(ಮಂಗಳೂರಿನ ಶ್ರೀ ವೆಂಕಟರಮಣ ದೇವರನ್ನು ನೆನೆದು)
ವೈರಿ ವಿದಾರಣ ವೀರ ವೆಂಕಟಪತಿಯಾ ಪ.
ಸುಜನಾರ್ತಿ ವಾರಣಾ
ಮೃತ್ಯಬ್ಧಿತಾರಣ
ಧೀರತನದಿ ಕಠಾರಿ ನಡುವಿಗೆ ಸೇರಿ ದಟ್ಟಿಯನುಟ್ಟು ಕೊಂಕಣ
ಸ್ವಾರಿ ಬರುವನ 1
ಪಿಡಿವುತ್ತ ನಡುನಡು-
ಮತ್ತಲ್ಲಿ ಮೆರೆವಾ
ಸಿರಿನಲ್ಲ ದಾಸರ ಮಸ್ತಕದಿ ಕರ
ಪಲ್ಲವವನಿರಿಸೆಲ್ಲರನು ತಡವಿಲ್ಲದಲೆ ಸುಖದಲ್ಲಿ ಸಲಹುವÀ 2
ಮಂಗಳಾಭಿದ ಪಟ್ಟಣಾಧೀಶಾ ಪದ್ಮಾ ಪುರುಷಾ ಶ್ರೀ ವೆಂಕಟೇಶಾ
ತುಂಗವಿಧಿ ಮಾಲಿಕಾಭೂಷಾ ಅತಸೀ ಭಾಸಾ ಸ್ಮಿತಪೂರ್ಣಭಾಷಾ
ಇಂಗಿತಗಳರಿತೀವ ಸೌಖ್ಯ ತರಂಗಗಳ ಸುರ ಸಾರ್ವಭೌಮ ಕು-
ರಂಗ ನಯನಾಲಿಂಗಿತಾಂಗ ಮತಂಗಜಾವರಮೋಹಿರೂಪನ 3