ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ ಬಂದ ಜನ್ಮಸಾಫಲ್ಯವಾಯಿತೀಗ ಧ್ರುವ ಮುಂಬಿಗಾಗ್ಯಾವೆನ್ನೊಳು ಸುಉಲ್ಹಾಸ ಅಂಬುಜಾಕ್ಷನ ಕಂಡೆ ಸುಪ್ರಕಾಶ ತುಂಬಿತುಳುಕುತಲ್ಯದ ಬಲುಹರುಷ ಇಂಬುಸಾಲದು ಬ್ರಹ್ಮಾಂಡ ಆಕಾಶ 1 ಎನ್ನಹೃದಯ ಮಂದಿರದೊಳು ನೋಡಿ ತನ್ನಿಂದ ತಾಂ ಬಂದನು ದಯಮಾಡಿ ಕಣ್ಣುಪಾರಣೆಗೈಸಿದೆನ್ನ ಕೂಡಿ ಇನ್ನು ದಣಿಯದೆನ್ನಮನ ಕೊಂಡಾಡಿ 2 ಘನ ಸುಖದೋರುತದೆ ಎನಗಿಂದು ಭಾನುಕೋಟಿ ಉದಯವಾದನೆಂದು ದೀನ ಮಹಿಪತಿಸ್ವಾ,ಮಿ ಕೃಪಾಸಿಂಧು ಮನೋಹರ ಮಾಡಿದ ತಾನೆ ಬಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗೋಪಿ ನಿನ್ನ ಬಾಲನ ಮಾಡುವ ಆಟದ ಪರಿಯನು ಪ ತುಡುಗಿಲಿ ಗೋರಸ ಕುಡಿವಾ | ಅವ | ಘಡಿಸಲು ಕಣ್ಣನೆ ಬಿಡುವಾ | ಹಿಡಿಯಲು ಬರೆ ಬೆನ್ಗೊಡುವ | ಅಡಿ | ಇಡುತಲಿ ತಿರುಗದೆ ಓಡುವನವ್ವಾ 1 ಕೊಡಮಸರಿಗೆ ಬಾಯ್ದೆರೆವಾ | ತಾ | ಬೇಡುವ ಪಸರಿಸಿ ಕರವಾ | ಕೊಡಲಿ ದಣಿಯದೆ ಸುರಿವಾ | ನ | ಟ್ಟಡವಿಲಿ ನಿಂದು ಹೊರೆವನವ್ವಾ 2 ಕೊಳಲನೂದಿ ಹೊಳೆವಾ | ಹೆಂ | ಗಳೆಯರ ಸನ್ಮತಿಗಳೆವಾ | ಅಳುಕದೆ ವಾಜಿಲಿ ನಲಿವಾ | ಇಳೆ | ಯೊಳು ಮಹಿಪತಿ ಸುತ ಪ್ರಭು ಲೀಲೆವ್ವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚೋದ್ಯ ಕೇಳಿಚಿತ್ರದ ಹೂವಿನ ಹವಳ ಕಾಯಾಗುವಅರ್ಥವ ತಿಳಿದು ಹೇಳಿ 1 ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿಬೆಟ್ಟದಿ ಸಾರವನುತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬಹುಟ್ಟು ಬಂಜೆಯ ಮಗನು 2 ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನುದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲುಹೆಣನೆದ್ದು ಕುಣಿದಾಡಿತು 3 ಕಣ್ಣಿಲ್ಲದಾತನು ಕಂಡು ಪಿಡಿದ ಮೃಗಕೈಯಿಲ್ಲದಾತನೆಚ್ಚಮಣ್ಣಲಿ ಹೊರಳುವ ಕಾಲಿಲ್ಲದಾತನುಗಣ್ಯವಿಲ್ಲದೆ ಪಿಡಿದ 4 ಎಲ್ಲರು ಕೇಳಿ ಕನಕ ಹೇಳಿದ ಮಾತಎಲ್ಲರೂ ಗ್ರಹಿಸಿಕೊಳ್ಳಿಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತುಬಲ್ಲಾದಿಕೇಶವನು 5 |
--------------
ಕನಕದಾಸ
ಪವಮಾನ-ಪಾವನಮೂರ್ತಿಯು ನೀನು ಕಾವುದೆಮ್ಮನು ಪ ಭುವನ ಚತುರ್ದಶದಲ್ಲಿಹ ಜೀವರ ಜೀವನ ನಿನ್ನದೋ ದೇವವರೇಣ್ಯಅ.ಪ ತೃಣಜೀವರಾದಿ ಸರ್ವರೊಳು ನಿಂತು ಗುಣಕಾಲಕರ್ಮಕ್ಕನುಗುಣನಾಗಿಹ ಫಲವ ನೀನಿತ್ತು ಕ್ಷಣ ಬಿಡದೆಲೆ ನೀನಗಣಿತ ಕಾರ್ಯವ ದಣಿಯದೆ ಮಾಡಿಸಿ ಧಣಿಗರ್ಪಿಸುವಿಯೊ1 ಶ್ರೀ ಜಗದ್ಗುರುವರೇಣ್ಯನೆ ನೀನು ಋಜುಸಾರ್ವಭೌಮ ನಿಜ ಪಾದಾಂಬುಜವ ತೋರಿಸೊ ಇನ್ನು ಈ ಜಗ ಕಾರ್ಯ ನಿವ್ರ್ಯಾಜದಿ ಮಾಡುತ ನೀ ಜಯಾಪತಿಗರ್ಪಿಸಿ ಅಜಪದ ಪಡೆದೆಯೊ2 ಕೋಟಿತ್ರಯರೂಪನೆ ಕಾಯುವುದಯ್ಯ ದಾಟಿಸು ಭವಶರಧಿಯಾ ಪಾಟುಪಟ್ಟದ್ದೆಲ್ಲ ನೀನರಿಯಾ ಸಾಟಿಯುಂಟೆ ಲಲಾಟನೇತ್ರ ಬೆ ನ್ನಟ್ಟಿ ಬರಲು ಕೇದಾರಕೆ ಅಟ್ಟಿದೆ 3 ಮರಣ ಜನುಮಂಗಳು ಬಂದರೆ ಬರಲಿ ಹರಿಗುರುಗಳಲಿ ಸ್ಮರಣೆಯು ತಪ್ಪದೆ ನಿಶ್ಚಲವಿರಲಿ ಉರುತರ ಹರಿಸರ್ವೋತ್ತಮವೆಂಬುವ ತರತಮ ಭೇದವು ನಿರುತವು ಇರಲಿ 4 ಶ್ರವಣ ಮನನಾದಿ ಭಕುತಿಯನ್ನು ಪವಮಾನ ನೀ ಕೊಡು ಅನುಮಾನಿಸಬೇಡವೋ ನೀ ಇದಕ್ಕಿನ್ನು ಭವಮೋಚಕ ಶ್ರೀ ವೇಂಕಟೇಶ ಇನ್ನೊಳಹೊರಗಿಹನೆಂಬುವುದನು ತೋರೋ 5
--------------
ಉರಗಾದ್ರಿವಾಸವಿಠಲದಾಸರು
ಬಾರೋ ನಲಿದಾಡೋ ಜಿಹ್ವೆಯಲಿ ಮೂರಧಿಕಾರೊಡೆಯನೆ ಬಾರೋ ನಲಿದಾಡೋ ಜಿಹ್ವೆಯಲಿ ಪ ದಾಸಾ ಬಹು ಮೋಸಕ್ಕೊಳಗಾಗಿಹೆನು ಶ್ರೀಶಾ ಕರಪಿಡಿಯೆನ್ನ ದೋಷ ಮಹದಾಶಾ ವಹಿಸಿರುವೇನು ಘಾಸಿಯಾದೇನು ಮಾಡೋ ಕರುಣಾರ್ಣವದಿ ಈಶಾ ಘನವೇಷಾ ಬಹುತೋಷ ದಾಸನ ಮಾಡಿಕೊ ಎನ್ನ 1 ಕಂದೀ ನಾ ಕುಂದೀ ಗೃಹದೊಳಗೆ ಮಂದಿಯಾ ಶೇರಿದೆ ನೊಂದೇ ಬಹು ಬೆಂದೇ ಮನದೊಳಗೆ ಬಂಧನದೊಳು ಶಿಲ್ಕಿ ಸುಂದರ ಮೂರುತಿ ಸಂದಣಿಯದೆ ನಾ ಹೊಂದಿದೆನಿನಭವ ಭವ ನಾಯಿಂದೂ ದ್ವಂದ್ವಾಪದವಿಡಿದಿದೆ 2 ಘೋರಾ ನಿಸ್ಸಾರ ಭವದೊಳಗೆ ದಾರಿಗಾಣೆನು ಮಾರಾ ಬಹುದೀ ರಾಮನದೊಳಗೆ ಶೇರಿ ಕುಣಿವಾನು ಮಾರಜನಕ ನಿನ್ ಹಾರೈಶನುದಿನ ಶೇರಿ ಭಜಿಸಿ ನಿನ್ನ ನರಸಿಂಹವಿಠ್ಠಲ ಸಾರಿ ನಿನ ಕೋರಿ ಪದಶೇರಿ ಆರಾಧಿಸುವೀಗಳೆ 3
--------------
ನರಸಿಂಹವಿಠಲರು
ಬ್ಯಾಗ ಬಾರೋ ಗುರುರಾಘವೇಂದ್ರರಾಯಾ ಬಾಗಿ ನಮಿಪೆ ಮಹರಾಯಾ ಪ ಯೋಗಿ ಮಧ್ವಮತದಾಗಮದಿಂದಲಿ ಭಾಗವತರು ಶಿರಬಾಗಿ ಪಾಡುವರೋ ಅ.ಪ ಕುಂದಣಮಣಿಮಯ ಸ್ಯಂದನದೊಳತಿ ಸುಂದರ ಶುಭತರ ರೂಪ - ದಿಂದಲಿ ರಾಜಿಪಾಮಂದಭೋಧ ನಿಜ ನಂದದಾಯಕ ಯತಿಕುಲ ದೀಪ ಛಂದದಿ ಭಕುತ(ರ) ಕುಂದನಿಚಯಕೆ ನಿಜ ಚಂದಿರ ಸಮ ಭೂಪಾ - ಪಾದ ದ್ವಂದ್ವವು ನಿಜರಿಗೆ ನಂದ ನೀಡುವ ಪ್ರತಾಪಾ ವಂದಿಸಿ ಗುಣಗಳ ವೃಂದ ಪೊಗಳುವ ಮಂದ - ಜನರು ಬಲು - ಸುಂದರ ಶುಭಗುಣ ದಿಂದ ಶೋಭಿಪÀ ಜನ - ಸಂದಣಿಯೊಳು ನಿನ್ನ ಸುಂದರ ಮೂರುತಿ - ಛಂದದಿ ನೋಳ್ಪರೊ 1 ಕನಕ ಮಣಿಮಯ ಘನಸುಕೊಡೆಗಳು ಮಿನುಗುವ ಚಾಮರ ಚೋದ್ಯವೋ ಅನುಗ - ಕರಗತ ಮಣಿಮಯ ಛಡಿಗಳ ಅನುಪಮ ಭಾರವೋ ಮುನಿಜನ ಶಿರಮಣಿಸಿ ಗುಣ ಗಣ ಎಣಿಸುವ ಗಂಭೀರವೋ ತನು - ಮನ - ಮನಿ - ಧನ ವನುತೆರ ನಿನಗನು - ಮಾನಮಾಡದೆ ನೀಡುವಗಾಧವೋ ಘನ ಸಂತೋಷದಿ - ಮನದೊಳು ನಲಿಯುತ ಕುಣಿದಾಡುತ - ದಣಿಯದೆ ಕರಚಪ್ಪಳಿ | ಕ್ಷಣ ಕ್ಷಣದಲಿ ತ್ಮಮ - ತನು ಮರೆದೀಪರಿ ಜನರೊಳು ನಮ್ಮ ಜನುಮ ಸಫಲವೆಂಬುವರೋ 2 ಪಟುತರ ಭಟರಾರ್ಭಟಿಸುವ ಮಹ ಚಟ - ಚಟ - ಚಾಟ ಶಬ್ಧವೋ ಕುಟಿಲ ವಿಮತ ಘನ ಪಟಲ ವಿದಾರಣ ಚಟುಲ ಸ್ವಮತ ಸಿದ್ಧಾಂತವೋ ಕುಟಿಲಾಳಕಿಯರ ಕುಣಿಯುವ ಪದದಿ ಸಂ - ಘಟಿತ ಗೆಜ್ಜೆಗಳ ಶಬ್ಧವೋ ಪಟು ಗುರುಜಗನ್ನಾಥವಿಠಲರ ದಾಸರ ಧಿಟ ಪದ ಸಂಗೀತವೋ ಧಿಟಗುರುರಾಯನೆ - ಭಟರುಗಳ ಮಹÀಸು - ಕಟಕದಿ ಮೋದೋ - ತ್ಕಟದಲಿ ಇಷ್ಟವ ಥಟನೆ ಬೀರುತ ಬಲು ಪುಟಿದಾಡುತ ಹರಿ ಭಟ ಜಲಜೋತ್ಕಟ ದಿವಾಕರ 3
--------------
ಗುರುಜಗನ್ನಾಥದಾಸರು
ರÀಂಗನ್ಯಾಕೆ ತಿರುಗಿ ಬಾರನೆ ಅಂತರÀಂಗಪೀಠದಿ ಮೊಗದೋರನೆ ಪ.ಮಂಗಳಾಂಗನೊಳು ಮಾತಾಡದೆಸತಿಕಂಗಳುದಣಿಯದೆ ನೋಡಿಅಂಗನೆಹ್ಯಾಗೆ ಜೀವಿಸಲಮ್ಮ ಎನ್ನಿಂಗಿತವಾರಿಗುಸುರಲಮ್ಮ 1ಕಲ್ಲೆದೆಯಾದೆ ಇನಿತುದಿನ ಜೀವಕೊಲ್ಲದು ಹೋಯೆಂಬ ರೋದನಫುಲ್ಲನಾಭನ ಎಂಜಲುಂಡರೆ ಕಷ್ಟವಿಲ್ಲದ ಸುಖ ಕಣ್ಣು ಕಂಡರೆ 2ಕೃಷ್ಣನ ಶುಭಗುಣ ಹೊಗಳುತ ಬಹುಕಷ್ಟ ನೀಗಿದೆ ನಕ್ಕು ತತ್ವತ:ಸೃಷ್ಟೀಶ ಪ್ರಸನ್ವೆಂಕಟೇಶನ ನೆನೆವಷ್ಟರೊಳಗೆ ಮಾಯವಾದನೆ 3
--------------
ಪ್ರಸನ್ನವೆಂಕಟದಾಸರು
ಹಾ ಹಾ ಸಾಧುರು ಮೆಚ್ಚದನಕ ಹರಿಗುರು ಮೆಚ್ಚ ಪ.ನನ್ನ ಗುಣಕೆ ನಾ ಮೆಚ್ಚಿದೆ ಬರಿದೆಪುಣ್ಯವಂತನೆಂದನ್ಯರ ಜರಿದೆಉನ್ನತ ಸೂಕ್ಷ್ಮ ಸುಧರ್ಮವ ಕಾಣೆನನ್ನೊಳು ನಾ ವೃಥಾ ಹಿಗ್ಗಿದರೇನು 1ಜನದೊಳು ದಣಿಯದೆ ಜ್ಞಾನವನೊರೆದುಘನವೈರಾಗ್ಯಕೆ ಹಿಂದಕೆ ಸರಿದುತನು ಮನ ಕದ್ದು ಭಕುತಿಯೊಳಿದ್ದುಹೆಣಗಾಡುತ ಭಾಗವತೆನಿಸಿದ್ದು 2ಸಂತರು ಒಪ್ಪಿದ ಜ್ಞಾನಿಯವ ಸಂತಸಂತರಿಗಾಗದವಿರತಿಭ್ರಾಂತಿಸಂತರುಕೂಡಿದಭಕುತಿ ಮುಕುತಿಸಂತರ ಪ್ರಿಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
--------------
ಪ್ರಸನ್ನವೆಂಕಟದಾಸರು