ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗ್ಯಾಕೋ ಜನರಂಜನೆ | ವಣಾ ಭಂಜನೆ ಪ ಎಲ್ಲವಿದ್ಯವ ಸಾಧಿಸಿ ಮೆರೆಯಬೇಕೆಂಬ | ಬಲ್ಲವಿಕೆ ಹೆಮ್ಮೆಗೆ ಬೀಳುರೆ | ಯಳ್ಳಿಗೆ ಬೆಲ್ಲವ ಹುಯಲು ಹೋದಂತವಯ | ಸುಳ್ಳಿನ ಭ್ರಾಂತಿ ಕಳುವರೇ 1 ಹೆಣಗುತಿ ದೀಕ್ಷಿತನೆಂಬ ಮನ್ನಣಿಗ್ಯಾಗಿ | ದಣಿವರೆ ಕರ್ಮದಿ ದಣ್ಣನೆ | ಮುಣುಗುವವನ ತೆಲಿಮ್ಯಾಲ ಕಲ್ಲನ್ನಿಟ್ಟರೆ | ಗಣಿಸದೇ ದಾಟಲು ಬಲ್ಲನೆ 2 ಶರಣ ಕೊಳಬೇಕೆಂದು ಬೂದಿ ರುದ್ರಾಕ್ಷಿಯ | ಧರಿಸಿ ಕಾವಿಯ ಸೋಗು ಮಾಡುವರೆ | ಹರುಷದಿ ಖಜ್ಜಿಗೆ ಬಿಸಿನೀರು ಹೊಯ್ದಂತೆ | ಮರುಳೆ ಜನ್ಮ ಸಾಧನ ಕೂಡುರೇ 3 ಕಾಲನುಕೂಲವಿದ್ದ ಕೈಯಲಿ ಪರಗತಿ | ಕೀಲವರಿತು ಜ್ಞಾನ ಪಡೆವುದ | ಕೊಳ್ಳೆ ಹೋದ ಬಳಿಕ ಕೂಗುವ ಪರಿಯಲಿ | ಚಾಲವರಿದರಾಗ ಬಾರದು 4 ಒಂದೇ ನಿಷ್ಠೆ ಒಂದೇ ಮಾರ್ಗದಿ ಮನ | ದಂದುಗ ಬಿಟ್ಟು ಶರಣ ಹೊಕ್ಕರೆ | ತಂದೆ ಮಹಿಪತಿ ಸುತ ಪ್ರಭು ಬೀರುವ | ಮಂದನಾಗದೇ ತಿಳಿ ಇನ್ನಾದರೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು