(ಆ) ಆತ್ಮನಿವೇದನಾ ಕೃತಿಗಳು
ಪರಿ ಪ
ನೊಂದಮನವ ನೋಯಿಸದೆ ಹರಸು ಬೇಗ ಶ್ರೀಹರಿ ಅ.ಪ
ನನ್ನ ಹೃದಯ ವೀಣೆಯೇಕೊ ಇನ್ನೂ ನಿನಗೆ ಕೆಳಿಸದೆ
ಸನ್ನುತ ವೀಣೆ ನುಡಿಸಿ ನುಡಿಸಿ ಸೋತೆ ನಿನ್ನ ಕಾಣದೆ 1
ನೋಡೆ ಇರದ ನಿನ್ನ ರೂಪ ಮನದಲೇಗೊ ನಿಂತಿದೆ
ಹಾಡಿ ಹಾಡಿ ಮಧುರಗೀತೆ ಆ ನೆನಪಿನಲ್ಲೆ ದಣಿದಿಹೆ 2
ನೀ ಕರುಣಿಸಿದೆ ವಿಶ್ವರೂಪವನು
ಕಂಡಳಾ ಯಶೋದೆ ಬ್ರಹ್ಮಾಂಡವನು 3
ನಂಬಿ ನಿನ್ನನೆ ಭಜಿಸುತಲಿದ್ದ ಭಕ್ತ ಸುಧಾಮನ ರಕ್ಷಿಸಿದಾತನೆ
ಸಲಹು ಜಾಜಿಪುರೀಶ ಚೆನ್ನಕೇಶವನೆ 4