ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟೀಶ ದಯಮಾಡೊ ಕಷ್ಟನಿವಾರ ಇಷ್ಟದಾಯಕ ನಿನ್ನ ನಿಷ್ಠೆಯಿಂ ಬೇಡ್ವೆ ಪ ಇಷ್ಟಭಕ್ತರು ಬೇಡಿದಿಷ್ಟಾರ್ಥಗಳ ಬೇಗ ಕೊಟ್ಟು ಸಲಹುವ ದೊರೆಯೆ ಬಿಟ್ಟಗಲದೆನ್ನ ಇಷ್ಟವನು ಪೂರೈಸಿ ಸೃಷ್ಟಿವ್ಯಾಪಾರದಿಂ ದಟ್ಟಹಾಸದಿ ಗೆಲಿಸು ಶಿಷ್ಟಜನಪಾಲ 1 ರೂಢಿಯೊಳು ಬಲು ಬೇಡಿದಣಿದೆನಯ್ಯ ನಾಡದೈವಂಗಳನು ಕಾಡಿ ಕಾಡಿ ಪಾಡಿ ಬೇಡುವೆ ನಿನ್ನ ಗಾಢ ಮಹಿಮೆಗಳರಿತು ಕಾಡದೀ ದಾಸಗೆ ನೀಡು ಜಯ ವರವ 2 ಇನ್ನು ಈ ಜಗದೊಳಗೆ ಅನ್ಯರಾಸೆನಗಿಲ್ಲ ನಿನ್ನನ್ನೆ ಕಾಡುವೆನು ನಿನ್ನನ್ನೆ ಬೇಡ್ವೆ ಅನ್ಯರಿಗೆ ಬಾಗಿಸದೆ ಮನ್ನಿಸಿ ಸಲಹಯ್ಯ ನಿನ್ನ ಕೃಪೆಯ ಗೈದು ಎನ್ನಯ್ಯ ರಾಮ 3
--------------
ರಾಮದಾಸರು