ಕಂಡುದನು ಪೇಳ್ವೆ ಬ್ರಹ್ಮಾಂಡ ನಾಯಕನೆ | ಕೊಂಡೆಯವಿದಲ್ಲ ಗ್ರಹಕುಂಡಲವ ಶೋಧಿಸುತ ಪ
ಮಕರ ಸತಿ ಲಗ್ನದಲ್ಲಿರ್ಪ ಜಲ ತಾರಕೇಂದು ದಶೆ ಯಲಿ ನಿನಗೆ ಜಲದೊಳಾವಾಸವಾಯಿತು ಹರಿಯೆ 1
ಮನುಮಥನ ತಾತ ಕೇಳಿನಸುತನು ನಾಲ್ಕನೆಯ ಮನೆಯೊಳಿರುವನು ಲಗ್ನಕಧಿಪನೆನಿಸಿ ಮನದಿ ಯೋಚಿಸಲಿಕಾ ಶನಿದಶೆಯೊಳಾ ಕುಧರ ವನು ಪೊತ್ತು ದಣಿದೆನೀವ ನಿಧಿಯೊಳು ಹರಿಯೆ2
ಮಂಗಳನೆ ಸುಖಕಧಿಪ ಮಂಗಳನು ಸಿಂಗರದಿ ಸಿಂಗರಾಶಿಯೊಳು ತಾ ಕಂಗೊಳಿಸುತ ತುಂಗವಿಕ್ರಮನವನೆ ಸಂಘಟಿಸಿದನು ವನದಿ ಹಿಂಗದೆ ಬೇರು ಮೆಲುವಂಗವನು ಹರಿಯೆ 3
ವಾರಿಜಾಸನ ಪಿತನೆ ಕ್ರೂರಕ್ಷೇತ್ರದಿ ರಾಹು ಸಾರಿರ್ಪ ರಾಶಿ ವೃಶ್ಚಿಕವೆನಿಸಲು | ಕಾರುಣಿಕನವನ ದಶೆಯಾರಂಭದಲಿ ನಿನಗೆ ಘೋರ ರೂಪವ ತಾಳಲಾಯ್ತು ನರಹರಿಯೆ 4
ಮಂದರೋದ್ಧರ ಕೇಳು ಚಂದಿರನ ರಾಶಿಗಾ ನಂದದಧಿಪತಿ ಸೂರ್ಯನಂದನನು ತಾ ನಿಂದು ಮೇಷದೊಳತ್ರಿಕಂದನ ನಿರೀಕ್ಷಿಸಲು ಬಂದುದೈ ಭಿಕ್ಷೆಯದರಿಂದ ನಿನಗೆಲೆ ಹರಿಯೆ 5
ಅಂಬುಜಾನನ ಕೇಳು ಒಂಭತ್ತರಧಿಪ ಶಶಿ- ಸಂಭವನು ಪಾಪದಿಂ ತುಂಬಿರ್ಪನು | ಸಂಭವಿಸಲವನ ದಶೆಯಿಂದ ನೀ ಕ್ಷತ್ರಿಯ ಕ-ದಂಬ ಮರ್ದಿಸಿ ಧರ್ಮಮಂ ಬಿಟ್ಟೆ ಹರಿಯೆ 6
ದುರಿತ ಸ್ಥಾನಾಧಿಪತಿ ಗುರುವೇಳನೆಯ ಮನೆಯೊಳಿರುವನದರಿಂ | ಹಿರಿಯರುಪದೇಶದಿಂದಿರದೆ ಭಾರ್ಯೆಯನಗಲಿ ಚರಿಸಿದೆಯರಣ್ಯದೊಳಗಿರುತ ನೀ ಹರಿಯೆ 7
ಘೋರಪಾಪವಿನಾಶ ನಾರಿರಾಶಿಯ ನವಮ-ಕಾ ರವಿಯು ಸಾರಿ ನಿಂದಿರ್ಪನದರಿಂ | ಚೋರವ್ಯಾಪಾರ ಪರನಾರಿಯರ ಕೂಡೆ ವ್ಯಭಿ-ಚಾರ ನಿನಗಾಯಿತು ರಮಾರಮಣ ಹರಿಯೇ 8
ಕೈವಲ್ಯ ತಾರಕನಾಥನು | ಪೂತ ಬುದ್ಧಿಸ್ಥಾನ ವಾದನದರಿಂಲಿಂ ಭೂತಲದಿ ಸ್ಥಾಪಿಸಿದೆ ನೂತನ ಮತವ ಹರಿಯೇ 9
ಪಾರವರ್ಜಿತ ಕವಿಯು ಸಾರಿರ್ದ ದಶಮದೊಳ್-ಗಾರವ ನೆನೆಯುಂಟು ಧೀರನೆನಿಸಿ | ಭೂರಿಮ್ಲೇಂಛರನು ಸಂಹಾರ ಗೈಯುತ ತೇಜಿಯೇರಿ ಮೆರೆಯುತ್ತಿರುವ ನಾರಾಯಣ ಹರಿಯೆ 10