ಇನ್ನೂ ಭ್ರಾಂತಿಯ ಮಾಡುವರೆ | ನನ್ನದೆಂದು ಆಡುವರೆ |ತನ್ನ ತಾ ತಿಳಿಯದೆ | ಅನ್ಯರ ಗುಣದೋಷ ನೋಡುವರೆ ಪ
ಸ್ತುತಿಸುತ ಬಂದರೇನು | ಮತ್ತೆ ಜಲವ ಮಿಂದರೇನು | ಎತ್ತ ಹೋದರೂ ದಣಿವಿಕೆಯಿಲ್ಲದೆ | ನಿತ್ಯಾನಿತ್ಯ ವಿವರಿಸಲಿಲ್ಲ 1
ಮಾತಿನ ಬಣವಿಯನೊಟ್ಟಿ | ಸ್ವಂತ ವಿಷಯಂಗಳ ಮುಟ್ಟಿ |ಯಾತಕೆ ವೈರಾಗ್ಯದ ಮಾತು | ಮಾತಿನಂತೆ ನಡೆದರಾಯಿತು 2
ನಾನು ದೊಡ್ಡವ ನನ್ನವರೆಂದು | ಜ್ಞಾನ ಗರ್ವದ ಮನೆಗೆ ಬಂದು | ಜ್ಞಾನಬೋಧನ ಪ್ರಭುವ ಕೂಡದೆ ದೀನನಾಗಿ ಬಳಲುವದೇನೊ 3