ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ ಪ
ಸರಸಿರುಹ ಸಖ ಶತಕೋಟಿ ತೇಜಾ
ಪರಭಕ್ತ ಜನ ಸುರ ಭೂಜಾ
ಕರುಣಾ ಸಾಗರ ಅತ್ರಿ ತನುಜಾ
ಮೊರೆ ಹೊಕ್ಕವರ ರಾಜಾಧೀರಾಜಾ 1
ಪತಿತ ಜನರ ಮಾಡುತಿಹೆ ಉದ್ಧಾರಾ
ಚತುರ್ದಶ ಭುವನಾಧಾರ
ಅತಿಕೀರ್ತಿ ಸು ಶೋಭಿತ ದಿಗಂಬರಾ
ನುತಗುಣ ಮಂಡಿತ ಮುನಿ ಮನೋಹರಾ 2
ಪರಮ ಪುರುಷ ಸದ್ಗುರು ಸಿರಿಲೋಲಾ
ಸರಸಿಜ ನೇತ್ರ ದಯಾಳಾ
ಧರಿಯೊಳನೇಕ ರೂಪವ ದೋರ್ಪೆ ಘನಲೀಲಾ
ಗುರುವರ ಮಹಿಪತಿ ನಂದನ ಪಾಲಾ3