ತುಂಗಾತೀರದಿ ಕಂಗೊಳಿಸುವ ಮುನಿ
ಪುಂಗವರಾಯರ ನಯನದಿ ನೋಡೆ | ಮನದಿ
ಕೊಂಡಾಡೆ ವರಗಳ ಬೇಡೆ ಪ
ಆದಿ ಯುಗದಿ ಪ್ರಹ್ಲಾಲದನೆನಿಸಿ ಕ
ಯಾದವಿನುದರದಿ ಜನಿಸುತಲಿ | ಸಖಿಜನಿಸುತಲಿ
ಮಾಧವ ಪರನೆಂದುಮೋದದಿ
ಸ್ತಂಭದಿ ತೋರಿದ ಧೀರನೆ 1
ಅದ್ವೈತಾಟವಿ ದಗ್ಧಕೃತಾನಲ
ಮಧ್ವಮತಾಬ್ಧಿಗೆ ಭೇಶನೆಂದೆನಿಸಿ
ಸದ್ವೈಷ್ಣ ವರುದ್ಧಾರಕನಾದ ಪ್ರ
ಸಿದ್ಧನಾದ ವ್ಯಾಸಕರ್ಮಂದ ಕುಲೇಂದ್ರನೆ 2
ಧರಣಿ ತಳದಿ ರಾಘವೇಂದ್ರ ಸುನಾಮದಿ
ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ | ಪರಿಮಳ ರಚಿಸಿ
ಕರುಣದಿ ದ್ವಿಜರಿಗೆ ಎರದು ಪೊರೆವಗುರು
ಮರುತಾವೇಶದ ದೇವಸ್ವಭಾವನೆ 3
ಸ್ವಾಂತÀದಿ ಭಜಿಪರ ಚಿಂತೆಯ ಕಳೆಯಲು
ಚಿಂತಾಮಣಿಯಂತೆ ಸತತ ಸಖಿಯೇ | ಸಂತತ ಸಳಿಯೇ
ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ
ನಿಂತ ಪರಮ ಸುಶಾಂತ ಮೂರುತಿಯೆ 4
ವಂದಿಸಿ ಸ್ತವಿಸುವ ವಂದ್ಯಾಂಧಕರಿಗೆ
ಕಂದ ರಕ್ಷಿಗಳ ಕರುಣಿಸಿಹರೇ | ಕರುಣಿಸಿಹರೇ
ಇಂದು ಧರಾಮರ ವಂದಿತ ಶಾಮ
ಸುಂದರ ವಿಠಲನ ದಾಸೋತ್ತಮನೆ 5