ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡಲ ಒಡಲೊಳಗಿದ್ದು ಬಡಬಾಗ್ನಿ ಎನಿಸುವೆ ಅಡವಿಯೊಳಗಿದ್ದು ದಾವಾಗ್ನಿ | ದಾವಾಗ್ನಿ ಎನಿಸುವಿ ಪೊಡವಿಯೊಳು ಭೌಮ ಎನಿಸುವಿ 1 345 ಕೃಷ್ಣ ವತ್ರ್ಮನೆ ಎನ್ನ ದುಷ್ಟ ಕರ್ಮವ ನೋಡಿ ಸಂತೈಸಿ ಭಾರ್ಗವಗ ಧಿಷ್ಠಾನನೆಂದು ಮೊರೆಹೊಕ್ಕೆ 2 346 ದೇವಮುಖ ಎನ್ನಯ ಕರಾವಲಂಬನವಿತ್ತು ಪಾಮರಗೊಲಿದು ಭವತಾಪ | ಭವತಾಪ ಪರಿಹರಿಸು ಪಾವಕನ ಜನಕ ಪ್ರತಿದಿನ 3 347 ರುದ್ರಾಕ್ಷಗನೆ ಮಹೋಪದ್ರಗಳ ಪರಿಹರಿಸು ಭದ್ರಪ್ರಕಾಶ ಮಹ ಭದ್ರ | ಮಹಭದ್ರ ವಿಖ್ಯಾತ ಕರುಣಾಸ ಮುದ್ರ ನೀನೆಂದು ಶರಣೆಂಬೆ 4 348ವೀತಿಹೋತ್ರನೆ ಜಗನ್ನಾಥ ವಿಠ್ಠಲನ ಸಂ ಪ್ರೀತಿ ಪೂರ್ವಕದಿ ಸುತಿಸುವ | ತುತಿಸಿ ಹಿಗ್ಗುವ ಭಾಗ್ಯ ಜಿತವಾಗಿ ಇರಲಿ ಎಂದೆಂದು 5 349 ಶುಚಿನಾಮಕನೆ ಮನೋವಚನಾದಿಗಳ ದೋಷ ನಿಭಯಗಳನೆಣಿಸಿ ದಣಿಸದೆ | ದಣಿಸದೆ ಮಚ್ಚಿತ್ತ ಖಚಿತವನು ಮಾಡೊ ಹರಿಯಲ್ಲಿ 6 350 ಹುತವಹನೆ ಎನ್ನ ದುರ್ಮತಿಯ ಪರಿಹರಿಸಿ ಸ ಪಥ ನಿತ್ಯ ನಾ ನುತಿಸುವೆ ನಿನ್ನಾ ಕರುಣಾಳು 7
--------------
ಜಗನ್ನಾಥದಾಸರು
ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ಪ ಮೆಲ್ಲಮೆಲ್ಲನೆ ಪದ ಪಲ್ಲವ ವಿಡುತಲಿ ಗುಲ್ಲು ಮಾಡದೆ ಭವ ದಲ್ಲಣಗೊಳಿಸು ವಲ್ಲಭ ಸಿರಿಸಹ ನಿಲ್ಲದೆ ಮನೆಯೊಳು ಬಲ್ಲಿದರಿಗೆ ಬಹು ಬಲ್ಲಿದನೆನಿಸಿಹ ಅ.ಪ. ನೆಗೆಯುವ ನಿಲ್ಲುತೆ ಚಿಗರಿಯ ತೆರೆದನು ರಾಗದಿನೋಡುತ ಬಗೆ ಬಗೆ ಹರ್ಷದ ನಗೆಮೊಗಹಾಸದಿ ಬಿಗಿಯುತ ಮನ ಅಗಣಿತ ಗುಣನಿಧಿ 1 ಸಾಗರನಳಿಯನೆ ಸಾಗರಶಯನನೆ ಯಾಗ ಸುಭೋಕ್ತನೆ ಯೊಗಿಗಳರಸನೆ ಬಾಗುವೆ ಚರಣದಿ ಸಾಗುತ ಮನ ಬಡ ಬಡ ನೀಗಿಸಿ ಮಲಮನದಾಗಸಗೀಗಲೆ 2 ಕುಣಿಸುತ ಹುಬ್ಬನು ಉಣಿಸುತ ಭಕ್ತಿಯ ತನುಮನವೆಲ್ಲವ ಮಿನುಗಿಸಿ ಜ್ಞಾನವÀ ಧಣಧಣ ತಾಳಕೆ ಅಭಿನಯಸಹಿತದಿ ಕುಣಿಯುತ ಕುಣಿಸುತ ದಣಿಸದೆ ಕರುಣದಿ 3 ಕರ್ಜಿಸಿ ರಾಮದ ಕಜ್ಜಿಯಮನದಿಂ ಮಜ್ಜನಗೈಸುತ ಭಕ್ತಿಯಕಡಲಲಿ ಗೆಜ್ಜೆಯಕಟ್ಟಿಸಿ ಹೆಜ್ಜೆಹೆಜ್ಜೆಗೆ ಪೂ- ರ್ವಾರ್ಜಿತವೆಲ್ಲವ ಭರ್ಜನೆ ಗೈಸಲು 4 ಇಂದಿರೆಯರಸನೆ ಚಂದ್ರನ ಹಳಿವನೆ ಛಂದಸುವೇದ್ಯನೆ ಬಂಧ ಸುಮೋಚಕ ಬಂಧುವೆ ಸರ್ವರ ಮಂದಜಭವಪಿತ ತಂದೆಯೆ ವಿಶ್ವದ ನಂದವ ನೀಡಲು 5 ವೇದವ ತಂದವ ವೇದನ ಪೊರೆದವ ಭೂಧರ ಪೊತ್ತವ ಮಾಧವನಾದವ ಮೋದವ ತಂದವ ಖೇದವ ತರಿದವ ಮೇದಿನಿ ಪೊರೆದವ ಛೇದಿಸಿ ಬಂದವ 6 ಮೇದಿನಿ ಇತ್ತವ ಮೇದಿನಿಸುತೆಯಳ ಮೋದದಲಾಳ್ದವ ಮೇದಿನಿಸುತಹರ ವೇದವ ಕಾಯ್ದವ ಛೇದಿಸಿ ಕಲಿಗಣ ಹಾದಿಯ ತೊರುವ 7 ನಂದನಂದ ಅರವಿಂದ ನಯನ ಬಹು ಸುಂದರತಮಶ್ರೀ ಮಂದಿರ ಗೋಕುಲ ಚಂದಿರ ಶುಭಗುಣಸಾಂದ್ರ ಮಹೋಜಸ ಇಂದ್ರನ ಹಳಿದ ಮಹೇಂದ್ರ ಪರಾತ್ಪರ8 ಗೋಪಿಕಂದ ಬಹು ಗೋಪಿಕಾಮಸ್ತ್ರೀ ರೂಪಧಾರಿ ನಗಚಾಪವರದ ಶಿವ ಭಂಗ ಹರಣ ನಿ- ರ್ಲೇಪ ದುಃಖ ಸುಖಲಾಪ ಚರಿತ ಭಗ 9 ವಾಸುದೇವ ಸಂತೋಷದಾತ ಗೋಕೇಶವೇದ್ಯ ವಾಗೀಶ ಜನಕ ನಿಜದಾಸಪೋಷ ಖಳ- ದಾತ ಮಹಿ- ದಾಸಪೂರ್ಣವಿಭು 10 ವೈರಿ ಕುರುವಂಶ ಧ್ವಂಸ ನಿಜ ಹಂಸರೂಪ ಯದುವಂಶ ಚಂದ್ರ ನೀ- ಲಾಂಶುಧಾಮ ಗರುಡಂಸಗಮನ ಭವ ದಮನ ದೇವಾಂಶಗಣಪೋಷ 11 ತುಂಬಿರೆಜಯಜಯ ದುಂಧುಭಿನಾದವು ಅಂಬರಸುರಗಣ ವರ್ಷಿಸೆಕುಸುಮವ ಸಂಭ್ರಮದಾರತಿ ಎತ್ತಲ್ ಸ್ತ್ರೀಗಣ ಕಂಬು ಚಕ್ರಾಂಕಿತ ಪಾಣಿಯೆಸರಸರ 12 ಮಂಗಳಮೂರ್ತಿಯೆ ಮಂಗಲ ದಾತನೆ ಅಂಗಜರಿಪುಗಳ ಭಂಗವ ಹರಿಸುತ ತಿಂಗಳು ಬೆಳಕಿನ ತುಂಗ ಸುರೂಪವ ಕಂಗಳು ಮನಸಿನ ಸಂಗದಿ ತೋರುತ13 ಸಾಸಿರ ಶಿರಮುಖ ಸಾಸಿರ ನೇತ್ರನೆ ಸಾಸಿರ ಬಾಹುವೆ ಸಾಸಿರನಾಮಕ ಸಾಸಿರಕೀರ್ತಿನಿರ್ದೋಷ ಸುಖಪೂರ್ಣ ಶ್ವಾಸವಿನುತ ವಿಶ್ವಾಸವ ಬೀರುತ 14 ಜಯಮುನಿ ಹೃದಯಗ ವಾಯು ವಿನಾಯಕ ಜೀಯ ಶ್ರೀ ಕೃಷ್ಣವಿಠಲ ಮಹಾಂತನೆ ಪ್ರೇಮದ ಮನವಳಿದ ಹೇಯದು ನಿನ್ನಯ ಧೇಯವೆ ನಡೆಸುತ ಶ್ರೀ ಯವ ನೀಡಲು 15
--------------
ಕೃಷ್ಣವಿಠಲದಾಸರು
ಗಂಗಾಪಿತ ವೆಂಕಟ ಪರ್ವತನಿಲಯಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
--------------
ಪ್ರಾಣೇಶದಾಸರು
ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣತೋರೈ ನಿನ್ನಯ ಚಾರುಚರಣವತೋಯಜಾಕ್ಷಪಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ 1ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣಪಂಕಜನಾಭಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ 2ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತಬಾರೈ ದೇವ ಕೃಷ್ಣಶೃಂಗಾರದ ಕಿರೀಟವು ಹೊಳೆಯುತಬಾರೈ ದೇವ ಕೃಷ್ಣಸುಂದರ ಕಸ್ತೂರಿ ತಿಲಕವು ಹೊಳೆಯುತಬಾರೈ ದೇವ ಕೃಷ್ಣಕಂಧರದಲಿ ಶೋಭಿಪ ಪದಕಗಳಿಂದಬಾರೈ ದೇವ ಕೃಷ್ಣ 3ಪೊಂಗೊಳಲೂದುತ ಹೆಂಗಳರೊಡನೆಬಾರೈ ದೇವ ಕೃಷ್ಣಮಂಗಳ ಮಹಿಮ ವಿಹಂಗವಾಹನ ಕೃಷ್ಣಬಾರೈ ದೇವ ಕೃಷ್ಣಅಂಗಳದೊಳಗಾಡುತ ನಲಿಯುತ ಬಲು ಚಂದದಿಬಾರೈ ದೇವ ಕೃಷ್ಣಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ 4ಕಿಲಿಕಿಲಿನಗುತಲಿ ಕುಣಿಕುಣಿಯುತಬೇಗ ಬಾರೈ ದೇವ ಕೃಷ್ಣಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣನಲಿನಲಿಯುತ ಬಾ ಮಣಿಯುತ ಬೇಡುವೆಬಾರೈ ದೇವ ಕೃಷ್ಣದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ 5
--------------
ನಿಡಗುರುಕಿ ಜೀವೂಬಾಯಿ