ಚಂದ್ರಭಾಗ ಹರಿ ವಿಠಲ | ಸಲಹ ಬೇಕಿವಳಾ ಪ
ಇಂದೀವರಾಕ್ಷ ಹರಿ | ಮಂದರೋದ್ಧಾರೀ ಅ.ಪ.
ಮೋದ ಬಡಿಸುವ ಭಾರಮೋದ ಮಯ ನಿನಗಲ್ಲ | ದಧಾರಿಸಿಹುದೋಆದಿ ಮೂರುತಿ ಹರಿಯೆ | ಸಾಧನ ಸಾಧ್ಯವಾಗಿಕಾದುಕೋ ಬಿಡದಿವಳ | ಮಾಧವನೆ ದೇವಾ 1
ತರತಮಾತ್ಮಕ ಜ್ಞಾನ | ಅರುಹುತಿವಳಿಗೆ ಭೇದಎರಡು ಮೂರರ ಅರಿವು | ನೆರೆ ಕೈಗೂಡಲೀಹರಿಯೆ ಸರ್ವೋತ್ತಮನು | ಸುರಪಾದಿ ಸುರರೆಲ್ಲಹರಿಯ ಕಿಂಕರರೆಂಬ | ವರಜ್ಞಾನ ವಿರಲಿ 2
ಆಗು ಹೋಗುಗಳಲ್ಲಿ | ವೇಗ ಸಮತೆಯು ಬರಲಿಜಾಗು ಮಾಡದೆ ದ್ವಂದ್ವ | ಸಹನೆ ಬರುತಿರಲೀನಾಗಾರಿ ವಾಹನನ | ನಾಮ ಸುಧೆ ಸರ್ವದಾಸಾಗಿ ಮನ ಸವಿವಂತೆ | ಹಗಲಿರುಳು ಇರಲೀ 3
ಕಾಲ | ಮೋದದಿಂ ಕಳೆವಂತೆನೀ ದಯದಿ ಪಾಲಿಸುತ | ಕಾದುಕೋ ಇವಳಾಬೋಧ ಮೂರುತಿಯಾಗಿ | ಹೇ ದಯಾಕರ ಕೃಷ್ಣಾಆದರದಿ ಸುಜ್ಞಾನ | ಭಕ್ತಿಯನ್ನೀಯೋ 4
ಭವ ಬಂಧ ಬಿಡಿಸುವುದುಶ್ರೀವರನೆ ಶ್ರೀಗುರೂ | ಗೋವಿಂದ ವಿಠಲ 5