ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿದೇವಿ ಹರಿಯ ದಯವು | ಆವಾವ ಪರಿ ಪಾಲಿಸೆ ಪ ಆಲದೆಲೆಯಲಿ ಅಂದು | ನಿನ್ನಯ ಮ್ಯಾಲೆ ಮಲಗಿಪ್ಪ ಹರಿಯ ತೋಳು ಬಿಗಿದಾಲಂಗಿಸಿ | ಸೃಷ್ಟಿಯ ಲೀಲೆಯನು ಮಾಡಿಸಿದ ತಾಯೆ 1 ವಕ್ಷವಾಲಯವ ಮಾಡಿದೆ | ಆವಾಗ ದಕ್ಷಣಾದೇವ್ಯೆನಿಸಿದೆ ಲಕ್ಷ್ಯವಿಲ್ಲದೆ ಭಾಗ್ಯವ | ಭಕ್ತರಿಗೆ ವೀಕ್ಷೆಯಿಂದಲ್ಲಿ ಈವೆ 2 ದೇವತಾಜನ ಸ್ತುತಿಸೆ | ನೀ ಎನ್ನ ಭಾವ ಹರಿಯಲಿ ನಿಲ್ಲಿಸೆ ಕಾವ ಭಾರವು ನಿನ್ನದೆ | ಶ್ರೀ ವಾಸು ದೇವವಿಠಲನ್ನ ರಾಣಿ 3
--------------
ವ್ಯಾಸತತ್ವಜ್ಞದಾಸರು