ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಆತ್ಮನಿವೇದನಾ ಕೃತಿಗಳು ಪರಿ ಪ ನೊಂದಮನವ ನೋಯಿಸದೆ ಹರಸು ಬೇಗ ಶ್ರೀಹರಿ ಅ.ಪ ನನ್ನ ಹೃದಯ ವೀಣೆಯೇಕೊ ಇನ್ನೂ ನಿನಗೆ ಕೆಳಿಸದೆ ಸನ್ನುತ ವೀಣೆ ನುಡಿಸಿ ನುಡಿಸಿ ಸೋತೆ ನಿನ್ನ ಕಾಣದೆ 1 ನೋಡೆ ಇರದ ನಿನ್ನ ರೂಪ ಮನದಲೇಗೊ ನಿಂತಿದೆ ಹಾಡಿ ಹಾಡಿ ಮಧುರಗೀತೆ ಆ ನೆನಪಿನಲ್ಲೆ ದಣಿದಿಹೆ 2 ನೀ ಕರುಣಿಸಿದೆ ವಿಶ್ವರೂಪವನು ಕಂಡಳಾ ಯಶೋದೆ ಬ್ರಹ್ಮಾಂಡವನು 3 ನಂಬಿ ನಿನ್ನನೆ ಭಜಿಸುತಲಿದ್ದ ಭಕ್ತ ಸುಧಾಮನ ರಕ್ಷಿಸಿದಾತನೆ ಸಲಹು ಜಾಜಿಪುರೀಶ ಚೆನ್ನಕೇಶವನೆ 4
--------------
ನಾರಾಯಣಶರ್ಮರು
ಕಂಡ ದೈವಕ್ಕೆ ಕಂಗೆಟ್ಟು ಕೈ ಮುಗಿದು | ದಣಿದಿಯಾತಕೋ ಪ ಶರಧಿ ಗರ್ವ ಪರಿಹರನಸೇರಿ ಹೋದ ದಿವಿಜರ ಬಿಡಿಸಿ ಸಿರಿಯಿತ್ತು ಸಲಹಿದಾತನ 1 ಸುರರು ಪೊಗಳಲು |ಹುರುಳಿಲ್ಲದ ಭವವನಳಿದು ಪರಮ ಪದವಿಯನಿತ್ತನ 2 ವೈರಿ ತಮ್ಮಗೆ |ರುಕ್ಮನಗರ ಧಾರೆಯೆರೆದ ಶ್ರೀ ರಾಮಚಂದ್ರನ 3
--------------
ರುಕ್ಮಾಂಗದರು
ಮಲಗಯ್ಯ ಕೇಶವಾಮಲಗಯ್ಯ ಮಾಧವಾ ಮಲಗಯ್ಯ ಚನ್ನಕೇಶವ ರಂಗರಾಯಾ ಪ ಶ್ರೀಲೋಲ ಮಲಗಯ್ಯ ಪಾಡಿ ತೂಗುವೆನಯ್ಯ ಬಾಲನ ಸಲಹಯ್ಯ ಕೂಡಿ ಪರಮ್ಮಾತ್ಮಾ ಅ.ಪ. ಜಗವೆಲ್ಲ ಕತ್ತಲೆಯಿಂದ ಮಸುಕಿಹುದಯ್ಯ ಖಗವೃಂದ ಪಶುವರ್ಗವೆಲ್ಲ ನಿದ್ರಿಪುದೂ ಜಗವೆಲ್ಲ ನಿಃಶಬ್ದವಾಗಿದೆ ಶ್ರೀಹರಿ ಗಗನದಿ ಗೂಗೆಯು ತೂಗುತಿದಯ್ಯ 1 ಜನರೆಲ್ಲ ಹರಿ ನಿಂನ ಸೇವೆ ಮಾಳ್ದುದ ಬಿಟ್ಟು ಘನನಿದ್ರಾಂಗನೆಯನ್ನು ಅಪ್ಪಿ ಕೊಳ್ಳುವರೊ ಪ್ರಣವ ಸ್ವರೂಪನೇ ಮಲಗು ನೀ ಬೇಗದಿ ತನುವೆಂಬ ತೊಟ್ಟಿಲದಿ ತೂಗುವೆನಯ್ಯಾ 2 ಪನ್ನಗಶಯನನೆ ಆದ್ಯಾಂತರಹಿತನೇ ಮನ್ನಿಸಿ ಭಕ್ತರ ಪೊರೆವ ಮಾದವನೇ ಬಿನ್ನರೂಪವ ತಾಳಿ ಕಾಯವು ದಣಿದಿದೆ ಇನ್ನು ನಿದ್ರೆಗೆ ಪೋಗು ತೂಗುವೆನಯ್ಯ 3
--------------
ಕರ್ಕಿ ಕೇಶವದಾಸ
ಪವಡಿಸು ಪರಮಾತ್ಮಾ ಶ್ರೀ ಶ್ರೀಶಾಪವಡಿಸು ಪರಮಾತ್ಮಾ ಪಪರಮಭಕ್ತರನು ಪೊರೆಯುವ ದೇವನೆಅ.ಪರನ್ನಮಂಟಪದೊಳು ಕನ್ನಡಿಯಂದದಿಸ್ವರ್ಣವರ್ಣದಲಿಹ ಪನ್ನಂಗ ಕಾದಿಹ 1ಸುತ್ತಲು ತುಂಬುರರು ನಾರದರು ಸ್ತೋತ್ರವ ಮಾಡಿಅತ್ಯಂತ ಹರುಷದಿ ಚಿತ್ತೈಸೆಂದೆನುವರು 2ಥಳಥಳಿಸುವ ದಿವ್ಯತಾರೆಗಳಂದದಿಲಲನೆಶ್ರೀ ಭೂದೇವಿಯರು ಸೇವಿಪರು ನಿನ್ನ3ವೇದವ ಕದ್ದನ ಭೇದಿಸಿ ಅಜನಿಗೆವೇದವ ತಂದಿತ್ತು ಆದರಿಸಿದ ದೇವ 4ಮುಳುಗಿದ ಗಿರಿಯನು ಧರಿಸಿ ಬೆನ್ನಲಿ ಬೇಗಸುರರಿಗೆ ಅಮೃತವ ಕುಡಿಸಿದಮಾಧವ5ಸುರಮುನಿಗಳಿಗೆಲ್ಲಾ ಅಭಯವ ನೀಡುತವರಹರೂಪತಾಳಿ ಬಳಲಿ ದಣಿದು ಬಂದಿ6ಕಂದನಿಗಾಗಿ ದೊಡ್ಡ ಕಂಬದಿಂದುದಿಸಿ ಖಳನಕೊಂದು ಕರುಳ ವನಮಾಲೆ ಧರಿಸಿ ದಣಿದಿ 7ಮೂರಡಿ ಭೂಮಿಯ ಬೇಡಿ ಬಲೀಂದ್ರನದೂಡಿ ಪಾತಾಳಕೆ ಬಹಳ ಬಳಲಿ ಬಂದಿ 8ಭೂಮಿ ಪಾಲಕರನ್ನು ಸೋಲಿಸಿಬಾರಿಬಾರಿವಾರಿಜಾಕ್ಷ ಶ್ರೀರಾಮರಿಗೊಲಿದೆಯೊ 9ಸೇತುವೆಯನ್ನುಕಟ್ಟಿದೂರ್ತರಾವಣನ ಕುಲವಘಾತಿಸಿ ಕೊಂದ ರಘುನಾಥನೆ ಬಳಲಿದೆ 10ವಸುದೇವ ಕಂದನೆ ಶಿಶುರೂಪಿನಿಂದಲಿಅಸುರೆ ಪೂತಣಿ ಅಸುಹೀರಿ ಬಳಲಿ ಬಂದಿ 11ತಿದ್ದಿ ತ್ರಿಪುರಾಸುರರ ಮರ್ದಿಸಿ ಸುಜನರಿಗೆಮುದ್ದು ತೋರಿದ ಸುಪ್ರಸಿದ್ಧ ಮೂರುತಿ ಬೇಗ 12ಕರದಿ ಖಡ್ಗವ ಧರಿಸಿ ಸಿರದಿ ಕಿರೀಟ ಹೊಳೆಯೆಇಳೆಯ ಮನುಜರಿಗೆಲ್ಲ ಸುಲಭನಂದದಿ ತೋರ್ಪಿ 13ಮಂಗಳಚರಿತ ವಿಹಂಗವಾಹನ ಸುರಗಂಗೆಯಪಿತ ಸಾಧುಸಂಗವಂದಿತ ದೇವ 14ಗರುಡಗಮನ ಕೃಷ್ಣ ಉರಗನ್ಹಾಸಿಗೆಯೊಳುಸಿರಿದೇವಿ ಸಹವರ ಕಮಲನಾಭ ವಿಠ್ಠಲ 15
--------------
ನಿಡಗುರುಕಿ ಜೀವೂಬಾಯಿ