ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ಸಾಕು ರಂಗನಾಥ ಮನುಜ ಜನ್ಮವು ಲೋಕ ದೊಳಗೆ ಜನಿಸಲಾರೆ ಸಾಕು ಭವದಬೇಗೆಯಿನ್ನು ಬೇಕು ನಿನ್ನ ನಾಮವೊಂದೆ ಸಾಕುರಂಗ ಪಾಲಿಸೋ ಪ ಸುದತಿ ಸುತರ ಪೊರೆವುದಕ್ಕೆ ತಿರುಗಿ ಹೋಯಿತು ಸದನಕೈದಿ ಬರಲುಹಸಿದು ದಣಿದುಸ್ನಾನ ಜಪವ ತೊರೆದು ಕುಡಿದು ತಿಂದು ಒಡಲ ಹೊರೆದು ಬಿಟ್ಟುದಾಯಿತು1 ಕೊಂಡ ಭ್ರಷ್ಟ ಹಣವ ಕೊಟ್ಟು ಹೋಗು ಎಂಬುದಾಯಿತು ಕಷ್ಟ ಬೇಡವೆಂದು ಗಡುವ ಕೊಟ್ಟು ಕಳುಹಲವರ ಬಳಿಕ ಹೊಟ್ಟೆ ಹಸಿದು ನೇಮಗಳನು ಬಿಟ್ಟುದಾಯಿತು 2 ಮನೆಯ ಮಾಡಿಯಿರಲು ತಿಂದು ಅಸ್ತಿಮಾಂಸವನ್ನು ಅಂದ ಗೆಡಿಸಿತು ಹಿಂದೆ ಹಮ್ಮಿನೊಳಗೆ ತಂದು ತಿಂದುದನ್ನು ನೆನೆದು ನೆನೆದು ಮಂದನಾಗಿ ಮುಂದೆ ಗತಿಯು ಕುಂದಿಹೋಯಿತು 3 ಕಣ್ಣು ಕಾಣ ಬೆನ್ನದುಡುಗಿ ಬಣ್ಣಗೆಟ್ಟು ದಂತಬಿದ್ದು ಉಣ್ಣಲಿಕ್ಕು ಆಗದಾಗಿ ಕಿವಿಯು ಕೇಳದಾಯಿತು ತಿಣ್ಣ ಯಮನ ದೂತಬಂದು ಎನ್ನ ಕೊರಳ ಎಳೆಯುವಾಗ ಅಣ್ಣ ತಮ್ಮದಿರರು ಬೆನ್ನ ಬರುವರಿಲ್ಲವೋ 4 ಮುಪ್ಪು ಹರಯ ಬಾಲಕತ್ವ ಒಪ್ಪದಿಂದ ಮರಳಿಮರಳಿ ಬಪ್ಪ ಭವದ ಶರಧಿಗೊಂದು ತೆಪ್ಪವಿದ್ದಿತು ಅಲ್ಪಹೊತ್ತು ಆದರೇನು ಚಿಪ್ಪಳಿಯ ಗೋಪಿವರನ ಸ್ವಲ್ಪಮಾತ್ರ ಭಜಿಸೆ ಜನ್ಮ ತಪ್ಪಲಾಯಿತು 5
--------------
ಕವಿ ಪರಮದೇವದಾಸರು