ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೊರಕುವುದೇ ಪರಮಾರ್ಥ ಪ ಜರಿದು ಆಶ್ರಮ ಧರ್ಮಾ ವೇಷ ವಿರಕ್ತಿಯಿಂದಾ | ಚರಿಸುತ ಬಳಲುವರೇ ವ್ಯರ್ಥ 1 ಕ್ರಮದ ಹಾದಿಯ ಬಿಟ್ಟು ಅಡವಿ ಬೀಳಲು ಎಲ್ಲ | ಕಮರಿಯಲ್ಲದೇ ಗ್ರಾಮವಾರ್ತಾ 2 ಕಣ್ಣಿನೊಳಂಜನಿಲ್ಲದೇ ಹಲವು ಸಾಧನದಿಂದಾ | ದಣ್ಣನೇ ದಣಿವರೇ ದ್ರವ್ಯಕುರ್ತಾ 3 ಕರಗದೆ ವಾಸನೆ ತಪಹೀನ ಅಂತರ್ಗತ | ಜ್ವರವಿರಲಾರೋಗ್ಯದ ಸ್ನಾನಾರ್ಥ 4 ತಂದೆ ಮಹಿಪತಿ ಸುತ ಪ್ರಭು ಒಲುಮೆಯಾ | ಛಂದದಿ ಪದ ಕೊಂಡವನೇ ಧೂರ್ತಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಪ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಅ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ1 ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಇಂದು ಹೋಗಿರೆಂಬೆ ನೀನು2 ಶಮದಮಾದಿ ಗುಣಗಳಿಂದಲಿ ಸಜ್ಜನರು ಮೂರ್ತಿ ಮನದಲಿ ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ 3 ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ 4 ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ ತನುವು ಮನವು ನಿನಗೆ ಅರ್ಪಿಸಿ ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ 5
--------------
ವಿಜಯದಾಸ