ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾರಿಸುವಿ ಹರಿಯೇ ಎನ್ನವಗುಣಾ ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ ಉದಯ ಉದ್ಯೋಗನೆನುವೆ ಮಧ್ಯಾಹ್ನಕ ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು ವದಗಿ ನಿದ್ರೆ ಯನುವೆ ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ 1 ನಿನ್ನ ಕಥೆಯಾ ಕೇಳದೇ ಮಂಗಳಂಗುಟ ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ ಚೆನ್ನಾಗಿ ಮಾಡದೇ ಎನ್ನ ಕಾಯವು ಸತಿಸುತರಿಗೆ ಮಾರಿದೇನಾ 2 ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ ಅರಿವಿಗೆ ಮನನೀಲಿಸೀ ಹೊರೆವದು ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು 1 ತೊದಲುನುಡಿಗೆ ನಲಿವೆನು ಬಾ ಬಾ ಚದುರತನವ ನೀ ತೋರುತೆ ಬಾ ಬಾ ಮುದದಿ ಕುಣಿಯುತೆ ಮಣಿಯುತೆ ಬಾ ಬಾ ಇದೆಗೋ ಎತ್ತಿಕೊಂಡೊಯ್ವೆನು 2 ಜೋಗುಳಗಳ ಹಾಡಿ ರಾಗದಿ ಕೊಂಡಾಡಿ ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ3 ಸಂತಸದಿಂದೋಡು ಅಂತರಿಕ್ಷವ ನೋಡು ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು 4 ಚಂದಿರನಂದದ ಕಂದಾ ನೊಂದಿಹ ಮನಕಾನಂದಾ ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ5 ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ 6 ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ7 ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ 8 ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭವ ಪಾಶದಲಿ ನಾನು ಹರಿಯೆ ಕಿಲಿಕಿಲಿ ನಗುವರೆ ಸಲಹುವದು ದೊರೆಯೆ ಪ ಕೆಲರ ಮಾತಿಗೆ ಪೋಗಿ ಬಲವಾಗಿ ಅವರ ಕೆಲಸ ಮಾಡುವೆ ನಿಜ ಕೆಲಸವ ಮರೆದೆ ನಾ 1 ಧರಣಿಯ ಪತಿಯೇವೆ ಶರಣೆಂದು ತಿಳಿದು ಪಾದ ಸಿರಿಯ ರಮಣನೆ2 ಉದರಗೋಸುವಾಗಿ ಮರೆದವರ ವಶದಿ ಹದನವ ಕಳಕೊಂಡು ಮದಡ ನಾನಾದೆನೊ 3 ಉಣವೆನೊ ಪರರನ್ನ ದಣಿವೆನೊ ಅದಕ್ಕೆ ಕುಣಿವೆನೊ ಅವರಂತೆ ಗುಣವೇನು ಎನಗೆ 4 ಈಸು ಪರಿಯಲೆನ್ನ ಶ್ರೀಶ ದಾಸರ ವಶದಿ ವಾಸವಿತ್ತು ಬದುಕಿಸೊ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ಎಂದಪ್ಪಿಕೊಂಬೆ - ರಂಗಯ್ಯ ನಿನ್ನ |ಎಂದಪ್ಪಿಕೊಂಬೆ........................... ಪಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ |ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅ.ಪಅರಳೆಲೆಮಾಗಾಯಿ ಕೊರಳ ಪದಕ ಸರ |ತರಳರನೊಡಗೂಡಿ ಬೆಣ್ಣೆಯ ಮೆಲುವನ............... 1ಅಂದುಗೆಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ |ಚೆಂದದಿ ಕುಣಿವ ಮುಕುಂದನ ಚರಣವ................ 2ಹೊನ್ನಿನ ಉಡುದಾರ ರನ್ನದ ಚೌಕುಳಿ |ಚಿನ್ನದುಂಗುರವಿಟ್ಟಜಾಹ್ನವಿಜನಕನ.......................3ಅಪ್ಪಣ್ಣ ಭಾಗವತನ ರೂಪವು ತಾನಾಗಿ |ತುಪ್ಪದ ಬಿಂದಿಗೆ ತಂದ ವಿಠಲನ...................... 4ಪರಿಪರಿ ಭಕುತರ ಮರೆಯದೆ ಸಲಹುವ |ಪುರಂದರವಿಠಲನ ಸಿರಿಪಾದ ಪದುಮನ 5
--------------
ಪುರಂದರದಾಸರು
ಸಾಕ್ ನಿನ್ನ ಸಂಸಾರವೂ ಓ ಮನವೇಯಾಕ್ ನಿನಗೀ ವ್ಯಾಪಾರವೂಪಬೇಕ್ ಬೇಕಾದುದ ತಂದುಹಾಕಿದುದೆಲ್ಲವ ತಿಂದು ಕಾಗೆ-ಯಂತೆ ಕೂಗುವರುಜೋಕೆಜೋಕೆಪೋಕಮನವೇಅ.ಪಯಜಮಾನ್ನೆ ಸಿಕ್ಕೀತೆಂದು ಪೌರುಷವ್ಯಾಕೋಅಜಪಟ್ಟಕ್ಕೊಡೆಯನೆಂದು ಟ್ರೆಜರಿ ಖಜಾನಿ ಕೀಲಿಕೈಸಿಕ್ಕಿತೆನುತ್ಹಿಗ್ಗಿಸುಜನಸಜ್ಜನರ ಮನ್ನಿಸದ ನಿ-ನ್ನೆಜಮಾನ್ಕೆ ಸುಡುವುದು ಮನವೇ1ಹೊಟ್ಟೆಗೂ ಸಮ ತಿನ್ನದೇ ಒಳ್ಳೆಯದೊಂದುಬಟ್ಟೆಸಹ ಹೊದೆದುಕೊಳ್ಳದೆಕಷ್ಟ ಪಟ್ಟು ಹಣ ಗಳಿಸಿಟ್ಟು ಮರುಗದೆದುಷ್ಟ ಮಕ್ಕಳು ಜುಗಾರಾಡಿ ಕಳೆದರೆಂದುಕೆಟ್ಟ ಪಾಪಿ ಮನವೇ2ಋಣ ರೂಪಸಂಸಾರಕೇ ನಿನಗೆ ಕೈಲಿ ಹಣಇಲ್ದೀ ವ್ಯಾಪಾರ್ಯಾಕೆ ಗುಣವಿಲ್ಲದ್ಹೆಂಡತಿಬಿನವಿಲ್ದ ನೆಂಟರುಬಣಗುಮಕ್ಕಳಿಗಾಗಿದಣಿವುದ್ಯಾತಕೊ ವ್ಯರ್ಥ ಹೆಣದತ್ತ ಮನವೇಬಂಧು ಬಾಂಧವರೆಲ್ಲರೂ ಸಂಪದವಿರೆಬಂದು ಸೇವಿಸಿ ಹೊಗಳ್ವರುಇಂದುನೀ ಗತಿಹೀನನೆನಿಸಲು ಜಗಳವಸಂಧಿಸಬೇಕಾಗಿ ನಿಂದಿಸುವರುಹಿಂದಿನಿಂದಲಿ ಪರಿಪರಿ ಮಂಗಬುದ್ಧಿ ಮನವೇ3ಯಾರಿಗೋಸುಗ ಬಂದಿಲ್ಲಿ ದಣಿವೆ ಸಂಗ-ಡ್ಯಾರೂ ಬರುವರ್ ಕಡೆಯಲಿಯಾರು ಯಮನ ಶಿಕ್ಷೆ ತಡೆವೆನೆಂಬರು ಪೇಳ್ವಾರಿಜನಾಭಗೋವಿಂದನಲ್ಲದೆ ಮುಂದೆಯಾರಿಗ್ಯಾರುಳಿಂಬ್ಹೇಳು ಮನವೇ4xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ