ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತಿನೊಳು ಕಡುಜಾಣ ನೀತಿಯೆಂಬುದ ಕಾಣ ಪ್ರೀತಿಯಿಲ್ಲದ ಪ್ರಾಣನಾಥನಮ್ಮ ಕಪಿಜನಗಳೊಡನಾಡಿ ಚಪಲಚಿತ್ತನುಮಾದ ಕೃಪೆಯಿಲ್ಲವೆಳ್ಳನಿತು ಕೃಪಣನಕಟ ಸ್ತ್ರೀಹತ್ಯ ನರಹತ್ಯ ಬ್ರಹ್ಮಹತ್ಯವಗೈದ ಸಾಹಸಿಯೆದೇನೆಂಬೆ ಘನನಿತಂಬೆ ಪಕ್ಷಪಾತಿಗಳೊಳಗೆ ಈಕ್ಷಿಸಲ್ ಧರೆಯೊಳಗೆ ದಕ್ಷನೀತಗೆ ಸರಿಯೆ ಪೇಳೆ ಸಖಿಯೆ ಶರವೊಂದು ನುಡಿಯೊಂದರಿಂದ ನಲಿವ ತಿರುಕ ಹಾರುವರೊಡನೆ ಚರಿಸುತಿರುವ ಪರಮಸಾತ್ವಿಕ ಮೂರ್ತಿಯೆಂದು ನುಡಿವ ವರಶೇಷಗಿರಿವಾಸ ನೆಂದುಮೆರೆವ
--------------
ನಂಜನಗೂಡು ತಿರುಮಲಾಂಬಾ