ಉಪಕಾರವ ನೋಡೋ ಮಾಡಿದ ಪ
ಕೃಪೆ ಬೇಡುವುದತಿಶಯವೇ ಪೇಳೊ ಅ.ಪ
ಪಾಲಕ ನೀ ಹದಿನಾಲ್ಕು ಜಗಂಗಳಿಗೆ
ಮೂಲೆಯ ಗ್ರಾಮದಲಡಗಿ ಬೇಸರದಿ
ಕಾಲಕಳೆಯುವುದ ನೋಡಿ ಮರುಕದಲಿ
ಬಾಲ ಮೂರುತಿಯ ಜಗಕೆ ತೋರಿಸಿದ 1
ಅಡಕು ಮಣೆಗಳಲಿ ಪೂಜೆಯಗೊಳ್ಳುತ
ಒಡಕು ತೊಗರಿ ಹುಳಿಯನ್ನವ ಮೆಲ್ಲುತ
ಬಡತನದಲಿ ಜೀವನ ಕಳೆಯುತಿರೆ
ಪೊಡವೀಶನ ಭೋಗಗಳನು ಉಣಿಸಿದ 2
ಮಣಿ ಮಂದಿರ ವಿಧ ವಿಧ
ಅಂದದ ಮುತ್ತಿನ ಹಾರ ಪದಕಗಳು
ತಂದೆ ಪ್ರಸನ್ನನೇ ಸಾಸಿರ ಸಾಸಿರ
ಮಂದಿಗಳಿಗೆ ವೈಭವಗಳ ತೋರಿದ 3