ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(40ನೇ ವರ್ಷದ ವರ್ಧಂತಿ) ಕ್ಷಿಪ್ರ ಪ್ರಸಾದಕರ ದೊರೆಯೆ ಅಜಭವಾ- ದ್ಯ ಪ್ರಮೇಯಾ ಸಂತಸುಗುಣಾಬ್ಧಿ ಹರಿಯೆ ಪ. ಇಳೆಯೊಳಗೆ ನಾ ಬಂದು ಕಳೆದೆ ನಾಲ್ವತ್ವರುಷ ಉಳಿದ ಪರಿಮಿತಿಯರಿಯೆ ಗಳಿತವಾಯಿತು ದೇಹ ಬಳಲಿದೆನು ಬಯಲಾಸೆ ಬಲೆಯೊಳಿಂದಿನವರೆಗು ನಳಿನನಾಭನೆ ನಿನ್ನ ನಂಬಿದೆನು ಮನವರಿತು ಮುಳುಗಲಾರೆನು ಮೋಹ ಕಡಲ ಮಾಧವನೆ ತಿಳಿಯದೆ ನಿನಗೆ ಪೊನ್ನೊಡಲ ಮುಂದಿಂತು ದುರಿತ ಸಿಡಿಲ 1 ದೇವಾಧಿದೇವ ತವ ಸೇವಾನುಕರನ ಹೊ- ನ್ನಾವರದೊಳಿರಿಸಲಿನ್ಯಾವನರಸಲಿ ಕೃಷ್ಣ ಭಾವ ಶುದ್ಧಿಯನರಿತು ಭಜನೆ ಮಾಡುವದೆಂತು ಸಾವಕಾಶವಿದ್ಯಾಕೆ ಸಾಹಿತ್ಯಗಳು ಜೋಕೆ ನಿತ್ಯ ಕೈಗೊಂಬ ಕೀರ್ತಿ ಸಂ- ಭಾವನಾ ಸುಖವ ನಾನುಂಬಾ ತರವ ಸಂ- ಭಾವಿಸು ದಯಾಂಬೋಧಿ ದೀನಾವಲಂಬ 2 ರಕ್ಕಸಾಂತಕ ನೀನೆ ದಿಕ್ಕೆಂದು ನಿನ್ನಿದಿರು ಬಿಕ್ಕಿ ಬಿರಿದಳಲುವೆನು ಸೊಕ್ಕಿ ಕಾಡುವ ದೊಡ್ಡ ಜಕ್ಕಣಿಯ ಕಾಲಿಂದ ತಿಕ್ಕಿ ತೀರಿಸು ನಿನಗ- ಶಕ್ಯವಾವುದು ಸ್ವರ್ಣಪಕ್ಷ್ಯೇಂದ್ರಗಮನಕರ ಚಕ್ರಭೂಷಣ ವೆಂಕಟೇಶದಾಸ ಜನ ಕಕ್ಕರದಿ ತೋರು ಸಂತೋಷ ಭಕ್ತಿಫಲ ದಕ್ಕುವಂದದಿ ಮಾಡು ದುರಿತಾಬ್ಧಿಶೋಷ 3
--------------
ತುಪಾಕಿ ವೆಂಕಟರಮಣಾಚಾರ್ಯ