ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜÁ್ಞನಿ ಜೀವನಿಗೆ ಅಭಿಮಾನ ಬಹಳ ಸುಜÁ್ಞನಿಯಾ ನುಡಿಯ ಲಕ್ಷಿಸನು ಕೇಳಾ ಪ ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ ಇದ್ದುದನು ಮರೆತು ತಾ ಜಾಣನೆನಿಸುವನು ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು ಗುದ್ದಾಡುತಲಿ ತಾನು ಸುಖವ ಹುಡುಕುವನು 1 ಸಟಿಯಾದ ಸಂಸಾರ ದಿಟವೆಂದು ನಂಬುತಲಿ ಸೆಟೆದಾಡುತಿರುವೆಯೋ ತಿಳಿದು ನೋಡಾ ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು ನಟನೆಯಾ ಮಾತಲ್ಲವೆನೆ ಕೇಳನವನು 2 ಅರಿ ನೀನು ನಿನ್ನ ಅರಿವಿನಾ ಹೊರತು ನೀ ಸುಖ ಪೊಂದಲಾರೆ ಆರು ಸುಖಪಡೆದಿಲ್ಲ ಅಜÁ್ಞನದಿಂದೆನಲು ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ 3 ಬಾಳುವೆಯು ನಿಜವೆಂದು ನಂಬಲಿವನಾ ಗೋಳು ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು ಮೇಲೆ ನೀರೆರೆದಂತೆ ಎನೆ ಕೇಳನವನು 4 ಗೊಡ್ಡು ಮಾತೆಂದು ತಾ ಜÁ್ಞನಕೆರವಾಗುತಲಿ ದಡ್ಡತನವನೆ ತೋರಿ ದುಃಖಿಯಾಗುವನು ಶುದ್ಧಜÁ್ಞನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು 5
--------------
ಶಂಕರಭಟ್ಟ ಅಗ್ನಿಹೋತ್ರಿ
ನಂಬಿದೇ ನರಹರಿಯೆ ನಾ ಪ ನಂಬಿದೆನೊ ಬ್ರಹ್ಮಾದಿ ವಂದಿತ ಪೂರ್ಣ ಸುಗುಣ ಕಂದಂಬ ನಿರುಪಮ ನಿತ್ಯಮುಕ್ತಾಮುಕ್ತ ಜೀವದ ವಿಶ್ವ ಭಾಸಕ ಮುಕ್ತಿದನೇಕನೆಂಬುದಾ ಅ.ಪ ನೊಂದು ನೊಂದೆನೊ ಭವದಿ ಹಿಂದುಮುಂದನು ಕಾಣೆ ಬಂಧ ನೀಡುವ ನೀನೆ ಬಂಧಾ ಬಿಡಿಸಲುಬೇಕೊ ಸ್ವಾಮಿ ಸಂಶಯವೆಂದು ಪೊಗಳುವೆ ಪೂರ್ಣ ಪೂರ್ಣಾನಂದ ಸಜ್ಜನನಂದ ಕಾಮದ ಸಾಮ ಪೂರ್ಣಚಂದ್ರ ಸುತೇಜಭವಹರ 1 ಕರ್ಮ ಅಡ್ಡಿಯಾಗಿದೆ ಸುಖಕೆ ವಡ್ಡುವೆ ಸರ್ವಸ್ವನಿನಗೆ ದೊಡ್ಡವನು ನೀವಲಿಯೆ ಎನ್ನಯ ದಡ್ಡತನ ನಿನ್ನೇನುಮಾಳ್ಪದು ಸಡ್ಡೆಮಾಡದೆ ದೋಷರಾಶಿಯ ಮಮತೆ ತೊಲಗಿಸಿ ಗುಡ್ಡಹೊತ್ತ ಮಹಾಂತರೊಡೆಯನೇ 2 ಸಿರಿ “ಕೃಷ್ಣವಿಠಲ”ನೆ ನಿನ್ನಾಕರುಣವೆ ತಾರಕ ಇನ್ನುಮುನ್ನು ನಿನ್ನ ನಂಬಿಹೆ e್ಞÁನಮಾನವ ನೀಡ್ವದಾತನೆ ಸಣ್ಣವನ ಪಿಡಿದಿನ್ನು ನೀ ಪ್ರಸನ್ನನಾಗೆಲೊ ದೇವದೇವನೆ ನಿನ್ನದಾಸರ ಭಾಗ್ಯವೊಂದೇ ಸಾಕು ಸಾಕೈಯೆಂದು ಬೇಡುವೆ ಅನ್ಯರೊಳ್‍ರತಿ ಇಲ್ಲದಿರಲೈ ಮಾನ್ಯ ಮಧ್ವರ ಮತದಿ ನಿಲಿಸು 3
--------------
ಕೃಷ್ಣವಿಠಲದಾಸರು
ಲಜ್ಜೆ ಲಜ್ಜೆ ನಿನ್ನ ನಂಬಿ ಕೆಟ್ಟೆನಾನು ಮಾಡೊದೇನು ಪ ಗೆಜ್ಜೆ ಕಟ್ಟಿದ್ದೊರೆ ಕೃಷ್ಣ ಭಜನೆಯಲ್ಲಿ ಮಾನದಲ್ಲಿ ಅ.ಪ. ಆರು ವಲಿದು ಮಾಡೊದೇನು ಆರುಮುನಿದು ಮಾಡೊದೇನು ಚಾರು ಚಾರು ಮೆಚ್ಚಲೇನು ಭಾರಿದೇವ ವಿಶ್ವಜನಕೆ ಹರಿಯದಾಸನೆಂದು ಇನ್ನು ಈರ ಮತವ ಸಾರಿಸಾರಿನಲಿದು ನಲಿದು ಸುಖಿಪುದಕ್ಕೆ 1 ದುಡ್ಡು ಕಾಸುಬೇಡ ನಮಗೆ ದೊಡ್ಡತನವು ಬೇಡ ಹಾಗೆ ಹೆಡ್ಡತನನ ಬಿಟ್ಟು ಪಿರಿಯಕೃಷ್ಣನನ್ನು ಭಜಿಸಲಿಕ್ಕೆ ಅಡ್ಡಿಏನು ಕುರುಡು ಮನವೆ ನೆನೆದುನೆನೆದು ನೋಡುನೀನೆ ದೊಡ್ಡತನವೆ ಸತ್ಯವೀದು ದಡ್ಡತನವೆ ದುರಭಿಮಾನ 2 ಹರಿಯದಾಸದೀಕ್ಷೆ ಪಡೆಯೆ ಸುಲಭವಲ್ಲ ಸುಲಭವಲ್ಲ ದುರಿತ ರಾಶಿಪೋಗಿ ಶುದ್ಧ ಚಿನ್ನದಂತೆ ಆಗದೇನೆ ಹಿರಿದು ಕಾಣೊ ಇಂಥಾ ಜನ್ಮ ಬರಿಯ ಮಾತಿಗೊಲಿಯದೇವ ಅರಿವಿನಂತೆ ನಡೆಯದಿರಲು ತೊರೆದು ಎಲ್ಲ ದುರಭಿಮಾನ 3 ಗೆಜ್ಜೆಕಟ್ಟಿ ಕುಣಿದು ಕುಣಿಯೆ ಲಜ್ಜೆನಾಶವಾಹುದೈಯ್ಯ ಲಜ್ಜೆನಾಶವಾಗಿ ಭಕ್ತಿಯುಕ್ತಿ ಉಕ್ಕಿಹರಿಯುತಿರಲು ಅಬ್ಜಪೀಠ ಪಿತನುತಾನೆ ಅಪ್ಪಿಕೊಂಡು ನಲಿದುನಲಿವ ಅಬ್ಜನಾಭ ನಲಿದು ವಲಿಯೆ ಹೆಚ್ಚುಉಂಟೆ ಅದರಕ್ಕಿಂತ 4 ಮೆರೆಯುತಿರಲು ದುಷ್ಟಕಲಿಯು ಅನ್ಯಮಾರ್ಗ ಸಾಧ್ಯವಿಲ್ಲ ಹರಿಯ ಭಜನೆ ಒಂದೇ ದಾರಿ ಹರಿಯ ವಲಿಸೆ ಸಿದ್ಧವೀದು ಜರಿದು ವಿಷಯ ಬೆರಸಿ ಭಕ್ತಿ ಸಿರಿಯ ರಮಣ “ಕೃಷ್ಣವಿಠಲ” ಚರಣ ಯುಗವ ಭಜಿಸಿ ನೀನು ಮಾನ್ಯನಾಗೋ ಧನ್ಯನಾಗೊ 5
--------------
ಕೃಷ್ಣವಿಠಲದಾಸರು