ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲಕೆ ತಕ್ಕ ಸ್ವರೂಪ ಚಲುವಿಗೊಪ್ಪುವ ವಿದ್ಯೆ ಕಲೆಗೆ ಸಲ್ಲುವ ಸುಗುಣ ಭಳಿರೆ ನಿಪುಣ ಕಿರುಕುಳದೆ ಕೈ ನೀಡಿ ಕರೆಕರೆಯ ತಂದೊಡ್ಡಿ ಹರಿಸವಾನುವಮೋಡಿ ವರನಗಾಡಿ ಜೂಜುಗಾರರಿಗೆರೆಯ ಮೋಜಿನೋಳ್ ಸಮನರಿಯ ಸೋಜಿಗಂ ಮಿಗೆತೋರ್ಕುಮಿನಿತುಸೊರ್ಕು ನಿಶಿಚರಾಂತಕನೆನುವ ಪೆಸರಾಂತುಮೀತೆರದ ವಿಷಮವರ್ತನದಿ ಸಂತಸವ ಪಡುವ ಪರಿಯಿದಚ್ಚರಿಯಾಗಿ ತೋರ್ಕುಮೆನಗೆ ಪರಿಪರಿಯ ಚಿಂತೆಗಾಕರಮಿದಾಗೆ ಉರಿಯುತಿಹುದೀಬಗೆಯೊಡಲ ಬೇಗೆ ವರ ಶೇಷಗಿರೀಶನೆ ಶರಣನೆನಗೆ
--------------
ನಂಜನಗೂಡು ತಿರುಮಲಾಂಬಾ
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ಪೇಳ ಸುಲಭವೆ ಜಗದಿ ಕಾಲಮಹಿಮೆಯ ನಮ್ಮ ಮೂಲ ಪುರುಷನ ದಿವ್ಯ ಲೀಲೆಯಲ್ಲವೆ ಎಲ್ಲ ಅ.ಪ ಮುಂದೆ ಸ್ತುತಿಪರು ಜನರು ಹಿಂದೆ ಜರಿವರು ಬಹಳ ತಂದೆ ಬಡವನ ನೀನ್ಯಾರೆಂದು ಕೇಳ್ವರು ಮನದಿ 1 ನೀಚಕೃತ್ಯವ ಮನದಿ ಯೋಚಿಸುತ್ತಲಿ ಸತತ ನಾಚಿಕೆಯನು ಪೊಂದದೆಲೆ ಯಾಚಿಸುವರು ದ್ರವ್ಯವನು 2 ಸತಿಯರೆಲ್ಲರು ಶುದ್ಧಮತಿಯ ತೊರೆಯುತ ತಮ್ಮ ಪತಿಯ ಜರಿವರು ಮುದದಿ ಇತರರನ್ನು ಕೋರುವರು 3 ಕಾಲ ಕಳೆದು ಖ್ಯಾತಿ ಪಡೆವರು ಬಹಳ ಸೋತು ತಮ್ಮ ದ್ರವ್ಯಗಳ ಪಾತಕಗಳ ಮಾಡುವರು4 ಸ್ನಾನ ಜಪತಪ ಪೂಜೆ ಏನನರಿಯರು ದುಷ್ಟ ಪಾನಗಳನು ಸೇವಿಸುತ ಮಾನ ದೂರ ಮಾಡುವರು 5 ಹರಿಯ ಮಹಿಮೆಗಳನ್ನು ಅರಿಯದಂತೆ ಸಂತತವು ಧರೆಯ ದುಷ್ಟ ಭೋಗದಲಿ ಕುರಿಗಳಂತೆ ಬೀಳುವರು 6 ಘನ್ನ ಧರ್ಮಗಳೆಲ್ಲ ಶೂನ್ಯವಾಗಿರೆ ಸುಪ್ರ ಸನ್ನ ಹರಿಯ ಸೇವಕರು ಇನ್ನು ಇರುವುದಚ್ಚರಿಯು7
--------------
ವಿದ್ಯಾಪ್ರಸನ್ನತೀರ್ಥರು
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು
ಷಟ್ಪದಿ ಭೃಂಗ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ 1 ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ 2 ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ 3 ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ 4 ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ 5ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ 6 ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ 7 ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ 8 ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ 9 ತಿರುಗುತಲಿಹರು ತಮ್ಮಯ ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ 1 ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ 11 ಸೂತ್ರ ಖರೆ 12 ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ 13 ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ 14 ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿಜ್ಞಾನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ15ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ 16 ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ ಜ್ಞಾನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ ಜ್ಞಾನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ 17 ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು 18 ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ 19 ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ 20 ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು 21
--------------
ಕೃಷ್ಣವಿಠಲದಾಸರು