ನಿತ್ಯ ಶುಭಮಂಗಳಂ ಪ
ಚಾರು ಮರಕಟರೂಪ ತಾಳಿದಾ ಮೂರ್ತಿಗೆ
ಚೋರ ದಶಕಂಠನನು ದಣಿಸಿದವಗೆ
ನೀರಜಾಮುಖಿಗೆ ಮುದ್ರೆಯಿತ್ತ ಕಪಿವರಗೆ
ಶ್ರೀರಾಮ ಧ್ಯಾನದೊಳು ತತ್ಪರಾದವಗೆ 1
ನೀಚ ಠಕ್ಕನ ಹಿಡಿಂಬಕನೊರಸಿದಾ ಬಲಗೆ
ಕೀಚಕರ ಕಿರ್ಮೀರ ಬಕಕಾಲಗೆ
ನಾಚಿ ನೀರೊಳು ಪೊಕ್ಕು ಕುರುಪತೀಯಂತಕಗೆ
ಆ ಚಕ್ರ ಸೇವೆಯಲಿ ನಿರತನಾದವಗೆ 2
ಜಗವನುದ್ಧರಿಪ ಬುದ್ಧಿಯ ತಾಳ್ದಯತಿವರಗೆ
ಮಗುವಾಗಿ ಮಧ್ಯಗೇಹದಿ ಜಾತಗೆ
ನಿಗಮ ಗೋಚರ ಶ್ರೀ ನರಸಿಂಹವಿಠಲನ
ಭಕುತಿಯನು ಬೇಡಿ ಅಜಪದ ಪಿಡಿದ ಹರಿಗೇ 3