ಹೆಣ್ಣೆನವರ ಹೆಮ್ಮೆ ನೋಡಿರೀ ಜನರೆ ನೀವು ಪ
ಕಣ್ಣು ಸನ್ನೆ ಮಾಡಿ ಮಾಡಿ ಕಾರ್ಯವನ್ನು ತೂಗಿಸುವರು ಅ.ಪ
ಅರ ಪಾವು ರವೆಯು ಶಾವಿಗೆ ಮಾಡಿ
ಭಾವದಲ್ಲಿ ಹಿಗ್ಗಿಗ್ಗಿ
ತಾವು ಪ್ರಸ್ತಮಾಡುತಿಹರು 1
ಭಕ್ಷ್ಯ ಭೋಜ್ಯವೆಂಬುದದು
ಲಕ್ಷ್ಯವಿಲ್ಲ ಮಾತಿನಲ್ಲಿ
ಕುಕ್ಷಿತುಂಬ ಭೋಜನವಿಲ್ಲ
ದಕ್ಷಿಣೆಯು ದ್ವಿಜರಿಗೆ ಕಾಣೆ 2
ವರಗೆ ಕೊಟ್ಟ ವಸ್ತ್ರ ಪಾತ್ರೆ
ವರ್ಣಿಸಲೊಂದು ಬಾಯಿ ಸಾಲದು
ಗುರುರಾಮ ವಿಠಲನೆ ಬಲ್ಲ 3