ಭವ ಸಂಸಾರ ಶರಧಿಯ ಗುರು ಅಂಬಿಗ ದಾಟಿಸಿದಶಿವನ ಮಾಡುತಲೆನ್ನ ಮುಕ್ತಿಗೇರಿಸಿದ ಪ
ಬಯಕೆಗಳೆಂಬ ತೆರೆಯು ತಾಪತ್ರಯಗಳೆ ಲಹರಿಯುಪ್ರಿಯಗಳೆಂಬುವೆ ನೊರೆಯು ಕ್ಲೇಶವೆಂಬುದೆ ಹರಿಯು 1
ತಿಳಿವು ಇಲ್ಲದ ಮಡುವು ಕಸಿವಿಸಿ ಎಂಬುದೆ ದಡವುಬಲು ಅವಿವೇಕವೆ ಗುಡುಗು ಸುಖದುಃಖಗಳೆಂಬುವು ತೆರೆಯು 2
ಸುಳಿ 3
ಸಂದಣಿಯೆಂಬುವು ಜಲಚರವು ಸಡಗರವೆಂಬುದೆ ತಳವುಹೊಂದಿಹ ಚಿಂತೆಯೆ ದಡವು ಸ್ಥಿರವಿಲ್ಲದುದೇ ಗಡುವು 4
ಜ್ಞಾನದ ನಾವೆಗಳಿಂದ ಪ್ರಣವದ ಹುಟ್ಟುಗಳಿಂದದಾಟಿಸಿದ ಚಿದಾನಂದ ಅಂಬಿಗ ಛಲದಿಂದ 5