ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗಯ್ಯ ಕೇಶವಾಮಲಗಯ್ಯ ಮಾಧವಾ ಮಲಗಯ್ಯ ಚನ್ನಕೇಶವ ರಂಗರಾಯಾ ಪ ಶ್ರೀಲೋಲ ಮಲಗಯ್ಯ ಪಾಡಿ ತೂಗುವೆನಯ್ಯ ಬಾಲನ ಸಲಹಯ್ಯ ಕೂಡಿ ಪರಮ್ಮಾತ್ಮಾ ಅ.ಪ. ಜಗವೆಲ್ಲ ಕತ್ತಲೆಯಿಂದ ಮಸುಕಿಹುದಯ್ಯ ಖಗವೃಂದ ಪಶುವರ್ಗವೆಲ್ಲ ನಿದ್ರಿಪುದೂ ಜಗವೆಲ್ಲ ನಿಃಶಬ್ದವಾಗಿದೆ ಶ್ರೀಹರಿ ಗಗನದಿ ಗೂಗೆಯು ತೂಗುತಿದಯ್ಯ 1 ಜನರೆಲ್ಲ ಹರಿ ನಿಂನ ಸೇವೆ ಮಾಳ್ದುದ ಬಿಟ್ಟು ಘನನಿದ್ರಾಂಗನೆಯನ್ನು ಅಪ್ಪಿ ಕೊಳ್ಳುವರೊ ಪ್ರಣವ ಸ್ವರೂಪನೇ ಮಲಗು ನೀ ಬೇಗದಿ ತನುವೆಂಬ ತೊಟ್ಟಿಲದಿ ತೂಗುವೆನಯ್ಯಾ 2 ಪನ್ನಗಶಯನನೆ ಆದ್ಯಾಂತರಹಿತನೇ ಮನ್ನಿಸಿ ಭಕ್ತರ ಪೊರೆವ ಮಾದವನೇ ಬಿನ್ನರೂಪವ ತಾಳಿ ಕಾಯವು ದಣಿದಿದೆ ಇನ್ನು ನಿದ್ರೆಗೆ ಪೋಗು ತೂಗುವೆನಯ್ಯ 3
--------------
ಕರ್ಕಿ ಕೇಶವದಾಸ