ಕುಣಿ ಕುಣಿಯೆಲೋ ಹರಿಗಾನದಲಿ ಪ
ಅಣಕಿಸುವರೆಂದು ಮನ ಜರಿಯದೆಲೆ ಅ.ಪ
ಅನುಗಾಲವು ಮನಕೊರೆಯುವ
ಅನುತಾಪಗಳ ಕೊನೆಗಾಣಿಸಲು 1
ಸ್ಥಿರವಲ್ಲವು ನರಜನ್ಮವು
ಸರಿಸಮಯವೆಂದು ಅರಿಯುತ್ತ ಮುದದಿ 2
ಒಣ ಭೋಗವ ಉಣಲೋಸುಗ
ಹಣಗಳಿಸೆ ಬಲು ದಣಿವುದಕಿಂತ 3
ಗಾನ ಲೋಲನ ನಾಮ ಮಧುರಸ
ಸಾನುರಾಗದಿಂದ ವಾಸಮಾಡುತಲಿ 4
ಪನ್ನಗಾರಿವಾಹನ ಹರಿಯು ಪ್ರ
ಸನ್ನನಾಗಲೆಂದು ಸನ್ನುತಿಸುವ ಸದಾ 5