ಮಕ್ಕಳಿಂದಲೆ ಗತಿಯು ಎಂಬುದೇನಿರಯ್ಯಮಕ್ಕಳಿಲ್ಲದವರಿಗೆ ಗತಿಯಿಲ್ಲವೇ ಪ
ಸತ್ಯ ಶೌಚಾಚಾರ ಶಮೆದಮೆಗಳಳವಟ್ಟುನಿತ್ಯ ಕಾಲದಿ ಹರಿಯ ಮನದಿ ನೆನೆದುಅತ್ಯಂತ ಸಂತುಷ್ಟನಾದರಿಂದಲ್ಲದಲೆಹೆತ್ತವರಿಂದ ಗತಿಯು ಎಂಬುದು ನಗೆಯಲ್ಲವೇ 1
ಅಣುಮಹತ್ತಿಲಿ ಶುಚಿಯು ಅಶುಚಿಯಾಗಿಪ್ಪಂಥಎಣಿಕೆ ಎಲ್ಲವನು ತಾಯೆನಿಸಿ ತಿಳಿದುತ್ರಿಣಯನಾಗಿಹೆನೆಂದು ತಾನೆ ತಾನಾಗದಲೆಕ್ಷಣಿಕ ಸುತರಿಂ ಗತಿಯು ಎಂಬುದು ನಗೆಯಲ್ಲವೆ 2
ಸ್ನಾನ ಜಪತಪ ತಿಲೋದಕ ಶ್ರಾದ್ಧ ತರ್ಪಣದಕ್ಷೀಣ ಕರ್ಮಗಳಿಂದ ಮುಕುತಿಯಹುದೇಮಾನನಿಧಿ ಚಿದಾನಂದ ಗುರುಪಾದ ಪದ್ಮವನುನ್ಯೂನವಿಲ್ಲದೆ ನಂಬಿ ಸುಖಿಯಾದರಲ್ಲವೆ3