ಹರನಮಃ ಪಾರ್ವತೀ ಪತೆಯೇ ನಮೋ
ಹರನಮಃ ಪಾರ್ವತೀ ಪತೆಯೇ ಪ
ಹರಹರ ಶಂಕರ ಶಂಭೋ ಮಹಾದೇವ
ಹರನಮಃ ಪಾರ್ವತೀ ಪತೆಯೇ ಅ.ಪ
ಹರಿಯ ಪಾದೋದಕ ಶಿರದಲಿ ಧರಿಸಿದ
ಪರಮ ವೈಷ್ಣವ ನಿನ್ನ ಚರಣಗಳಿಗೆ ನಮೋ 1
ಅತ್ರಿಯ ಪತ್ನಿಯ ಉದರದಿ ಜನಿಸಿದ
ದತ್ತನಾಮಕ ಹರಿ ಭ್ರಾತ ದೂರ್ವಾಸನೆ 2
ಹರಿಯು ಪ್ರಸನ್ನನಾಗುವ ತೆರದಲಿ ಮನ
ಕರುಣಿಸೋ ಉರಗಭೂಷಣ ಗಿರಿಜಾಪತೆ 3