ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೇ ಪ ಪಾದ ಭಜನೆ ಮಾಡುವದೊಂದೆ ಅ.ಪ. ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ ಭವ ಸುಖಕೆ 1 ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ ಮಂಡೆ ಚಚ್ಚುತ ನಿತ್ಯ ತುಂಡು ಆದಳು ಅವಳು ಬೆಂಡು ಆದೆನುನಾನು ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ 2 ವಿತ್ತ ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ ಉಂಟುಮಾಡುವವು ವೈಕುಂಠ ನಾಯಕಕಾಯೊ 3 ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ ಮಾಡುತಲಿ ವಿಧಿಗಳನು ದೂಡುತಲಿನಿಜೀವ ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ 4 ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು 5 ಭವ ನಿಜಗುಣವೆ ಕ್ಲೇಶದಾಯಕ ವಿರಲು ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ ಏಸು ಕಡಿಯಲು ನೀರ ಸೂಸುವುದೆ ನವನೀತ ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ ಕ್ಲೇಶ ತೊಲಗದು ಎಂದು ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ 6 ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು ಅಂಬುಜಾಸನ ಸುರಕದಂಬ ಕರುಣವ ಗಳಿಸಿ ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ 7
--------------
ಕೃಷ್ಣವಿಠಲದಾಸರು
ಪಂಕಜ ಲೋಚನೆ ಕಿಂಕರನನು ಪೊರೆಯೆ ಪ ಭವ ಭಂಗ ಹಿಂಗದೆನ್ನನು ರಂಗನ ಭಗಿನಿ 1 ನಂದ ಮೂರುತಿಯಾದಾನಂದ ಮಹಾಮಾಯೆ 2 ದಾಸರಿಷ್ಟಗಳೀವ ಈಶೆಯಾಗಿರುವೆ 3 ದಣಿದರ ಭವದೊಳುದ್ಧರಿಸುವೆ (ನೀನೆ) 4 ದಾಸನ ಪೊರೆ ಶ್ರೀನಿವಾಸಾನುಜಾತೇ 5
--------------
ಸದಾನಂದರು
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ ಹಣ್ಣು ಕೊಳ್ಳಿರಯ್ಯಾನ್ನಂತ ಗುಣಮಹಿಮೆಯುಳ್ಳ ಧ್ರುವ ಹಣ್ಣು ಬಂದದೆ ನೋಡ್ಯಾನಂದೋ ಬ್ರಹ್ಮಾಪಾಟಿಯಿಂದ ಕಣ್ದೆರದು ಕೊಂಡವರು ಧನ್ಯ ಧನ್ಯರೊ 1 ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ ಚೆನ್ನಾಗಿ ಉನ್ಮನವಾಗಿ ಹಣ್ಣ 2 ಅಣ್ಣಗಳ ಬಂದು ಕಣ್ಣುಗೆಟ್ಟು ಹೋಗಬ್ಯಾಡಿ ಸಣ್ಣ ದೊಡ್ಡರೊಳಗಿಹ್ಯ ಹಣ್ಣ 3 ಉತ್ತುಮರುದ್ದೇಶವಾಗಿ ಮತ್ತೆ ಹತ್ತುಭಾರೆ ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು 4 ಬಿತ್ತಿಬೆಳೆದ ಫಲವಲ್ಲ ಹೊತ್ತುಮಾರುವದಲ್ಲ ಚಿತ್ತದೊಳಗ್ಹತ್ತಿಲಿಹ ಹಣ್ಣು 5 ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ 6 ಹಣ್ಣು ಕೊಂಡು ಮಹಿಪತಿಯ ಪುಣ್ಯ ಪೂರ್ವಾಜಿತ ತಾನೆಧನ್ಯ ಧನ್ಯವಾದ ಗುರುಕೃಪೆಯಿಂದ ಕಾಣಿರೋ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನುಹುಡಿಯ ಹೊರಳ್ಯೇನು ಬಡಕೊಂಡರೇಕಡಲಶಯನನೊಳು ದೃಢ ಭಕ್ತಿ ಇರದೆ ಪ.ಐದು ಪಾವಕನೊಳು ಮೈ ದಹಿಸಿದರೇನುಒಯ್ದು ಶ್ವಾಸವ ನೆತ್ತಿಲಿಟ್ಟರೇನುತೊಯ್ದುಟ್ಟರಿವೆ ತುದಿಗಾಲಲಿ ನಿಂತೇನುಮೈದುನಸಖನಂಘ್ರಿ ಪೂಜಿಸದನಕ 1ತೊಪ್ಪಲ ಮೆದ್ದಗ ತಪ್ಪಲ ಸೇರೇನುಉಪ್ಪವಾಸನಿಲವ ನುಂಗಲೇಸುಒಪ್ಪುವ ಇಳೆಯ ಸುತ್ತಾಡಿ ದಣಿದರೇನುದರ್ಪಕನಯ್ಯನ ಒಲುಮಿಲ್ಲದನಕ 2ಮಧ್ವಸರೋವರ ಮೀಯದ ಜನುಮೇನುಮುದ್ದುಕೃಷ್ಣನ ನೋಡದಕ್ಷಿಯೇನುಮಧ್ವೇಶ ಪ್ರಸನ್ವೆಂಕಟೇಶನೊಪ್ಪಿರದವನಿದ್ದೇನು ಇಲ್ಲದೇನೀಧರೆಗೆ 3
--------------
ಪ್ರಸನ್ನವೆಂಕಟದಾಸರು
ಮರೆಯದಿರು ಮನವೆ ಮಾಧವನ ನಮ್ಮದುರಿತದಾರಿದ್ರ್ರ್ಯವನು ಹರಿಸಿ ಹೊರೆವವನಪ.ಆಳರಿತು ಊಳಿಗವ ಕೊಂಡುಂಡು ದಣಿವಂತೆಮೇಲಾಗಿ ಜೀವವನು ಕೊಡುವ ದೇವನಕಾಲಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪುಆಲೋಚಿಸದೆ ಕರುಣಿಸುವ ಕರುಣನ 1ಮೂಢನಾಗಲಿ ಮತಿಯುಳ್ಳ ನರನಾಗಲಿಪಾಡಿದಾಕ್ಷಣ ಭೃತ್ಯನೆಂದು ಒಲಿದುಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾನಾಡಾಡಿಬಣಗುಕಲ್ಲುಗಳ ಬೇಡಿ2ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದರಿನ್ನಾರು ಹರಿಯೊಲುಮೆಯಲಿ ದಣಿದರುನಿನ್ನ ಗುರುಗಳಿಂದರಿತು ನೆರೆನಂಬು ಪ್ರಸನ್ನ ವೆಂಕಟಪತಿಯ ಪಾದವನಜವ 3
--------------
ಪ್ರಸನ್ನವೆಂಕಟದಾಸರು
ಸೂದನ ಗುಣಗಳ ಶೋಧನ ಮಾಡೋದೇ ಪಹರಿಸರ್ವೋತ್ತಮಗುರುಜೀವೋತ್ತಮಪುರಹರಸುರವರ ಪರಿವಾರಾವರಿತು ವಿಧಿಯ ನೀ ಪರಿಪರಿ ಭಜಿಪೋದೆ 1ಸೀಲಜೀವರ ಪ್ರೇಮ ಮೆಲ್ಲುವನೆಂಬುದೆ 2ಮತ್ಸರಿಸದೆ ಪರಮೋತ್ಸನಾಗೋದೆ 3ಮಾತಾಪಿತರುಸತಿಪೋತರು ಸಿರಿಸತಿನಾಥನ ಪದಯುಗದೂತರು ಎಂಬುದೆ 4ವನಜಾಕ್ಷನಗುಣಮನದಲಿ ಎಣಿಸಿದೆದಣಿದರೆ ಮುಕುತಿಯು ತನಗಿಲ್ಲೆಂಬುದೆ 5ದಾಸನಾಗಿ ಭವದಾಸೆಯ ನೀಗೋದೆ 6ನಂದದಿ ಪರರನು ನಿಂದಿಸದಿಪ್ಪೋದೆ 7ಪಾಸನ ಮಾಡುತ ಸೋಸಿಲಿ ಇರುವೋದೆ 8ಮಾಧವದೊರೆಯನು ಖೇದವು ಬರುವುದುಮೋದಕೊಡುವವೋ ಹಾದ್ಯೆಲ್ಲೆಂಬೋದೆ9ಸದಮಲಮೂರುತಿ ಹೃದಯದಿ ಕಾಂಬೋದೆ 10ಅಂಬುಜಭವನಾಂಡದಿ ಶಿರಿಬಿಂಬನೆ ಈಪರಿತುಂಬಿಹನೊಬೊಂಬೆಯ ತೆರ ಕುಣಿಸುವನೆಂಬೋದೆ 11ಶ್ರೀವರ ತಾ ನಮ್ಮ ಕಾವನುಎನುತಭಾವಿಸಿ ಈಪರಿಸೇವೆಯ ಮಾಡೋದೆ12ವಹಿಸಿದ ದಾಸ್ಯದ ವಿಹಿತನು ಎನಿಸೋದೆ 13ನಾಥನೆಂದು ಈ ರೀತಿಲಿ ಇಪ್ಪೋದೆ 14
--------------
ಗುರುಜಗನ್ನಾಥದಾಸರು
ಹೆಣಗಿದರಾಗದು ಒಣತರ್ಕದಲಿದಣಿದರೆ ಕೂಡದು ಭಕುತಿವನಜಾಕ್ಷನ ಕೃಪೆ ಮನಸ್ಸಾಕ್ಷ್ಯಾದರೆತನ ತಾನಾಹದು ಮುಕುತಿ ಪ.ಸೂಕ್ಷ್ಷ್ಮತತ್ವದಿ ದಕ್ಷನೆನಿಸದೆದೀಕ್ಷಿತ ನಾಮಿದ್ದೇನುಅಕ್ಷರಬಲದಲಿ ಲಕ್ಷವು ವೃಥಾಗುರುಶಿಕ್ಷಿಲ್ಲದ ಜನುಮೇನುಭಿಕ್ಷುಕ ಧಾನ್ಯದ ಲಕ್ಷ್ಷ್ಯದಲಿ ಪದ್ಮಾಕ್ಷನ ಪೊಗಳಿದರೇನುಕುಕ್ಷಿಯ ಲಾಭವುಅಕ್ಷಯತೋಷದಮೋಕ್ಷೋಪಾಯವದೇನು 1ದ್ರವ್ಯಾದಿವ್ರಯ ಹವ್ಯಾದಿಕ್ರಯಅವ್ಯಯಜೀವ ಸ್ವಭಾವಾಖ್ಯಕಾವ್ಯರಚನೆ ಶಬ್ದ ವ್ಯಾಕರಣದಹವ್ಯಾಸವು ಇಹ ಸೌಖ್ಯಅವ್ಯಾಕೃತ ನಾಮಾವ್ಯವಹಾರಿಲ್ಲದನವ್ಯ ಕಥಾಜನಸಖ್ಯದಿವ್ಯಮೂರುತಿ ವೇದವ್ಯಾಸಜಭವಸೇವ್ಯನ ನಿಷ್ಠೆಯೆ ಮುಖ್ಯ 2ಕಡು ಆದರದೊಳು ಕಡಲಳಿಯನ ಪದವಿಡಿಯದವನ ಶ್ರುತಿಶಾಸ್ತ್ರನಡುಹೊಳೆ ದಾಟುತ ತಡಿಯಲಿ ನಾವೆಯುಬುಡಮೇಲಾಯಿತು ವ್ಯರ್ಥದೃಢ ಪ್ರಸನ್ವೆಂಕಟ ಒಡೆಯನಾಚ್ಛಿನ್ನ ದಯಪಡೆದನುಗುರುಸುಖತೀರ್ಥನುಡಿಗಳ ಮಾಲೆಯ ತುಡುಗರ ತಮಸಕೆಬಡಿದಟ್ಟುವನು ಸಮರ್ಥ 3
--------------
ಪ್ರಸನ್ನವೆಂಕಟದಾಸರು