ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾರೆ ನೆರೆ ತಿಳಿ ನಿಜ ಹಿತವನು ಪ ಇನ್ನಾರೆ ನೆರೆ ತಿಳಿ ನಿಜ ಹಿತವನು | ನಿನ್ನೊಳು ನೀನು ಮರಳು ಮನವೇ | ತನ್ನ ಹಿತವ ತಾ ನರಿಯದೆ ಮರೆದು | ದಣ್ಣನೆ ದಣಿವುದು ಸುಖದನುವೇ 1 ಸಂತರಿಗೆರಗಿ ಶರಣವ ಮಾಡಿ | ಸದ್ಭೋಧ ಕೇಳಲು ಬೇಸರಿಕೆ | ಪಂಥದಿ ಲೆತ್ತ ಪಗಡಿ ಜೂಜೂ ಮಂಡಿಸಿ | ಎಂದಿಗೆ ದಣಿಯೇ ನೀ ವಂದಿನಕೆ 2 ಒಂದರೆ ಘಳಿಗೆಯ ಹರಿಕಥೆ ಮಾಡುವ | ಸ್ಥಳದಲಿ ಕೂಡಲು ತೂಕಡಿಕೆ | ಛಂದದಿ ಹಾಸ್ಯ ಕುವಿದ್ಯಗಳಾಟವ | ನೋಡುದರಲಿ ಮಹಾ ಎಚ್ಚರಿಕೆ 3 ಪಥ | ಅನುಸರಣಿಯೊಳಗೆ ನಿರ್ಭಯವು | ಧನ ಧರ್ಮದಂಧರ ಮನಸವ ಹಿಡಿಯಲು | ಕಾಶಿನ ಆಶೆಗೆ ಬೆಜ್ಜರವು 4 ತೃಷೆಯದ ಕಾಲಕೆ ಬಾವಿ ತೋಡುವೆನೆಂಬಾ | ವನ ಪರಿಯಲಿ ಮತಿವಿಡಿಯದಿರು | ವಸುಧಿಲಿ ಮಹಿಪತಿ ನಂದನ ಪ್ರಭುವಿನ | ಶರಣ ಹುಗಲು ದಿನ ಗಳೆಯದಿರು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧಣಿ ನೀನಿರಲು ತಣಿಸಿ ಪರರ ದಣಿವುದುಂಟೆ ಲೋಕದಿ ಪ ಕ್ಷಣ ಕ್ಷಣದಲಿ ಪೊರೆವ ಚಿಂತಾ ಮಣಿ ನೀನಿರೆ ತ್ರಿಭುವನಕೆ ಅ.ಪ ಕರದಲಿರುವ ಮಣಿಯ ಬೆಲೆಯ ನರಿಯದಂಥ ಮೂಢ ಜನರು ಪರರಿಗಿತ್ತು ಹರುಷದಿಂದ ಪುರಿಯ ಕೊಂಬ ತೆರದಲಿ 1 ದುರಿತ ದೂರ ಮಾಡಿ ಸಾರ ಫಲಗಳನ್ನು ಕೊಡುವ ನಾರಸಿಂಗ ಮಂತ್ರವಿರಲು ಭೈರವನನು ಜಪಿಸುವಂತೆ 2 ಪಡೆದ ಜನಕನಲ್ಲದೆನ್ನ ನುಡಿಗೆ ಒಲಿವರುಂಟೆ ಜಗದಿ ಕಡಲಶಯನ ಎನ್ನ ಕರವ ಪಿಡಿಯುತ ಪ್ರಸನ್ನನಾಗೋ 3
--------------
ವಿದ್ಯಾಪ್ರಸನ್ನತೀರ್ಥರು
ಬರಿದೆ ಭ್ರಾಂತಿಯಾತಕೆ ಎರಡು ದಿನದ ಬಾಳಿಗೇ ಪ ಕರೆಕರೆ ಸಂಸಾರಕೆ ಕೆಲಕಾಲವಿರಲಿ ಎಚ್ಚರಿಗೆ ಅ.ಪ ಸಂದೇಹವ ಪಡುವನು ಎಂದಿಗು ಸುಖಿಯಾಗನು 1 ಶಾಸ್ತ್ರವೇನು ಪೇಳ್ವುದು ಸ್ಥಿರವೆ ಅಲ್ಪ ಸುಖವಿದು ಗಾತ್ರವ ನೋಯಿಸುವದು ರಾತ್ರಿಪಗಲು ದಣಿವುದು 2 ಹಿತದ ಮಾರ್ಗ ತ್ಯಜಿಸುವೆ ಅತಿಶಯಗಳ ಬಯಸುವೆ ಪಥಿಕರಂತೆ ನುಡಿಯುವೆ ಪಾಪಿಯಾದೆ ಛೀ ಮನವೆ 3 ವಾರಿಧಿ ಸಂಶಯಾತ್ಮನೆನಿಸಿದಿ ಕಂಸ ವೈರಿಯ ಮರೆದಿ 4 ಯೋಗಸಿದ್ಧಿಯೇ ಬಲಾ ಕೂಗಿದರದು ನಿಷ್ಫಲಾ ಹ್ಯಾಗು ನಮ್ಮ ಕೈ ಬಿಡನಲಾ ಶ್ರೀಗುರುರಾಮ ವಿಠಲಾ 5
--------------
ಗುರುರಾಮವಿಠಲ