿ | ತನ್ನ ಕರ ಪಲ್ಲವದಿ ಕೃಪೆಯ ಮಾಡೀ ಎಲ್ಲಿಂದ ಬಂದೆ ಮುನಿಪಾ ವಿಷಯವೇ ನೆಲ್ಲ ಪೇಳೆಂದೆನ್ನಲೂ 7 ಏನ ಪೇಳುವೆನೆ ತಾಯೆ | ನಿನ ಪತಿಯ ನಾನಾ ವಿಧ ಚರ್ಯೆಗಳನೂ ನಾನರಿಯಲಾರೆ ನಮ್ಮಾ | ನವನೀತ ಚೋರನಾಗಿರುವನಮ್ಮಾ 8 ನಾಕ ಭೂಲೋಕ ತಿರುಗೀ | ಭುವಿಯೊಳಗೆ ನಾ ಕಂಡೆ ಗೋಕುಲವನೂ ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು ಆಕಳಾ ಕಾಯುತಿಹನೂ 9 ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ ದಿಟ್ಟೆ ನಿನ್ನನು ತೊರೆದನೂ ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ ಕೆಟ್ಟ ಹೆಂಗಳೆಯರಲ್ಲಿ 10 ನಳಿನಜಾಂಡವ ಸಾಕುವಾ | ಜಗದೀಶÀ ಗೋಪಿ ಬೈ ಗಳನು ತಾ ಕೇಳುತಿಹನೂ 11 ಮದನಮೋಹನರೂಪನೂ | ಗೊಲ್ಲತೆರ ಅಧರಾಮೃತವ ಸವಿವನೂ ಎದೆ ಗಂಟು ಪಿಡಿಯುತಿಹನೂ | ಚಂಡೆಂದು ಗದರಿಸಲು ನುಡಿಯುತಿಹನೂ 12 ಸಂಪೂರ್ಣ ಕಾಮ ತಾನು | ವನದಲ್ಲಿ ಗುಂಪು ಸ್ತ್ರೀಯರ ಕೂಡ್ವನೂ ಸಂಪನ್ನ ಭೋಗಿಸುವನೂ | ಕೊಳಲ ಪಿಡಿ ದಿಂಪುಗಾನವ ಗೈವನೂ 13 ವನದ ಸೊಬಗೇನುಸುರುವೇ | ಶ್ರೀರಮಣಿ ದನಕರುವ ಕಾಯುತ್ಹರಿಯಾ ವನವನವ ತಿರುಗುತ್ತಿರೇ | ಕೊಳಲ ಧ್ವನಿ ವನವೆಲ್ಲ ತುಂಬಿರುತಿರೇ 14 ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ ಕೊಳಲೂದೆ ಹರಿ ಕೇಳಲೂ ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ ಕುಳಿತು ಮೈಮರೆತು ಕೇಳೇ 15 ಓಡಿ ಬರುತಲಿ ತುರುಗಳೂ | ಬಾಲವ ಲ್ಲಾಡಿಸದೆ ಕಣ್ಣುಮುಚ್ಚಿ ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ ಆಡಿಸದೆ ಸರ್ಪ ಹೆಡೆಯಾ 16 ಶೃಂಗಾರ ಕೊಳಲನೂದೆ | ಜಡ ಚೇತ ನಂಗಳಾಗುತ ಚಿಗುರಲೂ ಅಂಗ ಮರೆಯುತ ಜೀವಿಗಳ್ | ಜಡದಂತೆ ಕಂಗಳನುಮುಚ್ಚಿನಿಲ್ಲೆ 17 ಅಷ್ಟ ಐಶ್ವೈರ್ಯದಾತಾ | ನಾರಿಯರ ತುಷ್ಟಿಪಡಿಸುತಲಿ ಖ್ಯಾತಾ ಶಿಷ್ಟ ಜನರನು ಪೊರೆಯುತಾ | ರಕ್ಕಸರÀ ಹುಟ್ಟಡಗಿಸುವನು ವಿಹಿತಾ 18 ಪೇಳಲಳವಲ್ಲವಮ್ಮಾ | ಶ್ರೀ ಹರಿಯ ಲೀಲೆ ಜಾಲಗಳ ಬ್ರಹ್ಮಾ ನೀಲಗಳರರಿಯರಮ್ಮಾ | ಆನಂದ ತಾಳಿದೆನು ಕೇಳೆ ರಮ್ಮಾ 19 ಇಷ್ಟು ಗೋಕುಲದಿ ನೋಡೀ | ಕಾಣದಿ ನ್ನೆಷ್ಟೋ ಎನ್ನುತಲಿ ಪಾಡೀ ಗುಟ್ಟು ಪೇಳಲು ಬಂದೆನೂ | ಸಿರಿದೇವಿ ಸಿಟ್ಟಾಗಬೇಡವಿನ್ನೂ 20 ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ ಮರೆತು ನಿನ್ನನು ಸುಖಿಸುತಾ ಪರಿ ಯೊಚಿಸಮ್ಮಾ | ಆಜ್ಞೆ ಕೊಡು ತ್ವರಿತದಲಿ ಪೋಪೆನಮ್ಮಾ 21 ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ ಪರಮ ಆನಂದ ತಾಳೀ ಬೆರಗಾದ ಪರಿತೋರುತಾ | ಮುನಿವರಗೆ ಪರಿ ಏನು ಮುಂದೆ ಎನಲೂ 22 ಸನ್ನುತಾಂಗನ ಕೂಡಲೂ | ಭೂತಳದಿ ಇನ್ನೇನುಪಾಯವೆನಲೂ ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ ಇನ್ನು ನೀ ಕುವರಿ ಎನಿಸೂ 23 ಎಂತೆಂತು ಹರಿಯಚರ್ಯೆ | ಸಿರಿಕಾಂತೆ ಅಂತಂತು ನಿನ್ನ ಚರ್ಯೆ ಸಂತೋಷಪಡಿಸಿ ಎಮ್ಮಾ | ಸಲಹಮ್ಮ ಶಾಂತೆ ನಾ ಪೋಪೆನಮ್ಮಾ 24 ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ ಹತ್ತಿರದಿ ನಭದಿ ನಿಂದೂ ಸುತ್ತು ಮುತ್ತಲೂ ನೊಡಲೂ | ಸಿರಿದೇವಿ ವ್ಯಾಪ್ತಳಾಗಲ್ಲಿ ಇರಲೂ 25 ವನದಿ ಹರಿವಕ್ಷದಲ್ಲೀ | ಸಿರಿದೇವಿ ಘನ ವೇಣೂರೂಪದಲ್ಲೀ ವನಲಕ್ಷ್ಮೀರೂಪದಲ್ಲೀ | ಗೋಪಿಯರ ಪ್ರಣಯ ಪ್ರಕಾಶದಲ್ಲೀ 26 ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ ಎಲ್ಲೆಲ್ಲಿ ವೈಭವಗಳೋ ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ ಅಲ್ಲಲ್ಲಿ ತಾನಿರುತಿರೆ 27 ಸಿರಿ ಹರಿಯ ಚರಿಯ ನೊಡಿದ ಪ್ರತಾಪಾ ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು ಸಿರಿ ಹರಿಗೆ ಸ್ತೋತ್ರಗೈದಾ 28 ಸಿರಿಹರಿ ವಿಯೋಗವಿಲ್ಲಾ | ಆವಾವÀ ಕಾಲ ದೇಶದಲ್ಲೀ ಅರಿಯದಜ್ಞಾನ ನುಡಿಯಾ | ಮನ್ನಿಸೋ ಮಾಯಾ 29 ಜಯ ಜಯತು ಸುರವಂದ್ಯನೇ ಜಯ ಜಯತು ದುಷ್ಟಹರಣ | ಗುಣ ಪೂರ್ಣ ಜಯ ಜಯತು ಶಿಷ್ಟ ಶರಣಾ30 ಸ್ತುತಿಸುತಂಬರಕಡರಿದಾ | ಸುರಮುನಿಪ ಚ್ಯುತದೂರನತಿ ವಿನೋದಾ ಪತಿತರನು ಕಾಯ್ವ ಮೋದಾ | ಸುಖತೀರ್ಥ ಯತಿಗೊಲಿದು ಉಡುಪಿಲ್ನಿಂದಾ 31 ಆಪಾರ ಮಹಿಮ ಶೀಲಾ | ಸರ್ವೇಶ ಗೋಪಿಕಾ ಜನ ವಿಲೋಲಾ ಆಪನ್ನ ಜನರ ಪಾಲ | ಗುರುಬಿಂಬ ಗೋಪಾಲಕೃಷ್ಣವಿಠಲಾ 32
--------------
ಅಂಬಾಬಾಯಿ
ಕಥೆಕಾರ ದೇವಿಯೆಂದು ಕಥೆಯ ಹೇಳಿದ ತೆರದಲಿಮಿತಿಯಿಲ್ಲದ ಮೃಷೆ ಸಂಸಾರವದು ಇರುತಿಹುದು ಆಪರಿಯಲ್ಲಿ ಪ ಸತಿಯಂಬುವಳಾರು ತಾವಾರುಸುತರಿಂದ ಗತಿಯಾಗುವುದೆಲ್ಲಿಮಿತಿಯಿಲ್ಲದ ಬಹುಬಂಧು ಬಳಗಗಳುಬಹರೆ ತನ್ನ ಹಿಂದಲ್ಲಿ1 ಹಗೇವಿನ ಬತ್ತವು ಬಣಬೆಯ ಸೊಪ್ಪೆಯುಬಗೆ ಬಗೆವಸ್ತುವು ತಾನೆಲ್ಲಿಬಿಗುಮಿಗೆಯಾದ ದನಕರುವುಗಳುಬರಲಿಲ್ಲವು ತಾವಂದದಲ್ಲಿ 2 ತಳ್ಳಿಗೆ ತಳ್ಳಿ ಸುಳ್ಳು ಸಂಸಾರವುತೆಗೆಲೀಯದು ಈ ಬಗೆಯೆಲ್ಲಿಎಲ್ಲಕೆ ಮಂತ್ರವು ತಾ ಚಿದಾನಂದನುಎನಲಿಕೆ ಪಾಪವು ಇನ್ನೆಲ್ಲಿ 3
--------------
ಚಿದಾನಂದ ಅವಧೂತರು
ಕಾದನಾ ವತ್ಸವ ಹರಿ ಕಾದನಾ | ಮಾಧವ ಪ ವೇದವೇದ್ಯ ಸಾಧುವಿನುತÀರಾದಿಕಾ ರಮಣ ಕೃಷ್ಣ ಅ.ಪ. ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ || ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ 1 ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ | ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ 2 ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು || ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು3 ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು | ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು 4 ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ | ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ5 ಮರದ ನೆರಳು ವೊಳಗೆ ಕೃಷ್ಣ | ಮೆರೆದು ವತ್ಸಗಳನೇ ನಿಲಿಸಿ | ಕರೆದ ಪಾಲು ಕರದಿ ಪಿಡಿದು ನೆರೆದು ಬಾಯಲುಣಿಸುತ6 ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು | ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ | 7
--------------
ವಿಜಯದಾಸ
ಬಹಳ ಸಂತೋಷಿ ಭಕ್ತರು ಬಹಳ ಸಂತೋಷಿಬಹಳ ಸಂತೋಷಿ ಬಗಳ ಬಹಳ ಸಂತೋಷಿಪಕಾಂತಿಯೆಂಬ ಸತಿಯು ದೊರಕಲಿ ಬಹಳ ಸಂತೋಷಿಕಾಂತಿ ಎಂಬ ಕುಲಕುಡಿಬೆಳೆಯಲಿ ಬಹಳ ಸಂತೋಷಿ1ಕ್ಷಮೆಯು ಎಂಬ ಕ್ಷೇಮವು ಬೆಳೆಯಲಿ ಬಹಳ ಸಂತೋಷಿದಮೆಯು ಎಂಬ ದನಕರು ಹೆಚ್ಚಲಿ ಬಹಳ ಸಂತೋಷಿ2ಆತ್ಮ ಸಂತೋಷದಾ ಅಂಗಡಿ ನಡೆಯಲಿ ಬಹಳ ಸಂತೋಷಿಸ್ವಾತ್ಮಾನುಸುಖ ಸಾಮ್ರಾಜ್ಯ ದೊರೆಯಲಿ ಬಹಳ ಸಂತೋಷಿ3ಭೂತ ದಯೆಯ ಅಂಗಿಯ ತೊಡಿರಿ ಬಹಳ ಸಂತೋಷಿಖ್ಯಾತಿ ಎಂಬ ಕುಪ್ಪಸ ಹಾಕಿರಿ ಬಹಳ ಸಂತೋಷಿ4ಸೂಸಲಿ ಚಿದಾನಂದ ಕೃಪೆಯಿಂದಿಗೆ ಬಹಳ ಸಂತೋಷಿವಾಸವಮಾಡಲಿ ನಮ್ಮಲ್ಲಿ ಬಗಳೆ ಬಹಳ ಸಂತೋಷಿ5
--------------
ಚಿದಾನಂದ ಅವಧೂತರು
ಭಕ್ತವತ್ಸಲ ಬಂದು ಬಾಗಿಲಲಿ ನಿಂತುಎತ್ತ ಹೋದನೆಂದು ಧಿಗಿಲು ಎನುತಮತ್ಯಾಕೆ ಬರಲಿಲ್ಲವೊ ಅರ್ಜುನರಾಯ ಪ.ವೀರರಾಯರÀ ಸೇವೆ ಪರಿಪರಿ ಮಾಡಿದ್ದುಮರೆತುಕೊಂಡು ಧರ್ಮ ದೊರೆಯಾಗಿ ಕುಳಿತ 1ಪಾಂಚಾಲಿ ರಮಣನು ಪಂಚ ಪಗಡೆಯನಾಡಿವಂಚನೆ ಮಾಡದೆ ಹಂಚಿಕೆಯಲಿಕುಳಿತ 2ಧಿಟ್ಟ ಭೀಮರಾಯ ಹುಟ್ಟು ಬಚ್ಚಿಟ್ಟುಕೊಂಡುಸಿಟ್ಟಿಲಿಂದ ಮೈ ಮುಟಿಗ್ಯಾಗಿ ಕುಳಿತ 3ಪುಂಡ ಭೀಮರಾಯ ಮಂಡಿ ಕೆದರಿಕೊಂಡುಖಂಡಗನ್ನವ ಉಂಡು ದಿಂಡೆನ್ಹಾಂಗ ಕುಳಿತ 4ಚಲ್ವ ಅರ್ಜುನರಾಯ ಬಿಲ್ಲು ಮೂಲೆಗೆ ಇಟ್ಟುಒಲ್ಲಿಯ ಮುಸುಕು ಹಾಕಿ ಎಲ್ಲೋ ಹೋಗಿ ಕುಳಿತ 5ಹೆÀಚ್ಚಿನ ಗಾಂಡೀವ ಬಚ್ಚಿಟ್ಟು ಕೋಣ್ಯಾಗೆಹುಚ್ಚನ್ಹಾಂಗೆಮಾರಿಮುಚ್ಚಿಕೊಂಡು ಕುಳಿತ6ಚದುರ ನಕುಲರಾಯ ಎದುರಿಗೆ ಬಾರದೆಹೆದರಿಕೊಂಡು ತಾನು ಕುದುರೆ ಮನೆಯ ಹೊಕ್ಕ 7ಧನವೆತ್ತಿಸಹದೇವಘನವಿದ್ಯಾನರಿಯದೆದನಕರುಗಳನ್ನೆಲ್ಲ ಅನುಸರಿಸಿ ಇರುವ 8ಪಾಂಡವರೆ ಶ್ರೇಷ್ಠರು ಧೈರ್ಯವೆ ಇರಲೆಂದುಶೌರಿಕುರುರಾಯಗೆ ತಾ ನುಡಿದನು9ಇಷ್ಟೂರು ಹರಿಗಂಜಿ ಬಿಟ್ಟರು ಕೈಕಾಲುಧಿಟ್ಟ ಬಲರಾಮ ತಾ ‌ಘಟ್ಯಾಗಿ ಕೈ ಹೊಯಿದನು 10ಇಷ್ಟೊಂದು ಗಾಬರಿ ದಿಟ್ಟೆಯರೆ ಆಗದಿರಿಕೊಟ್ಟನುಅಭಯದಿಟ್ಟ ರಾಮೇಶ11
--------------
ಗಲಗಲಿಅವ್ವನವರು
ಸಂಸಾರ ಕನಸಣ್ಣ ಸಕಲರಿಗೆ ಹೇಳುವೆನಣ್ಣಸಂಸಾರ ಸತ್ಯವೆಂಬುವನ ಬಾಯಲ್ಲಿ ಹೊರೆ ಮಣ್ಣಣ್ಣಪಹೆಂಡತಿಯು ಕನಸಣ್ಣ ಗಂಡನೂ ಕನಸಣ್ಣಗಂಡು ಮಗ ಸೊಸೆ ಸಹೋದರರು ಬಂಧುಗಳು ಕನಸಣ್ಣ1ದನಕರು ಕನಸಣ್ಣ ದವಲತ್ತು ಕನಸಣ್ಣಮನೆ ಮದುವೆ ಮಂಟಪ ಮಹಾಲಕ್ಷ್ಮೀ ಕನಸಣ್ಣ2ವೈಯ್ಯಾರ ಕನಸಣ್ಣ ವಸ್ತುಗಳು ಕನಸಣ್ಣಮೈಯಲ್ಲಿಹ ಬಲವದು ಮತ್ತೆ ಮುರಿ ಮೀಸೆ ಕನಸಣ್ಣ3ನಾನಿಹುದು ಕನಸಣ್ಣ ನೀನಿಹುದು ಕನಸಣ್ಣಶಾಣೆತನ ಮಾನಾಪಮಾನಗಳು ಸೈನ್ಯ ಕನಸಣ್ಣ4ಸಂಸಾರ ಮಾಡಿದರಣ್ಣ ಸಾಕ್ಷಿಯಾಗಿರಬೇಕಣ್ಣಹಂಸ ಚಿದಾನಂದ ಸದ್ಗುರು ಹೊಂದಲು ಸರಿವುದು ಜನನವಣ್ಣ 5
--------------
ಚಿದಾನಂದ ಅವಧೂತರು