ದಧಿವಾಮನ ವಿಠಲ ಉದ್ಧರಿಸೊ ಇವನ ಪ
ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ.
ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ 1
ತಾರತಮ್ಯ ಜ್ಞಾನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ 2
ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3